ಶೀಘ್ರವೇ YouTube ತರಲಿದೆ TikTok ನಂತಹ ವೈಶಿಷ್ಟ್ಯ 'Shorts'

ಶಾರ್ಟ್ ವಿಡಿಯೋ ಆಪ್ ವಿಭಾಗದಲ್ಲಿ 'TikTok'ಗೆ ಟಕ್ಕರ್ ನೀಡಲು ಶೀಘ್ರವೇ YouTube ತನ್ನ 'Shorts' ಹೆಸರಿನ ವಿಡಿಯೋ ಮೇಕಿಂಗ್ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವರ್ಷದ ಕೊನೆಯಲ್ಲಿ YouTube ತನ್ನ ಈ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.  

Last Updated : Apr 2, 2020, 07:52 PM IST
ಶೀಘ್ರವೇ YouTube ತರಲಿದೆ TikTok ನಂತಹ ವೈಶಿಷ್ಟ್ಯ 'Shorts' title=

ಗೂಗಲ್ ಮಾಲೀಕತ್ವದ ಕಂಪನಿ ಯೌತುಬೆ ತನ್ನ ಮೊಬೈಲ್ ಆಪ್ ನಲ್ಲಿ TikTok ನಂತಹ ಸೌಕರ್ಯ ಒದಗಿಸುವ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಸಂಸ್ಥೆ YouTube Shorts ಹೆಸರಿನ ವಿಶೇಷ ವರ್ಶನ್ ಬಿಡುಗಡೆಗೆ ಸಿದ್ಧತೆಯಲ್ಲಿ ತೊಡಗಿದೆ. ಇದರಲ್ಲಿ ಬಳಕೆದಾರರಿಗೆ TikTok ಮಾದರಿಯಲ್ಲಿಯೇ ಶಾರ್ಟ್ ವಿಡಿಯೋ ತಯಾರಿಸಿ ಅಪ್ಲೋಡ್ ಮಾಡುವ ಸೌಕರ್ಯ ಒದಗಿಸಲಾಗುವುದು ಎಂದು ಸಂಸ್ಥೆ ಪ್ರಕಟಿಸಿದೆ.

9to5Google ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, YouTube ಶಾರ್ಟ್ಸ್ ಗಾಗಿ ಗೂಗಲ್ ಮಾಲೀಕತ್ವದ ಕಂಪನಿ YouTube ಲೈಸನ್ಸ್ ಪಡೆಯಲಾಗಿರುವ ಮ್ಯೂಸಿಕ್ ಹಾಗೂ ಹಾಡುಗಳನ್ನು ತಯಾರಿಸಲು ಅನುಮತಿ ನೀಡಲಿದೆ ಎನ್ನಲಾಗಿದೆ. ಆದರೆ, ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಅಷ್ಟೇ ಅಲ್ಲ ಈ ವಿಡಿಯೋಗಳಿಗೆ YouTube ಎಷ್ಟು ಅವಧಿಯನ್ನು ನಿಗದಿಪಡಿಸಲಿದೆ ಎಂಬುದು ಕೂಡ ಇನ್ನೂ ತಿಳಿದುಬಂದಿಲ್ಲ. TikTok ಪ್ಲಾಟ್ಫಾರ್ಮ್ ಮೇಲೆ ಬಳಕೆದಾರರಿಗೆ 15 ರಿಂದ 60 ಸೆಕೆಂಡ್ ಗಳ ವಿಡಿಯೋ ತಯಾರಿಕೆಗೆ ಅನುಮತಿ ನೀಡಲಾಗಿದೆ.

YouTube Shorts ಅಂಡ್ರಾಯಿಡ್ ಹಾಗೂ ಐಓಎಸ್ ಪ್ಲಾಟ್ಫಾರಂಗಳ ಮೇಲೆ ಮೊಬೈಲ್ ಆಪ್ ರೂಪದಲ್ಲಿ ಲಭ್ಯವಿರಲಿದೆ. ಇದನ್ನು ಡೆಸ್ಕ್ ಟಾಪ್ ಆಪ್ ಆಗಿಸಲು ಯುಟ್ಯೂಬ್ ಯಾವುದೇ ನಿರ್ಣಯ ಕೈಗೊಂಡಿಲ್ಲ. ಮಾರುಕಟ್ಟೆಯಲ್ಲಿ YouTube Shorts, TikTokಗೆ ನೇರ ಹಾಗೂ ತೀವ್ರ ಪೈಪೋಟಿ ನೀಡಲಿದೆ ಎಂಬ ಅಭಿಪ್ರಾಯಗಳು ಈಗಾಗಲೇ ಕೇಳಿಬರಲಾರಂಭಿಸಿವೆ.

ಆದರೆ, YouTube ಜಾರಿಗೊಳಿಸುತ್ತಿರುವ ಈ ರೀತಿಯ ಮೊದಲ ವೈಶಿಷ್ಟ್ಯವಲ್ಲ. 2018ರಲ್ಲಿ YouTube ತನ್ನ ಇನ್ಸ್ಟಾಗ್ರಾಮ್ ಹಾಗೂ  ಸ್ನ್ಯಾಪ್ ಚಾಟ್ ಮಾದರಿಯಲ್ಲಿ 'ಸ್ಟೋರೀಸ್' ವೈಶಿಷ್ಟ್ಯವನ್ನು ಪರಿಚಯಿಸಿತ್ತು. 10,000 ಕ್ಕೊ ಅಧಿಕ ಗ್ರಾಹಕರ ಜೊತೆ YouTube ಚಂದಾದಾರರು ತಮ್ಮ ಸ್ಟೋರೀಸ್ ಗಳನ್ನೂ ಅಪ್ಲೋಡ್ ಮಾಡಬಹುದಾಗಿದೆ. ಆದರೆ, ಇನ್ಸ್ಟಾಗ್ರಾಮ್ ಹಾಗೂ ಸ್ನ್ಯಾಪ್ ಚಾಟ್ ಹೋಲಿಕೆಯಲ್ಲಿ YouTube ಸ್ಟೋರೀಸ್ ಕೇವಲ ಒಂದು ವಾರ ಮಾತ್ರ ಬಳಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಈ ವರ್ಷದ ಕೊನೆಯಲ್ಲಿ ಯುಟ್ಯೂಬ್ ತನ್ನ 'Shorts' ವೈಶಿಷ್ಟ್ಯ ಪರಿಚಯಿಸುವ ನಿರೀಕ್ಷೆ ಇದೆ.
 

Trending News