ಅನ್ನಭಾಗ್ಯ ಯೋಜನೆಯಡಿ 8 ಕೆಜಿ ಅಕ್ಕಿ ಜೊತೆಗೆ 2 ಕೆಜಿ ರಾಗಿ/ಜೋಳ ವಿತರಣೆ: ಸಚಿವ ಮುನಿಯಪ್ಪ

ಎಂ ಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ .ಮಾತು ಕೊಟ್ಟಂತೆ ಜುಲೈ ೧ರಿಂದ ಯೋಜನೆ ಜಾರಿ ಆಗುತ್ತೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದರು.

Written by - Prashobh Devanahalli | Edited by - Bhavishya Shetty | Last Updated : Jun 30, 2023, 01:53 PM IST
    • 8 ಕೆಜಿ ಅಕ್ಕಿ ಎರಡು ಕೆಜಿ ರಾಗಿ ಅಥವಾ ಜೋಳ ನೀಡಲು ಸರ್ಕಾರ ತೀರ್ಮಾನ ಮಾಡಿದೆ
    • ಎಂ ಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ
    • ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ
ಅನ್ನಭಾಗ್ಯ ಯೋಜನೆಯಡಿ 8 ಕೆಜಿ ಅಕ್ಕಿ ಜೊತೆಗೆ 2 ಕೆಜಿ ರಾಗಿ/ಜೋಳ ವಿತರಣೆ: ಸಚಿವ ಮುನಿಯಪ್ಪ title=
Anna Bhagya Yojana

ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಮುಂದೆ 8 ಕೆಜಿ ಅಕ್ಕಿ ಎರಡು ಕೆಜಿ ರಾಗಿ ಅಥವಾ ಜೋಳ ನೀಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದರು.

ಇದನ್ನೂ ಓದಿ: ಸ್ನೇಹಾ ಕೊರಳಲ್ಲಿರೋ ತಾಳಿಗಾಗಿ, ಬಂಗಾರಮ್ಮನಿಗೆ ಕೊಟ್ಟಿರೋ ಮಾತನ್ನು ಮೀರ್ತಾಳಾ ಪುಟ್ಟಕ್ಕ?

ನಗರದಲ್ಲಿ ಮಾತನಾಡಿದ ಸಚಿವ ಮುನಿಯಪ್ಪ, “ಪಡಿತರರ ಅಕೌಂಟ್ ಗೆ ಹಣ ರವಾನೆಯಾಗುತ್ತದೆ. ಶೇ. 90 ಅಕೌಂಟ್ ಇರುವ ಬಗ್ಗೆ ಮಾಹಿತಿ ಇದೆ. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ವರ್ಗಾವಣೆಯಾಗಲಿದೆ. ಬಳಿಕ ಅಕ್ಕಿ ಕೊಡುತ್ತೇವೆ. ಸಿಎಂ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ. ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ” ಎಂದು ವಿವರಿಸಿದರು.

ಇದನ್ನೂ ಓದಿ: Stock Market Update: ಹೊಸ ಇತಿಹಾಸ ಬರೆದ ಷೇರು ಮಾರುಕಟ್ಟೆ, 19000 ಅಂಕಗಳ ಗಡಿ ದಾಟಿದ ನಿಫ್ಟಿ

ಎಂ ಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ .ಮಾತು ಕೊಟ್ಟಂತೆ ಜುಲೈ ೧ರಿಂದ ಯೋಜನೆ ಜಾರಿ ಆಗುತ್ತೆ. ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ‌ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ. ಹಣ ರೆಡಿ ಇದೆ. ಅಕೌಂಟ್ ಗೆ ವರ್ಗಾವಣೆ ಆಗಲಿದೆ. ನಾಳೆಯಿಂದ ಅಕೌಂಟ್ ಗೆ ಹಣ ಹೋಗುತ್ತೆ. ಅನ್ನಭಾಗ್ಯ ಯೋಜನೆಗೆ ಸಮಾವೇಶ ನಡೆಸುವ ಅವಶ್ಯಕತೆ ಇಲ್ಲ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News