ಬೆಂಗಳೂರು : ಇವತ್ತು ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ರು. ಕರ್ನಾಟಕ ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಹಿನ್ನೆಲೆ ಕೋರ್ಟ್ ಗೆ ಹಾಜರಾಗಿದ್ರು. ಹಾಗಾದ್ರೆ ಪ್ರಕರಣದ ಹಿನ್ನೆಲೆ ಏನೂ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
ಯೆಸ್.. ಮಾಧ್ಯಮಗಳಿಗೆ ಸುಳ್ಳು ಜಾಹೀರಾತು ನೀಡಿದ ಆರೋಪದಡಿ ದಾಖಲಾಗಿರೋ ಕೇಸ್ ನಲ್ಲಿ ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿದೆ. ಇಂದು 42 ನೇ ಎಸಿಎಂಎಂ ಕೋರ್ಟ್ ಗೆ ಖುದ್ದು ಹಾಜರಾದ ಹಿನ್ನೆಲೆ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ನೀಡಿದೆ. ಕಳೆದ ವಾರ ಇದೇ ಕೇಸ್ ನಲ್ಲಿ ಎ2 ಆರೋಪಿ ಡಿ.ಕೆ ಶಿವಕುಮಾರ್ ಹಾಗೂ ಎ3 ಆರೋಪಿ ಸಿಎಂ ಸಿದ್ದರಾಮಯ್ಯಗೆ ಕೋರ್ಟ್ ಜಾಮೀನು ನೀಡಿತ್ತು.. ಇಂದು ರಾಹುಲ್ ಗಾಂಧಿಯವ್ರ ಖುದ್ದು ಹಾಜರಿಯನ್ನ ಪರಿಗಣಿಸಿ ಜಡ್ಜ್ ಶಿವಕುಮಾರ್ ಅವ್ರು ಜಾಮೀನು ಮಂಜೂರು ಮಾಡಿದ್ರು.. ಐವತ್ತು ಸಾವಿರ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿಗೆ ಷರತ್ತುವಿಧಿಸಲಾಗಿತ್ತು. ಡಿ.ಕೆ ಸುರೇಶ್ ಅವ್ರು ರಾಹುಲ್ ಗಾಂಧಿಗೆ ಶ್ಯೂರಿಟಿ ನೀಡಿದ್ರು.. ನಂತ್ರ ಮುಂದಿನ ವಿಚಾರಣೆಯನ್ನ ಜುಲೈ ಮೂವತ್ತಕ್ಕೆ ಮುಂದೂಡಿದ್ರು.. ಇದು ನಾನ್ ಬೇಲಬಲ್ ಕೇಸ್.. ಕೇಸ್ ರದ್ದು ಮಾಡಲು ಅರ್ಜಿ ಸಲ್ಲಿಸ್ತೇವೆ ಅಂತಾ ಹಿರಿಯ ವಕೀಲ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ರು.
ಇದನ್ನೂ ಓದಿ:ಸಂತ್ರಸ್ಥೆ ಕಿಡ್ನಾಪ್ ಪ್ರಕರಣ : ಭವಾನಿಗೆ ಬೇಲ್, ಎಸ್ಐಟಿ ಕರೆದಾಗಲೇಲ್ಲ ಹೋಗ್ಲೇಬೇಕು..!
2023 ರ ವಿಧಾನಸಭೆ ಎಲೆಕ್ಷನ್ ವೇಳೆ ಬಿಜೆಪಿ ನಾಯಕರ ವಿರುದ್ದ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ರು.. ಬಿಜೆಪಿಯಲ್ಲಿ ಸಿಎಂ ಆಗಬೇಕಂದ್ರೆ 2500 ಕೋಟಿ ಹೈಕಮಾಂಡ್ ಗೆ ಕೊಡಬೇಕು. ಮಂತ್ರಿಯಾಗಲು 500 ಕೋಟಿ, ಪಿಎಸ್ ಐ, ಇಂಜಿನಿಯರ್ ಪೋಸ್ಟಿಂಗ್ ಗೆ ಇಷ್ಟಿಷ್ಟು ಅಮೌಂಟ್ ಕೊಡಬೇಕು.. 40% ಸರ್ಕಾರ ಅಂತಾ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ರು.. ರಾಷ್ಟ್ರೀಯ ಪಕ್ಷದ ವಿರುದ್ದ ಆಧಾರರಹಿತವಾಗಿ ಮಾನನಷ್ಟ ಆರೋಪ ಮಾಡಿದ್ದಾರೆ ಅಂತಾ ಬಿಜೆಪಿ ಮುಖಂಡರೂ ಆಗಿರೋ ಕೇಶವ ಪ್ರಸಾದ್ ಖಾಸಗಿ ದೂರು ದಾಖಲು ಮಾಡಿದ್ರು. ದೂರನ್ನ ಮಾನ್ಯ ಮಾಡಿದ್ದ ಕೋರ್ಟ್, ಕೇಸ್ ಕೈಗೆತ್ತಿಕೊಂಡಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷ ಎ1 ಆರೋಪಿಯಾಗಿದ್ರೆ, ಡಿಕೆ ಶಿವಕುಮಾರ್ ಎ2, ಸಿದ್ದರಾಮಯ್ಯ ಎ3 ಆರೋಪಿಯಾಗಿದ್ರು. ಚುನಾವಣಾ ಸಂದರ್ಭದಲ್ಲಿ ಈ ರೇಟ್ ಕಾರ್ಡ್ ನ್ನ ಮುಂದಿಟ್ಟು ಮಾತಾಡಿದ್ದ ರಾಹುಲ್ ಗಾಂಧಿ ಅವ್ರನ್ನ ಎ4 ಆರೋಪಿ ಮಾಡಲಾಗಿತ್ತು. ಇಂದು ಕೋರ್ಟ್ ಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದ ಹಿನ್ನೆಲೆ ರಾಹುಲ್ ಗಾಂಧಿ ಆಗಮಿಸಿದ್ರು. ಖುದ್ದು ಹಾಜರಿಯನ್ನ ಪರಿಗಣಿಸಿ ಇಂದು ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ..
ಬೆಳಗ್ಗೆ 10:47 ಕ್ಕೆ ಕೋರ್ಟ್ ಮುಂದೆ ರಾಹುಲ್ ಗಾಂಧಿ ಉಪಸ್ಥಿತರಿದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ಭೈರತಿ ಸುರೇಶ್ ಸೇರಿದಂತೆ ಹಲವರು ಆಗಮಿಸಿದ್ರು.. ಕೋರ್ಟ್ ಮುಂಭಾಗ ಕೈ ಕಾರ್ಯಕರ್ತರು ರಾಹುಲ್ ಪ್ಲೇ ಕಾರ್ಡ್ ಹಿಡಿದು, ಘೋಷಣೆ ಕೂಗಿದ್ರು.. ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.