Mahalakshmi murder case : ಪ್ರಿಡ್ಜ್ ನಲ್ಲಿ ಮಾಂಸದ ತುಂಡುಗಳನ್ನ ಒಮ್ಮೆ ನೋಡಿ ಇದೇನು ಪ್ರಾಣಿಗಳ ಮಾಂಸವೋ.. ಅಥವಾ ರಪ್ತು ಮಾಡೋಕೆ ಸಂಗ್ರಹ ಮಾಡಿಟ್ಟಿರೋ ಮಾಂಸವಲ್ಲ.. ಇದು ಸ್ಪರದ್ರೂಪಿ ಮಹಿಳೆಯನ್ನ ತುಂಡರಿಸಿರೋ ದೇಹ.. ಹೌದು, ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಾಲಕ್ಷ್ಮಿ ಕೊಲೆ ಕೇಸ್ ಪೊಲೀಸ್ರಿಗೆ ಸವಾಲ್ ಆಗಿದೆ..ಹತ್ತು ದಿನಗಳ ಹಿಂದೆಯೇ ಹಂತಕ ಕೊಲೆ ಮಾಡಿ ದೇಹವನ್ನ ತುಂಡರಿಸಿ ಪ್ರಿಡ್ಜ್ ನಲ್ಲಿಟ್ಟು ಎಸ್ಕೇಪ್ ಆಗಿದ್ದಾನೆ..
ಬರೋಬ್ಬರಿ ಸುಂದರಿಯ ದೇಹ 32 ತುಂಡುಗಳನ್ನಾಗಿ ಮಾಡಲಾಗಿದೆ.. ಆರೋಪಿ ವೆಬ್ ಸೀರೀಸ್ ಅಥವಾ ಯಾವುದೋ ಸಿನಿಮಾ ನೋಡಿ ಕೊಲೆ ಮಾಡಿರಬಹುದೆಂಬ ಅನುಮಾನವಿದೆ.. ಅಲ್ದೆ ಮತಾಂತರದ ಶಂಕೆಯಿದ್ದು, ಆ ಆಯಾಮದಲ್ಲೂ ತನಿಖೆ ನಡೆಸಲಾಗ್ತಿದೆ.. ಏರಿಯಾದಲ್ಲಿ ಯಾರೊಂದಿಗೂ ಹೆಚ್ಚು ಸೇರದ ಮಹಾಲಕ್ಷ್ಮಿ, ಕೆಲಸ ಆಯ್ತು ಮನೆ ಆಯ್ತು ಅಂತಿದ್ಲು.. ಈ ನಡುವೆ ದಿನನಿತ್ಯ ಪಿಕ್ ಅಪ್ ಅಂಡ್ ಡ್ರಾಪ್ ಮಾಡಿ ಬೈಕ್ ನಲ್ಲಿ ಹೋಗ್ತಿದ್ದ.. ಆಗಾಗ ಅಂಗಡಿಗೆ ಹೋಗೋದು ಬಿಟ್ರೆ ಎಲ್ಲೂ ಆಕೆ ಹೋಗ್ತಿರಲಿಲ್ಲ.. ಹೀಗಿದ್ದಾಕೆ ಈ ರೀತಿ ಕೊಲೆ ಆಗಿರೋದು ಸ್ಥಳೀಯರಲ್ಲಿ ಭಯ ಪಡುವಂತಾಗಿದೆ..
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಮೂವರ ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ
ಇನ್ನು ಉತ್ತರಾಖಂಡ್ ಮೂಲದ ಅಶ್ರಫ್ ವಿರುದ್ದ ಕುಟುಂಬಸ್ಥರು ದೂರು ನೀಡಿದ್ದಾರೆ... ಅಶ್ರಫ್ ಜೊತೆ ಸಲುಗೆಯಿಂದ ಮಹಾಲಕ್ಷ್ಮಿ ಇದ್ಲಂತೆ.. ಇದೇ ವಿಚಾರಕ್ಕೆ ಮೃತ ಮಹಾಲಕ್ಷ್ಮಿ ಪತಿ ಕಳೆದ ವರ್ಷ ನೆಲಮಂಗಲ ಠಾಣೆಯಲ್ಲಿ ದೂರು ನೀಡಿದ್ನಂತೆ.. ಗಂಡ ದೂರು ನೀಡಿದ ಬಳಿಕ ಮಹಾಲಕ್ಷ್ಮಿ ಗಂಡನನ್ನೇ ಬಿಟ್ಟು ಬಂದಿದ್ಕಂತೆ.. ಸದ್ಯಕ್ಜೆ ಮಹಾಲಕ್ಷ್ಮಿ ಜೊತೆ ಕೆಲಸ ಮಾಡ್ತಿದ್ದ ಮುಕ್ತಿ, ಶಶಿಧರ್, ಸುನಿಲ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ವಿಚಾರಣೆ ನಡೆಸಲಾಗಿದೆ.. ಪ್ರಮುಖವಾಗಿ ಸೆಲ್ಯೂನ್ ನಲ್ಲಿ ಕೆಲಸ ಮಾಡ್ತಿದ್ದ ಅಶ್ರಪ್ ಗಾಗಿ ಪೊಲೀಸ್ರು ಹುಡುಕಾಟ ನಡೆಸ್ತಿದ್ದಾರೆ..
