ನವದೆಹಲಿ: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಬಾಯಲ್ಲಿ ಸ್ಪೋಟಗೊಂಡ ಹಿನ್ನಲೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬುಧುವಾರದಂದು ವಿಷ ಸೇವಿಸಿದ ಪರಿಣಾಮ ಸಂಜೆ ಅವರನ್ನು ಜೆ.ಎನ್ ವೈದಕೀಯ ಕಾಲೇಜಿಗೆ ದಾಖಲಾಗಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಚಿಕಿತ್ಸೆಯನ್ನು ಪ್ರಾರಂಭಿಸಿ ಬಾಯಲ್ಲಿ ಪೈಪ್ ನ್ನು ಹಾಕಿದಾಗ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪೋಟ ಸಂಭವಿಸಿರುವ ದೃಶ್ಯ ಸೆರೆಯಾಗಿದೆ.
ಆಕೆಗೆ ಚಿಕಿತ್ಸೆಯನ್ನು ನೀಡಿರುವ ವೈದ್ಯರು ಮಹಿಳೆ ಸಲ್ಫ್ಯೂರಿಕ್ ಆಮ್ಲವನ್ನು ಸೇವಿಸಿದ್ದಾರೆ ಅದು ಆಮ್ಳಜನಕಕ್ಕೆ ಸಂಪರ್ಕಕ್ಕೆ ಬಂದ ನಂತರ ಅದು ಸ್ಪೋಟಗೊಂಡಿದೆ ಎಂದು ತಿಳಿಸಿದ್ದಾರೆ.ಆದರೆ ಈ ಘಟನೆಯ ಬಗ್ಗೆ ಇನ್ನು ಪರಿಶೀಲಿಸಬೇಕಾಗಿದೆ ಆಗಲೇ ಇದರ ಬಗ್ಗೆ ತಿಳಿಯುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.