ನವದೆಹಲಿ: ಏಕ ಬಳಕೆ ಪ್ಲಾಸ್ಟಿಕ್ಗೆ ನಿಷೇಧ ಹೇರುವ ಭಾರತದ ನಿರ್ಧಾರವನ್ನು ಪ್ರಧಾನಿ ಮೋದಿ ಮತ್ತೆ ಪುನರುಚ್ಚರಿಸಿದ್ದು, ಈ ಸಂದರ್ಭದಲ್ಲಿ ಇದಕ್ಕೆ ವಿಶ್ವವೂ ಕೂಡ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದರು.
ಗ್ರೇಟರ್ ನೋಯ್ಡಾದಲ್ಲಿ ನಡೆದ ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆಯ ವಿರುದ್ಧದ ಯುದ್ಧದೊಂದಿಗೆ ಮಾನವ ಸಬಲೀಕರಣವು ಸಂಬಂಧ ಹೊಂದಿದೆ ಮತ್ತು ಬದಲಾವಣೆಯನ್ನು ಉಂಟುಮಾಡಲು ಜನರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿನಲ್ಲಿ ಎಲ್ಲ ಜಾಗತಿಕ ನಾಯಕರು ಅರಿತುಕೊಳ್ಳಬೇಕೆಂದು ಹೇಳಿದರು.
ವಿಶ್ವಸಂಸ್ಥೆ ಮರುಭೂಮಿಕರಣ ತಡೆಗೆ ಸಂಬಂಧಿಸಿದ 14ನೇ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ 'ನಾವು ಯಾವುದೇ ಕಾರ್ಯಗಳನ್ನು ಪರಿಚಯಿಸಬಹುದು ಆದರೆ ಅದರ ನೈಜ ಬದಲಾವಣೆಯು ತಳಮಟ್ಟದಲ್ಲಿ ತಂಡದ ಮೂಲಕವಾಗಿರುತ್ತದೆ ಎಂದರು. ಸಮಾವೇಶದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಪಕ್ಷಗಳ ಸಮ್ಮೇಳನದ (ಕೋಪ್) ಅಧ್ಯಕ್ಷತೆಯನ್ನು ಭಾರತವು ಎರಡು ವರ್ಷಗಳ ಅವಧಿಗೆ ವಹಿಸಿಕೊಳ್ಳಲು ಸಿದ್ಧವಾಗಿದೆ, ಮತ್ತು ಹವಾಮಾನ ಬದಲಾವಣೆಯ ವಿರುದ್ಧದ್ದ ಜಾಗತಿಕ ಹೋರಾಟಕ್ಕೆ ಭಾರತವು ಪರಿಣಾಮಕಾರಿ ಕೊಡುಗೆ ನೀಡಲು ಎದುರು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿಜಿಯವರ ಜಯಂತಿ ಅಕ್ಟೋಬರ್ 2 ರೊಳಗೆ ಏಕಬಳಕೆ ಪ್ಲಾಸ್ಟಿಕ್ ಗೆ ವಿದಾಯ ಹೇಳುವ ಸಂಕಲ್ಪವನ್ನು ಘೋಷಿಸಿತ್ತು. ಈಗ ಇತರ ಜಾಗತಿಕ ರಾಷ್ಟ್ರಗಳು ಕೂಡ ಇದೇ ಮಾದರಿಯಲ್ಲಿ ಕಾರ್ಯವನ್ನು ಕೈಗೊಳ್ಳಬೇಕೆಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಒತ್ತಾಯಿಸಿದರು.