ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಮರ ಮತ ವಿಭಜಿಸಲು ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ನಡೆಸುವ ಬಗ್ಗೆ ಬಿಜೆಪಿ ಎಐಎಂಐಎಂ ಸಂಸ್ಥಾಪಕ ಓವೈಸಿ ಜತೆ ರಹಸ್ಯ ಸಭೆ ನಡೆಸಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು ಅಧಿಕಾರದ ಗದ್ದುಗೆ ಹಿಡಿಯಲು ಏನು ಬೇಕಾದರೂ ಮಾಡುತ್ತಾರೆ. ಉತ್ತರಪ್ರದೇಶದಲ್ಲಿ ಇಡೀ ರೀತಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅದೇ ತಂತ್ರವನ್ನು ಕರ್ನಾಟಕದಲ್ಲಿಯೂ ಅನುಸರಿಸಲು ಬಿಜೆಪಿ ತಂತ್ರ ರೂಪಿಸಿದೆ ಎಂದು ಅವರು ಹೇಳಿದರೂ.
ಪಿಎಫ್ಐ, ಎಸ್ ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲ್ಲ, ಅದು ಏನೇದ್ರೂ ಬಿಜೆಪಿಯವರ ಕೆಲಸ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಒಳಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಬಿಜೆಪಿ ಹೈದರಾಬಾದ್ನಲ್ಲಿ ಹೊಂದಾಣಿಕೆ ಕುರಿತು ನಡೆಸಿದ ರಹಸ್ಯ ಸಭೆಯ ದಾಖಲೆ ತಮ್ಮ ಬಳಿ ಇದ್ದು, ಅಗತ್ಯಬಿದ್ದರೆ ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ.