ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಯೋಗಿ ಸರ್ಕಾರ ರಾಜ್ಯದ ರೈತರಿಗೆ ಭರ್ಜರಿ ಗಿಫ್ಟ್ ನೀಡಿದೆ. ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ರೈತರಿಗೆ ವಿದ್ಯುತ್ ಬೆಲೆಯನ್ನು ಅರ್ಧದಷ್ಟು ಇಳಿಸುವುದಾಗಿ ಘೋಷಿಸಿದ್ದಾರೆ.
ರೈತರ ಆದಾಯವನ್ನು (Farmers Income) ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ, ಖಾಸಗಿ ಕೊಳವೆ ಬಾವಿ ಸಂಪರ್ಕಗಳ ವಿದ್ಯುತ್ ದರವನ್ನು (Electricity Price) ಶೇಕಡಾ 50 ರಷ್ಟು ಕಡಿಮೆ ಮಾಡುವ ಮೂಲಕ ದೊಡ್ಡ ಪರಿಹಾರ ನೀಡಿದ ಸಿಎಂ ಯೋಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
PM श्री @narendramodi जी के संकल्प किसानों की आय दोगुनी करने की दिशा में निजी नलकूप कनेक्शनों की विद्युत दरों में 50% की कमी कर बड़ी राहत देने के लिए CM श्री @myogiadityanath जी का हार्दिक अभिनंदन। (1/3) #सोच_ईमानदार_काम_दमदार #फिर_एक_बार_भाजपा_सरकार @BJP4India @BJP4UP
— Shrikant Sharma (@ptshrikant) January 7, 2022
ಇದನ್ನೂ ಓದಿ- ದೆಹಲಿಯಲ್ಲಿನ ಕೊರೊನಾ ಪ್ರಕರಣಗಳಲ್ಲಿ ಭಾರಿ ಹೆಚ್ಚಳ...!
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಇಂಧನ ಸಚಿವ ಶ್ರೀಕಾಂತ್ ಶರ್ಮಾ (Shrikant Sharma) ತಮ್ಮ ಮುಂದಿನ ಟ್ವೀಟ್ನಲ್ಲಿ, 'ಖಾಸಗಿ ಕೊಳವೆ ಬಾವಿಗಳ ಹೊಸ ಬಿಲ್ಗಳಲ್ಲಿ, ಗ್ರಾಮೀಣ ಮೀಟರ್ ಸಂಪರ್ಕಗಳಲ್ಲಿನ ವಿದ್ಯುತ್ ದರವನ್ನು ರೂ. 2/ಯುನಿಟ್ನಿಂದ ರೂ 1/ಯುನಿಟ್ಗೆ ಮತ್ತು ಸ್ಥಿರ ಶುಲ್ಕವನ್ನು ರೂ. 70 ರಿಂದ ಪ್ರತಿ ಗಂಟೆಗೆ ರೂ. 35/ಗಂಟೆ ಇಳಿಸಲಾಗುವುದು. ಮೀಟರ್ ಇಲ್ಲದ ಸಂಪರ್ಕದಲ್ಲಿ, ಸ್ಥಿರ ಶುಲ್ಕವು ರೂ 170/ಗಂಟೆ ಬದಲಿಗೆ ರೂ. 85/ಗಂಟೆಯಾಗಿರುತ್ತದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.
निजी नलकूप के नये बिलों में ग्रामीण मीटर्ड कनेक्शन में बिजली दर 2 रुपये/ यूनिट से घटकर 1 रुपये/ यूनिट व फिक्स चार्ज 70 रुपये प्रति हॉर्स पावर से घटकर 35 रुपये/हॉर्स पावर होगा। अनमीटर्ड कनेक्शन में फिक्स चार्ज 170 रुपये/ हॉर्स पावर की जगह 85 रुपये/हॉर्स पावर होगा।(2/3) @BJP4India
— Shrikant Sharma (@ptshrikant) January 7, 2022
ಇದನ್ನೂ ಓದಿ- EPS ಬಿಗ್ ಅಪ್ಡೇಟ್! ನಿಮ್ಮ ನಿವೃತ್ತಿಯ ನಂತರ ಪಿಂಚಣಿ ಡಬಲ್ ಆಗುವ ಸಾಧ್ಯತೆ!
ಯುಪಿ (Uttar Pradesh) ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ಮತ್ತೊಂದು ಟ್ವೀಟ್ನಲ್ಲಿ ನಗರ ಮೀಟರ್ ಸಂಪರ್ಕಗಳಲ್ಲಿ ವಿದ್ಯುತ್ ದರವನ್ನು ರೂ. 6/ಯೂನಿಟ್ನಿಂದ ರೂ 3/ಯೂನಿಟ್ಗೆ ಇಳಿಸಲಾಗುವುದು ಮತ್ತು ಸ್ಥಿರ ಶುಲ್ಕವನ್ನು ರೂ 130/ಗಂಟೆಯಿಂದ ರೂ. 65/ಗಂಟೆಗೆ ಇಳಿಸಲಾಗುವುದು ಎಂದು ಬರೆದಿದ್ದಾರೆ. ಎನರ್ಜಿ ಎಫಿಶಿಯಂಟ್ ಪಂಪ್ನಲ್ಲಿ, ದರವನ್ನು ರೂ 1.65/ಯೂನಿಟ್ನಿಂದ 83 ಪೈಸೆ/ಯೂನಿಟ್ಗೆ ಇಳಿಸಲಾಗುತ್ತದೆ ಮತ್ತು ಸ್ಥಿರ ಶುಲ್ಕ ರೂ 70/ಗಂಟೆ ಬದಲಿಗೆ ರೂ 35/ಗಂಟೆಯಾಗಿರುತ್ತದೆ ಎಂದವರು ತಿಳಿಸಿದ್ದಾರೆ.
शहरी मीटर्ड कनेक्शन में बिजली दर 6 रुपये/ यूनिट से घटकर 3 रुपये/यूनिट व फिक्स चार्ज 130 रुपये/ हॉर्स पावर से घटकर 65 रुपये/हॉर्स पावर होगा। एनर्जी एफिशिएंट पंप में दर 1.65 रुपये/ यूनिट से घटकर 83 पैसे/यूनिट व फिक्स चार्ज 70 रुपये/हॉर्स पावर की जगह 35 रुपये/हॉर्स पावर होगी। (3/3)
— Shrikant Sharma (@ptshrikant) January 7, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.