ಇಂದು ಡಿ.ಕೆ. ಶಿವಕುಮಾರ್ ಪದಗ್ರಹಣ, 10 ಸಾವಿರ ಸ್ಥಳಗಳಲ್ಲಿ ಸಮಾರಂಭದ ನೇರ ಪ್ರಸಾರ ವ್ಯವಸ್ಥೆ

ಪದಗ್ರಹಣ ಸಮಾರಂಭವನ್ನು ಅದ್ಧೂರಿಯಾಗಿ ಮಾಡಬೇಕು, ರಾಷ್ಟ್ರೀಯ ನಾಯಕರನ್ನು ಕರೆಸಬೇಕು, ರಾಜ್ಯದ ನಾಯಕರನ್ನೆಲ್ಲಾ ಸೇರಿಸಿ ಒಗ್ಗಟ್ಟು ಪ್ರದರ್ಶಿಸಬೇಕು, ಅಪಾರ ಸಂಖ್ಯೆಯ ಜನ‌ ಸೇರಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದ ಡಿ.ಕೆ. ಶಿವಕುಮಾರ್ ಕನಸು COVID -19 ಕಾರಣಕ್ಕೆ ನನಸಾಗಿಲ್ಲ.   

Last Updated : Jul 2, 2020, 06:56 AM IST
ಇಂದು ಡಿ.ಕೆ. ಶಿವಕುಮಾರ್ ಪದಗ್ರಹಣ, 10 ಸಾವಿರ ಸ್ಥಳಗಳಲ್ಲಿ ಸಮಾರಂಭದ ನೇರ ಪ್ರಸಾರ ವ್ಯವಸ್ಥೆ title=

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ಡಿ.ಕೆ. ಶಿವಕುಮಾರ್ (DK Shivakumar)​, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್​, ಸತೀಶ್​ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ನೇಮಕಾತಿಯಾದ ಮೂರೂವರೆ ತಿಂಗಳ ಬಳಿಕ ಇಂದು ಪದಗ್ರಹಣ ಮಾಡಲಿದ್ದಾರೆ.

ಪದಗ್ರಹಣ ಸಮಾರಂಭವನ್ನು ಅದ್ಧೂರಿಯಾಗಿ ಮಾಡಬೇಕು, ರಾಷ್ಟ್ರೀಯ ನಾಯಕರನ್ನು ಕರೆಸಬೇಕು, ರಾಜ್ಯದ ನಾಯಕರನ್ನೆಲ್ಲಾ ಸೇರಿಸಿ ಒಗ್ಗಟ್ಟು ಪ್ರದರ್ಶಿಸಬೇಕು, ಅಪಾರ ಸಂಖ್ಯೆಯ ಜನ‌ ಸೇರಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದ ಡಿ.ಕೆ. ಶಿವಕುಮಾರ್ ಕನಸು  ಕೋವಿಡ್-19 (COVID-19)  ಕಾರಣಕ್ಕೆ ನನಸಾಗಿಲ್ಲ. ಈ ನಡುವೆ ಸರಳವಾಗಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವುದಕ್ಕೂ ಅವರ ರಾಜ್ಯ ಸರ್ಕಾರದೊಂದಿಗೆ ಸಂಘರ್ಷ ನಡೆಸಬೇಕಾಯಿತು.

ಇಂದು ಬೆಳಿಗ್ಗೆ 11 ಗಂಟೆಗೆ ವರ್ಚ್ಯುಯಲ್ ಸಮಾವೇಶದ ಮೂಲಕ ಪದಗ್ರಹಣ ನಡೆಯಲಿದೆ‌. 10 ಸಾವಿರ ಸ್ಥಳಗಳಲ್ಲಿ ಸಮಾರಂಭದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ‌. 1 ಕೋಟಿ ಜನರ ವೀಕ್ಷಣೆಗೆ ಲಿಂಕ್​ ವ್ಯವಸ್ಥೆ ಮಾಡಲಾಗಿದೆ. ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ& ಪರಿಕಲ್ಪನೆ ಎಂಬ ಹೆಸರಿನಲ್ಲಿ ಪದಗ್ರಹಣ ನಡೆಯಲಿದೆ ಎಂದು ಕೆಪಿಸಿಸಿ ಹೇಳಿಕೊಂಡಿದೆ‌.

ಕಾರ್ಯಕ್ರಮಕ್ಕೆ ಸಿಎಂ ಅನುಮತಿ ಕೊಟ್ಟಿದ್ದಾರೆ, ಪೊಲೀಸರು ಅಡಚಣೆ ಮಾಡುವಂತಿಲ್ಲ: ಡಿ.ಕೆ ಶಿವಕುಮಾರ್

ಕೆಪಿಸಿಸಿ ನೂತನ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಪ್ರಮುಖ ನಾಯಕರ ಸಮ್ಮುಖ ನಿಕಟಪೂರ್ವ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಜವಾಬ್ದಾರಿಯನ್ನು ನೂತನ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಅವರು ಡಿ.ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್​, ಸತೀಶ್​ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಅವರಿಗೆ ಪತ್ರಿಜ್ಞಾವಿಧಿ ಬೋಧಿಸಲಿದ್ದಾರೆ‌.

COVID -19 ಮತ್ತು ಲಾಕ್​ಡೌನ್​ ಹಿನ್ನೆಲೆಯಲ್ಲಿ 150‌ ಜನ ಪ್ರಮುಖರಿಗೆ ಮಾತ್ರ ಕಾರ್ಯಕ್ರಮಕ್ಕೆ ಪಾಸ್​ ನೀಡಲಾಗಿದೆ. ಆಮಂತ್ರಣ ನೀಡಿರುವವರನ್ನು ಹೊರತುಪಡಿಸಿ ಇನ್ಯಾರು ಕೆಪಿಸಿಸಿ ಕಚೇರಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಇದಲ್ಲದೆ 7,800 ಸ್ಥಳಗಳಿಂದ ಝೂಮ್​ ಕಾನ್ಫರೆನ್ಸ್​, 100ಕ್ಕೂ ಹೆಚ್ಚು ಫೇಸ್​ಬುಕ್​ ಖಾತೆಗಳಿಂದ ಲೈವ್​ ಇರಲಿದೆ. 76763 66666 ಫೋನ್ ನಂಬರಿಗೆ ಮಿಸ್ಡ್​ ಕಾಲ್​ ಕೊಟ್ಟು ಲೈವ್​ ನೋಡುವ ವ್ಯವಸ್ಥೆ ಮಾಡಲಾಗಿದೆ.
 

Trending News