ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಮೀಟೂ ಅಭಿಯಾನ ಕುರಿತಾಗಿ ಬಿಜೆಪಿ ಶಾಸಕಿ ಉಷಾ ಠಾಕೂರ್ ಮಾತಾನಾಡುತ್ತಾ "ಮಹಿಳೆಯರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ರಾಜೀ ಮಾಡಿಕೊಳ್ಳುತ್ತಾರೆ" ಎಂದು ಕಿಡಿಕಾರಿದ್ದಾರೆ.
"ವೈಯಕ್ತಿಕ ಲಾಭಗಳು ಮತ್ತು ಪ್ರಚಾರಗಳಿಗಾಗಿ ಕೆಲವು ಮಹಿಳೆಯರು ತಮ್ಮ ಮೌಲ್ಯಗಳು ಮತ್ತು ಸಿದ್ಧಾಂತಗಳ ಮೇಲೆ ರಾಜಿ ಮಾಡುತ್ತಾರೆ.ಇದರಿಂದಾಗಿ ಮಹಿಳೆಯರು ತೊಂದರೆಯಲ್ಲಿ ಅಂತ್ಯಗೊಳ್ಳುತ್ತಾರೆ ಆದ್ದರಿಂದಾಗಿ ಮೀಟೂ ಅಭಿಯಾನವನ್ನು ತುಂಬಾ ತಪ್ಪಾಗಿ ಬಳಸಲಾಗುತ್ತಿದೆ."ಎಂದು ಇಂದೋರ್ ನ ಬಿಜೆಪಿ ಶಾಸಕಿ ಉಷಾ ಠಾಕೂರ್ ಹೇಳಿದರು.
ಅಷ್ಟಕ್ಕೂ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲ ಬಾರಿಗೆಯೇನಲ್ಲ.ಸೆಪ್ಟೆಂಬರ್ 2014 ರಲ್ಲಿ ನವರಾತ್ರ ಗರ್ಭಾ ಸ್ಥಳಗಳಲ್ಲಿ ಮುಸ್ಲಿಂ ಯುವಕರನ್ನು ನಿಷೇಧಿಸಿದ ನಂತರ ಅವರು ಭಾರಿ ಸುದ್ದಿಗೆ ಒಳಗಾಗಿದ್ದರು.ಇದಾದ ನಂತರ ಅವರು ಈದ್ ಅಲ್ ಅಧಾ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ತ್ಯಾಗ ಮಾಡಿ ಇಲ್ಲವೇ ಮುಗ್ದ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸಿ ಎಂದು ಮುಸ್ಲಿಮರಿಗೆ ಕರೆ ನೀಡಿದ್ದರು.
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗಿದ್ದ ವಿವಾದಾತ್ಮಕ ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಅವರ ಪೋಟೋಗೆ ಆರತಿ ಮಾಡಿ ಉಷಾ ಠಾಕೂರ್ ವಿವಾಧಕ್ಕೆ ಒಳಗಾಗಿದ್ದರು.