ಚಾಮರಾಜನಗರ: ಸಚಿವ ಅಶ್ಚಥ್ ನಾರಾಯಣ್ ಎಲ್ಲಿ ಕೊಲೆ ಪ್ರಚೋದನೆ ಹೇಳಿಕೆ ಕೊಟ್ಟರೋ ಅಲ್ಲೇ ಕೇಸ್ ದಾಖಲಾಗಿ, ಅವರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅಶ್ವತ್ಥ್ ನಾರಾಯಣ ಓರ್ವ ಮಂತ್ರಿಯಾಗಿ ಮಾಜಿ ಸಿಎಂರನ್ನು ಕೊಲೆ ಮಾಡುವ ಪ್ರಚೋದನೆ ಕೊಟ್ಟಿದ್ದಾರೆ. ಕ್ಷಮಾಪಣೆ ಕೇಳುವುದೆಲ್ಲಾ ಬೇಡ, ಭಾರತದ ಕಾನೂನು ಏನಿದೆ ಅದನ್ನು ರಾಜ್ಯ ಸರ್ಕಾರ ಪ್ರಯೋಗ ಮಾಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ʼಪ್ರಿಯಾʼಳನ್ನು ಛೂ ಬಿಟ್ಟು ಹನಿಟ್ರ್ಯಾಪ್ ಮಾಡ್ತೀದ್ದ ʼಶಾರ್ಟ್ ಮೂವಿ ಹೀರೋʼ ಅಂದರ್..!
ನಾರಾಯಣ ಹೇಳಿಕೆಗೆ ಮುಂದೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆತ ಅರೆಸ್ಟ್ ಆಗದಿದ್ದರೇ ಪೊಲೀಸ್ ಅಧಿಕಾರಿಗಳು ಕೂಡ ಹೊಣೆ, ಅವರು ರಿಟೈರ್ ಆದರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಟಿಪ್ಪುವನ್ನು ಯಾರೋ ಗೌಡ ಕೊಂದ ಅಂಥಾ ಹೇಳುತ್ತಿದ್ದಾರೆ, ಅವರು ಯಾವ ಇತಿಹಾಸ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿಗರ ಟಿಪ್ಪು ಕೊಂದ ಹೇಳಿಕೆಗೆ ಕಿಡಿಕಾರಿದರು.
ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಕ್ರಿಯಿಸಿ, ಸಂಸದ ಪ್ರತಾಪ್ ಸಿಂಹ ಹೇಳ್ತಾರೆ ಕುಲಪತಿಯಾಗಲು 15-20 ಕೋಟಿ ಕೊಡಬೇಕು ಅಂಥ, ಪಿಎಸ್ಐ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತದೆ, ಸರ್ಕಾರದ ಆಡಳಿತ ವೈಫಲ್ಯದಿಂದ ಎಲ್ಲಾ ಆಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೂ ಸರ್ಕಾರ ಕಾರಣ ಎಂದರು.
ಇದನ್ನೂ ಓದಿ: Rohini Sindhuri vs D Roopa: ಐಪಿಎಸ್ ಡಿ.ರೂಪ ವಿರುದ್ಧ ಎಫ್ಐಆರ್ ಸಾಧ್ಯತೆ..!?
ಸರ್ಕಾರದ ಆಡಳಿತ ವೈಫಲ್ಯದಿಂದ, ಕೋಮು ಗಲಭೆ, ಸಂಘರ್ಷದಿಂದ ಯಾವ ಉದ್ಯಮಿಯೂ ರಾಜ್ಯ ಸರ್ಕಾರದಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡುತ್ತಿಲ್ಲ, ಎಲ್ಲರೂ ತಮಿಳುನಾಡು, ಆಂಧ್ರಗೆ ಹೋಗುತ್ತಿದ್ದಾರೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.