ಬಿಡಿಎಯಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ ಬಂದಿದೆ. ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡಿ ಪ್ರಾಧಿಕಾರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿರುವ ನಾಗರಾಜ್ ಎಂಬ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಬಿಎಂಟಿಎಫ್ ನಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
BMTF ಅಂತ ಒಂದು ಪೊಲೀಸ್ ವಿಂಗ್ ಇದೆ. ಅದೆಲ್ಲಿದೆ..? ಅದೇನು ಮಾಡುತ್ತೆ..? ಅನ್ನೋದೆಲ್ಲಾ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ.ಅಷ್ಟರ ಮಟ್ಟಿಗಿದೆ ಆ BMTF ಸಂಸ್ಥೆಯ ಕಾರ್ಯವೈಖರಿ ಇದೆ.ಸುಮ್ಮನೆ ಕಾಲಹರಣ ಮಾಡುವ BMTF ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
BMTF (ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್) ಸರ್ಕಾರದ ಈ ಇಲಾಖೆ ಸರ್ಕಾರಿ ಸ್ವತ್ತು, ಬಿಬಿಎಂಪಿ ಆಸ್ತಿಗಳನ್ನು ಭೂಗಳ್ಳರಿಂದ, ಮಾಫಿಯಾಗಳಿಂದ ರಕ್ಷಣೆ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಅಧೀನದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ADGP, SP, DYSP ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆದಿರುತ್ತದೆ. ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. RTI ನಲ್ಲಿ ಪಡೆದ ದಾಖಲೆಗಳು ಇದಕ್ಕೆ ನೀಡ್ತಿದೆ ಪುಷ್ಠಿ ನೀಡುವಂತಿದೆ.
ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಎಡಿಜಿಪಿ, ಎಸ್ಪಿ, ಡಿವೈಎಸ್ಪಿ ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆದಿರುತ್ತದೆ. ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆರ್ಟಿಐನಲ್ಲಿ ಪಡೆದ ದಾಖಲೆಗಳು ಇದಕ್ಕೆ ಪುಷ್ಠಿ ನೀಡುವಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.