ಜನರಲ್ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತೀರಾ... ಇಲ್ಲಿದೆ ಮಹತ್ವದ ಮಾಹಿತಿ

Indian Railway Rules: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ನಿಯಮಗಳನ್ನು ರೂಪಿಸುತ್ತಲೇ ಇರುತ್ತದೆ. ಐ‌ಆರ್‌ಸಿ‌ಟಿ‌ಸಿ ರೈಲಿನಲ್ಲಿ ಜನರಲ್ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೂ ಕೂಡ ಹಲವು ಅನುಕೂಲಗಳನ್ನು ಕಲ್ಪಿಸಿದೆ. 

Written by - Yashaswini V | Last Updated : Feb 20, 2025, 06:26 PM IST
  • ಸಾಮಾನ್ಯ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆಗಳನ್ನು ತರಲು ರೈಲ್ವೆ ಸಚಿವಾಲಯ ಹೊಸ ಮಾನದಂಡಗಳನ್ನು ಪರಿಚಯಿಸಲು ಮುಂದಾಗಿದೆ.
  • ಇದೀಗ ರಿಸರ್ವೇಷನ್ ಟಿಕೆಟ್‌ಗಳಲ್ಲಿ ಇರುವಂತೆಯೇ ಸಾಮಾನ್ಯ ಟಿಕೆಟ್‌ನಲ್ಲಿಯೂ ರೈಲಿನ ಹೆಸರುಗಳನ್ನು ನಮೂದಿಸಲು ಚಿಂತನೆ ನಡೆಸಿದೆ.
  • ರೈಲ್ವೇ ಇಲಾಖೆಯ ಈ ನಿರ್ಧಾರವು ಕೋಟ್ಯಾಂತರ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುತ್ತದೆ.
ಜನರಲ್ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತೀರಾ... ಇಲ್ಲಿದೆ ಮಹತ್ವದ ಮಾಹಿತಿ  title=

Train General Ticket Rule: ಭಾರತೀಯ ರೈಲ್ವೆ ಆರಾಮದಾಯಕ ಮತ್ತು ಅಗ್ಗದ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ದೂರದ ಪ್ರಯಾಣಗಳಿಗಾಗಿ ಕೆಲವರು ಮೊದಲೇ ಟಿಕೆಟ್ ಬುಕ್ ಮಾಡುತ್ತಾರೆ. ಈ ರೀತಿ ಟಿಕೆಟ್ ಬುಕ್ಕಿಂಗ್ ಗಾಗಿ ಥರ್ಡ್ ಎಸಿ, ಸೆಕೆಂಡ್ ಎಸಿ, ಫಸ್ಟ್ ಎಸಿ, ಎಸಿ ಚೇರ್ ಕಾರ್, ಸ್ಲೀಪರ್ ಮತ್ತು ಸೆಕೆಂಡ್ ಸಿಟ್ಟಿಂಗ್‌ನಂತಹ ಹಲವು ಕೋಚ್‌ಗಳ ಆಯ್ಕೆಗಳಿವೆ. ಒಂದೊಮ್ಮೆ ಟಿಕೆಟ್ ಕಾಯ್ದಿರಿಸದಿದ್ದರೆ ಕೆಲವು ರೈಲುಗಳಲ್ಲಿ ಸಾಮಾನ್ಯ ಟಿಕೆಟ್ ಪಡೆದೂ ಸಹ ಪ್ರಯಾಣಿಸಬಹುದು. ಇಂತಹ ಟಿಕೆಟ್‌ಗಳನ್ನು  ಜನರಲ್ ಟಿಕೆಟ್/ ಸಾಮಾನ್ಯ ಟಿಕೆಟ್ ಎಂತಲೂ ಕರೆಯಲಾಗುತ್ತದೆ. 

ಏನಿದು ಸಾಮಾನ್ಯ ಟಿಕೆಟ್: 
ರೈಲು ನಿಲ್ದಾಣಗಳಲ್ಲಿ ರೈಲು ಹೊರಡುವ ಮುನ್ನ ಟಿಕೆಟ್ ವಿಂಡೋದಲ್ಲಿ ನೇರವಾಗಿ ಟಿಕೆಟ್ ಖರೀದಿಸಬಹುದು. ಪ್ರತಿದಿನ ಊರಿಂದೂರಿಗೆ ಪ್ರಯಾಣಿಸುವ ಪ್ರಯಾಣಿಕರು ಸಾಮಾನ್ಯ ಟಿಕೆಟ್‌ಗಳಲ್ಲಿಯೇ ಪ್ರಯಾಣಿಸುತ್ತಾರೆ. ಇದೀಗ ಭಾರತೀಯ ರೈಲ್ವೆ ಇಂತಹ ಸಾಮಾನ್ಯ ಟಿಕೆಟ್ ಖರೀದಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಇದು ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ- ₹315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿ: ಎಂ.ಬಿ.ಪಾಟೀಲ

ಸಾಮಾನ್ಯ ಟಿಕೆಟ್ ನಿಯಮದಲ್ಲಿ ಬದಲಾವಣೆಗಳನ್ನು ತರಲು ರೈಲ್ವೆ ಸಚಿವಾಲಯ ಹೊಸ ಮಾನದಂಡಗಳನ್ನು ಪರಿಚಯಿಸಲು ಮುಂದಾಗಿದೆ. ಇದೀಗ ರಿಸರ್ವೇಷನ್ ಟಿಕೆಟ್‌ಗಳಲ್ಲಿ ಇರುವಂತೆಯೇ ಸಾಮಾನ್ಯ ಟಿಕೆಟ್‌ನಲ್ಲಿಯೂ ರೈಲಿನ ಹೆಸರುಗಳನ್ನು ನಮೂದಿಸಲು ಚಿಂತನೆ ನಡೆಸಿದೆ. ಒಂದೊಮ್ಮೆ ರೈಲ್ವೆ ಸಚಿವಾಲಯವು ಈ ನಿರ್ಧಾರವನ್ನು ಕೈಗೊಂಡಿದ್ದೇ ಆದರೆ, ಜನರಲ್ ಟಿಕೆಟ್ ಪಡೆದು ಒಂದೇ ಗಮ್ಯಸ್ಥಾನವನ್ನು ತಲುಪಲು  ನಿಮಿಷದಲ್ಲೇ ಬೇರೆ ಟ್ರೈನ್ ಬದಲಾಯಿಸಲು ಸಾಧ್ಯವಾಗದಿರಬಹುದು. 

ಇದನ್ನೂ ಓದಿ- FD Rules: ಸ್ಥಿರ ಠೇವಣಿ ತೆಗೆಯುವ ಮೊದಲು ತಿಳಿಯಿರಿ ಹೊಸ ನಿಯಮ, ಇಲ್ಲವೇ ಭಾರೀ ನಷ್ಟ..!

ಆದಾಗ್ಯೂ, ಭಾರತೀಯ ರೈಲ್ವೇ ನೀಡುವ ಸಾಮಾನ್ಯ ಟಿಕೆಟ್ ಮಾನ್ಯತೆಯೊಂದಿಗೆ ಬರುತ್ತದೆ. ಸಾಮಾನ್ಯ ಟಿಕೆಟ್ ಖರೀದಿಸಿದ 3 ಗಂಟೆಗಳ ಒಳಗೆ ಪ್ರಯಾಣ ಆರಂಭಿಸದಿದ್ದರೆ ನಂತರ ಆ ಟಿಕೆಟ್ ಮಾನ್ಯವಾಗಿರುವುದಿಲ್ಲ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News