ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಬಿಎಂಟಿಎಫ್ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ

BMTF ಅಂತ ಒಂದು ಪೊಲೀಸ್ ವಿಂಗ್ ಇದೆ.‌ ಅದೆಲ್ಲಿದೆ..? ಅದೇನು ಮಾಡುತ್ತೆ..? ಅನ್ನೋದೆಲ್ಲಾ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ.‌ಅಷ್ಟರ ಮಟ್ಟಿಗಿದೆ ಆ BMTF ಸಂಸ್ಥೆಯ ಕಾರ್ಯವೈಖರಿ ಇದೆ.ಸುಮ್ಮನೆ ಕಾಲಹರಣ ಮಾಡುವ BMTF ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

Last Updated : Jul 1, 2022, 11:40 PM IST
  • ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ BMTF ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
  • ಸಾವಿರಾರು ದೂರುಗಳು ಬಂದ್ರೂ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯವಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಬಿಎಂಟಿಎಫ್ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ  title=
Photo Courtsey: BMTF

ಬೆಂಗಳೂರು: BMTF ಅಂತ ಒಂದು ಪೊಲೀಸ್ ವಿಂಗ್ ಇದೆ.‌ ಅದೆಲ್ಲಿದೆ..? ಅದೇನು ಮಾಡುತ್ತೆ..? ಅನ್ನೋದೆಲ್ಲಾ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ.‌ಅಷ್ಟರ ಮಟ್ಟಿಗಿದೆ ಆ BMTF ಸಂಸ್ಥೆಯ ಕಾರ್ಯವೈಖರಿ ಇದೆ.ಸುಮ್ಮನೆ ಕಾಲಹರಣ ಮಾಡುವ BMTF ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

BMTF (ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್) ಸರ್ಕಾರದ ಈ ಇಲಾಖೆ ಸರ್ಕಾರಿ ಸ್ವತ್ತು, ಬಿಬಿಎಂಪಿ ಆಸ್ತಿಗಳನ್ನು ಭೂಗಳ್ಳರಿಂದ, ಮಾಫಿಯಾಗಳಿಂದ ರಕ್ಷಣೆ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಅಧೀನದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ADGP, SP, DYSP ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆದಿರುತ್ತದೆ. ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. RTI ನಲ್ಲಿ ಪಡೆದ ದಾಖಲೆಗಳು ಇದಕ್ಕೆ ನೀಡ್ತಿದೆ ಪುಷ್ಠಿ ನೀಡುವಂತಿದೆ. 

ಇದನ್ನೂ ಓದಿ : Heavy rain Fall : ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ‌ ಮಳೆ :ಹವಾಮಾನ ಇಲಾಖೆ 

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ BMTF ವಿರುದ್ಧ ಸಾರ್ವಜನಿಕರ ಅಸಮಾಧಾನ

ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ BMTF ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಸಾವಿರಾರು ದೂರುಗಳು ಬಂದ್ರೂ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯವಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ತಿ ಕಾಪಾಡಬೇಕಾದ ಇಲಾಖೆ ಇದಾಗಿದ್ದು, ಆಸ್ತಿ ರಕ್ಷಣೆ ಮಾಡುವ ಬದಲು ಭ್ರಷ್ಟರ ರಕ್ಷಣೆ ಮಾಡ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ.‌ ಈ ಅನುಮಾನ ಯಾಕಂದ್ರೆ ಕಳೆದ ಹಲವು ವರ್ಷಗಳಿಂದ ಯಾವೊಂದು ಪ್ರಕರಣದಲ್ಲೂ ಕಾರ್ಯಪ್ರವೃತ್ತವಾಗಿಲ್ಲ BMTF ಪಡೆ. ಯಾಕಂದ್ರೆ RTI ನಲ್ಲಿ ಪಡೆದ ದಾಖಲೆಯಲ್ಲಿ BMTF ಕಾರ್ಯವೈಖರಿ ಬಟಾ ಬಯಲಾಗಿದೆ. 

ಕಳೆದ ಐದು ವರ್ಷದಲ್ಲಿ BMTF ಮಾಡಿದ್ದೇನು.!?

ವರ್ಷ              ದೂರುಗಳು         B ರಿಪೋರ್ಟ್

2018-19                  280                    06

20119-20                 474                   05

2020-21                   366                   01

2021-22                    392                  02

2022-23                    177                              

ಒಟ್ಟು                          1689                   13

BMTF ಕಾರ್ಯವೇನು..?

- ಸರ್ಕಾರಿ ಸ್ವತ್ತನ್ನ ರಕ್ಷಣೆ ಮಾಡುವುದು
- ಸರ್ಕಾರಿ ಆಸ್ತಿಗಳನ್ನ ರಕ್ಷಣೆ ಮಾಡುವುದು
- ಒತ್ತುವರಿ ಆಗಿರೋ ಸ್ವತ್ತನ್ನ ತೆರವು ಮಾಡುವುದು
- ಬಫರ್ ಝೋನ್ ನಲ್ಲಿ ಒತ್ತುವರಿ  ಇದ್ರೆ ತೆರವು ಮಾಡಬೇಕು

BMTF ಮೇಲಿರುವ ಆರೋಪಗಳೇನು.?

- ವೆಬ್ ಸೈಟ್ ನಲ್ಲಿ ಯಾವುದೇ ಮಾಹಿತಿ ಹಾಕುತ್ತಿಲ್ಲ
- ಪಾರದರ್ಶಕ ಆಡಳಿತ ನಡೆಸ್ತಿಲ್ಲ
- ಭೂಗಳ್ಳರನ್ನ ರಕ್ಷಣೆ ಮಾಡುವ ಕೆಲ್ಸ ಆಗ್ತಿದೆ
- ರಸ್ತೆ ಒತ್ತುವರಿ ಆಗಿದೆ ಅಂತ ದೂರು ಕೊಟ್ರೂ ಕ್ರಮ ಆಗಿಲ್ಲ
- ದೂರುದಾರರಿಗೆ ಸರಿಯಾದ ಮಾಹಿತಿ ನೀಡ್ತಿಲ್ಲ
- ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ರಕ್ಷಣೆ

ಮಾಡೋ ಕೆಲ್ಸ ಮಾಡಿ ಅಂದ್ರೆ ಮತ್ತೊಂದು ಜವಾಬ್ದಾರಿ ನೀಡಿ ಅಂತ ಸರ್ಕಾರಕ್ಕೆ ಪತ್ರ..!!

ಸರ್ಕಾರಿ ಸ್ವತ್ತನ್ನ ರಕ್ಷಣೆ ಮಾಡದೇ ಕಾಲಹರಣ ಮಾಡ್ತಿದೆ ಅನ್ನೋ ಆರೋಪ ತಮ್ಮ ಮೇಲೆ ಇದ್ದರೂ ಮತ್ತಷ್ಟು ಅಧಿಕಾರಿ ವ್ಯಾಪ್ತಿ ಕೊಡಿ ಅಂತ ನಗರಾಭಿವೃದ್ಧಿ ಇಲಾಖೆಗೆ BMTF ADGP ಪತ್ರ ಬರೆದಿದ್ದಾರೆ.ಈಗಿರೋ ಕಾರ್ಯದ ಜತೆ ಅಕ್ರಮ ಕಟ್ಟಡಗಳ ತೆರವು ಜವಾಬ್ದಾರಿ ನೀಡುವಂತೆ ಪತ್ರ ಬರೆಯಲಾಗಿದೆ. ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News