ಹೀಗೆ ಪತಿ ಹೇಮಂತ್ ದಾಸ್ ಮಾತನಾಡಿ, ಮಹಾಲಕ್ಷ್ಮಿ ರೂಮ್ ಇಂದ ಸ್ಮೆಲ್ ಬರ್ತಾ ಇದೆ ಅಂತ ಮನೆ ಮಾಲೀಕರು ಫೋನ್ ಮಾಡಿದ್ರು.. ಮೂಲತ: ನೇಪಾಳವಾಗಿದ್ರೂ ಬೆಂಗಳೂರಿಗೆ ಬಂದು 35 ವರ್ಷ ಆಯ್ತು.. ಮದುವೆಯಾಗಿ 5 ವರ್ಷ ಆಗಿದೆ.. 9 ದಿಂಗಳಿಂದ ದೂರ ಇದ್ದೆವು. ಅಶ್ರಫ್ ಎನ್ನುವವರ ವಿರುದ್ಧ ಈ ಹಿಂದೆ ದೂರು ನೀಡಿದ್ದೆ. ಕಳೆದ ವರ್ಷ ಅವರ ಜೊತೆ ಸಲುಗೆ ಇಂದ ಇರೋದು ಗೊತ್ತಾಯ್ತು ಅಂತ ಹೇಳಿದ್ದಾರೆ..
ಇದನ್ನೂ ಓದಿ: 'ಮಸೀದಿಯ ಮುಂದೆ ಹೋದರೆ ಮಾತ್ರ ಬಿಜೆಪಿಯವರಿಗೆ ಸ್ವರ್ಗ ಸಿಗುತ್ತದೆ'- ಕಿಮ್ಮನೆ ರತ್ನಾಕರ
ಹೀಗೆ ಮೃತಳ ತಂಗಿ ಸಹೀದಾ ಮಾತನಾಡಿ,ಈ ಕೃತ್ಯ ಯಾರು ಮಾಡಿದ್ದಾರೆ ಅಂತ ಗೊತ್ತಿಲ್ಲ.. ಅವರಿಗೆ ಶಿಕ್ಷೆ ಆಗ್ಬೇಕು.. ಪ್ರೀಜ್ ನಲ್ಲಿ ದೇಹವನ್ನು ಪೀಸ್ ಪೀಸ್ ಮಾಡಿ ಇಟ್ಟಿದ್ರು.. ಅಕ್ಕನನ್ನ ನೋಡಿ ಒಂದು ವರ್ಷ ಆಯ್ತು.. ಅವರು ಮದುವೆಯಾಗಿ ಬೇರೆ ಬೇರೆ ಇದ್ರು ಅಂತೇಳಿದ್ರು.. ಹಾಗೇ ತಾಯಿ ಮೀನಾ ಮಾತನಾಡಿ, ಮನೆಯಿಂದ ವಾಸನೆ ಬರ್ತಾ ಇದೆ ಅಂತ ಓನರ್ ಹೇಳಿದ್ರು.. ನಿನ್ನೆ 12 ಗಂಟೆಗೆ ಬಂದು ಬೀಗ ತೆಗೆದ್ವಿ. ನನ್ನ ಮಗಳ ಹೆಣ ಫ್ರೀಜರ್ ಅಲ್ಲಿ ತುಂಬಿದ್ರು.ಕಳೆದ ರಾಖಿ ಹಬ್ಬದಂದು ಕೊನೆಯದಾಗಿ ನೋಡಿದ್ವಿ.. ನಾನು ನೆಲಮಂಗಲದಲ್ಲಿ ವಾಸವಿದ್ದೆ ಅಂತೇಳಿದ್ದಾರೆ..
ಸದ್ಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗ್ತಿದೆ.. ಕಾಲ್ ಡೀಟೆಲ್ಸ್, ಸಿಡಿಆರ್ ಸೇರಿದಂತೆ ಸಿಸಿಟಿವಿಗಳನ್ನ ಪರಿಶೀಲಿಸಲಾಗ್ತಿದೆ.. ಯಾರ್ಯಾರು ಕೊನೆಯದಾಗಿ ಸಂಪರ್ಕದಲ್ಲಿದ್ರು ಎಂಬ ಬಗ್ಗೆ ತನಿಖೆ ನಡೆಸಲಾಗ್ತಿದೆ. ಸಂಜೆ ವೇಳೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯ್ತು. ನಂತರ ನೇಪಾಳಿಗಳ ಸಂಪ್ರಾದಯದಂತೆ ಶಾಂತಿನಗರ ಚಿತಾಗಾರದಲ್ಲಿ ಮಹಾಲಕ್ಷ್ಮಿ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.. ಒಟ್ನಲ್ಲಿ ಗಂಡ ಮಗುವಿನ ಜೊತೆ ಸುಂದರವಾದ ಸಂಸಾರ ನಡೆಸಬೇಕಿದ್ದಾಕೆ ಇನಿಯನಿಗಾಗಿ ಮನೆ ಬಿಟ್ಟು ಬಂದು ಪ್ರಾಣ ಬಿಟ್ಟಿದ್ದು ವಿಪರ್ಯಾಸವೇ ಸರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.