ಮಳೆಹಾನಿ ಆದ ಪ್ರದೇಶಗಳ ಮನೆಗಳಿಗೆ ಬಿಬಿಎಂಪಿ ಪರಿಹಾರ- ತಾತ್ಕಾಲಿಕ ಕಂಟ್ರೋಲ್ ರೂಂಗಳ ರಚನೆ

Written by - Sowmyashree Marnad | Edited by - Manjunath N | Last Updated : Apr 15, 2022, 08:31 PM IST
  • ಈ ಪೈಕಿ ವಿಭಾಗೀಯ ಮಟ್ಟದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕೂಡಲೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ.
  ಮಳೆಹಾನಿ ಆದ ಪ್ರದೇಶಗಳ ಮನೆಗಳಿಗೆ ಬಿಬಿಎಂಪಿ ಪರಿಹಾರ- ತಾತ್ಕಾಲಿಕ ಕಂಟ್ರೋಲ್ ರೂಂಗಳ ರಚನೆ title=

ಬೆಂಗಳೂರು- ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಮಸ್ಯೆ ಆಗಿರುವ ಪ್ರದೇಶಗಳಿಗೆ ಕೂಡಲೆ ಭೇಟಿ ನೀಡಿ ಇರುವ ಸಮಸ್ಯೆ ಬಗೆಹರಿಸಬೇಕು.ಜೊತೆಗೆ ಮನೆಗಳಿಗೆ ನೀರು ನುಗ್ಗಿರುವ ಕಡೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.No description available.

ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಸಂಬಂಧಿಸಿದಂತೆ ಇಂದು ವರ್ಚುವಲ್ ಸಭೆ ನಡೆಸಿದ ಅವರು, ನಗರದ ವಿದ್ಯಾಪೀಠದಲ್ಲಿ ನಿನ್ನೆ ರಾತ್ರಿ ಸುಮಾರು 73 ಮಿ.ಮೀ. ಮಳೆಯಾದ ಪರಿಣಾಮ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 80 ಮನೆಗಳಿಗೆ ನೀರು ನುಗ್ಗಿದ್ದು, ಆಡಳಿತಗಾರರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಸ್ಥಳದಲ್ಲಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ-Rahu Gochar 2022: ಜಾತಕದಲ್ಲಿ ರಾಹು ದೋಷದ ಲಕ್ಷಣಗಳೇನು? ದುಃಖಗಳಿಂದ ಕೂಡಿರುತ್ತದೆ ಜೀವನ

ವಿಭಾಗೀಯ ನಿಯಂತ್ರಣ ಕೊಠಡಿಗಳನ್ನು ಕೂಡಲೆ ಪ್ರಾರಂಭಿಸಿ:

ಪಾಲಿಕೆ ವ್ಯಾಪ್ತಿಯಲ್ಲಿ 9 ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ಮಳೆಗಾಲದ ವೇಳೆ 63 ತಾತ್ಕಾಲಿಕ ಕೊಠಡಿಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಈ ಪೈಕಿ ವಿಭಾಗೀಯ ಮಟ್ಟದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕೂಡಲೆ  ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ. ಜೊತೆಗೆ ಮರಗಳನ್ನು ತೆರವುಗೊಳಿಸುವ ಸಲುವಾಗಿ 21 ತಂಡಗಳಿದ್ದು, ರಾತ್ರಿ ವೇಳೆ 8 ತಂಡಗಳು ಹಾಗೂ ಉಳಿದ 13 ತಂಡಗಳನ್ನು ಹಗಲಿನ ವೇಳೆ ನಿಯೋಜನೆ ಮಾಡಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.No description available.

ಬೊಮ್ಮನಹಳ್ಳಿ ವಲಯದ ಉತ್ತರಹಳ್ಳಿ ಭಾಗದಲ್ಲಿ ಸುಮಾರು 150 ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ನಿವಾಸಿಗಳಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಮೂಲಕ ಮನೆಗಳಿಗೆ ನೀರು ನುಗ್ಗಿರುವ ಸಂಬಂಧ ಸಮೀಕ್ಷೆ ಮಾಡಲಾಗ್ತಿದೆ ಎಂದು ಬೊಮ್ಮನಹಳ್ಳಿ ವಲಯ ಮುಖ್ಯ ಇಂಜಿನಿಯರ್ ಆಯುಕ್ತರಿಗೆ ಮಾಹಿತಿ ನೀಡಿದರು.

ಆರ್.ಆರ್. ನಗರ ವಲಯದ ಪ್ರಮೋದ ಲೇಔಟ್, ಮಲ್ಲತಹಳ್ಳಿ, ಪೂರ್ವ ವಲಯದ ಗಾಲ್ಫ್ ಕ್ಲಬ್ ಹಾಗೂ ಮಹದೇವಪುರ ವಲಯದ ದೊಡ್ಡಾನೆಕುಂದಿಯಲ್ಲಿ ಮಳೆಯಿಂದಾಗಿ ಜಲಾವೃತಗೊಂಡಿದ್ದ ಪ್ರದೇಶದಲ್ಲಿ ನೀರನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ: 'ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ, ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ?'

ನಗರದಲ್ಲಿ ನಿನ್ನೆ 10 ಕಡೆ ಮರ ಬಿದ್ದಿರುವ ಬಗ್ಗೆ, ಮನೆಗೆ ನೀರು ನುಗ್ಗಿರುವ ಬಗ್ಗೆ 10 ಹಾಗೂ ಮೋರಿ ಬ್ಲಾಕ್ ಆಗಿರುವ ಬಗ್ಗೆ 3 ಪ್ರಕರಣಗಳು ವರದಿಯಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News