ಬೆಳಗಾವಿ: ಇಡಿ ಅಂದ್ರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್ಮೆಂಟ್, ಐಟಿ ಅಂದ್ರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ವ್ಯಂಗ್ಯವಾಡಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿ ಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಚಾರವಾಗಿ ಕಿಡಿಕಾರಿ, ಐಟಿ ಅಂದರೆ ಅವರ ಇಂಟಲಿಜೆಂಟ್ ಡಿಪಾರ್ಟ್ಮೆಂಟ್ ಆಗಿ ಚಿಲುಮೆ ರೀತಿ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು. ಸಿಬಿಐ ಕೂಡಾ ಬಿಜೆಪಿ ವಿರೋಧಿಗಳ ವಿರುದ್ಧ ದೊಡ್ಡ ಅಸ್ತ್ರ ಇಟ್ಟುಕೊಂಡು ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಿದೆ. ಆದರೆ ನಾವು ಭಯಪಡಲ್ಲ ಎಂದರು.
ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಸದನಕ್ಕೆ ಗೈರು:
ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್. ಈಶ್ವರಪ್ಪ ಇಬ್ಬರೂ ಚಳಿಗಾಲದ ಅಧಿವೇಶನಕ್ಕೆ ಗೈರಾಗಿರುವ ಕುರಿತಂತೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಇದು ಬಿಜೆಪಿಯ ಆಂತರಿಕ ವಿಚಾರವಾಗಿದೆ. ರಮೇಶ್ ಹಾಗೂ ಈಶ್ವರಪ್ಪ ಮಾತ್ರವಲ್ಲ, ಇತರರೂ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.
ಇದನ್ನೂ ಓದಿ- ರಾಜ್ಯದಲ್ಲಿ ಹಲಾಲ್ ಮಾಂಸ ನಿಷೇಧಿಸಲು ಮುಂದಾದ ಬೊಮ್ಮಾಯಿ ಸರ್ಕಾರ
ಸಾವರ್ಕರ್ ಫೋಟೋ ವಿವಾದ:
ಸಾವರ್ಕರ್ ಫೋಟೋ ವಿವಾದದ ವಿಚಾರವಾಗಿ ಕಾಂಗ್ರೆಸ್ ಮುಖಂಡರ ನಡುವಿನ ಗೊಂದಲ ಕುರಿತಾಗಿ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಹುಳಿ ಹಿಂಡುವ ಕೆಲಸ ಆಗಬಾರದು. ಸರ್ಕಾರ ತೀರ್ಮಾನ ಕೈಗೊಂಡಾಗ ನಾವು ಕತ್ತಿನ ಪಟ್ಟಿ ಹಿಡಿಯಲು ಆಗಲ್ಲ. ನಾವು ನಾಗಪುರ ಯುನಿವರ್ಸಿಟಿಯವರಲ್ಲ. ನಾವು ಜನಸಾಮಾನ್ಯರ ವಿವಿಯವರು ಎಂದು ಹೇಳಿದರು.
ಸಾವರ್ಕರ್ ಕೊಲೆ ಮಾಡಿ ಜೈಲಿಗೆ ಹೋದವರೇ ವಿನಹಃ, ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ.
ಆರು ಬಾರಿ ಕ್ಷಮಾಪಣೆ ಪತ್ರ ಕೊಟ್ಟು ಬ್ರಿಟೀಷರ ತಟ್ಟೆ ಕಾಸಿನಲ್ಲಿ ಜೀವನ ಮಾಡಿದವರು. ಅವರ ಫೋಟೋ ಹಾಕಿರುವುದು ಕರ್ನಾಟಕದ ಜನರಿಗೆ ಅವಮಾನ. ಗಡಿ ವಿವಾದ ಇರುವಾಗ ಆ ಪ್ರದೇಶದ ಹಾಗೂ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ವ್ಯಕ್ತಿಯ ಫೋಟೋ ಹಾಕಿರುವುದು ನೋಡಿದಾಗ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ - ಸಿದ್ದರಾಮಯ್ಯ ಹೇಳಿಕೆಯಲ್ಲಿ ಗೊಂದಲ:
ನಮ್ಮಲ್ಲಿ ದ್ವಂದ್ವ ಇಲ್ಲ, ನಾವು ಹಾವಿನ ಪುರ ವಿವಿಯಿಂದ ತೀರ್ಮಾನ ಮಾಡಲ್ಲ. ಸಾವರ್ಕರ್ ವಿಚಾರವಾಗಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಬೇರೆಬೇರೆ ರೀತಿಯಲ್ಲಿ ವಿರೋಧ ಮಾಡುತ್ತಾರೆ. ನಮ್ಮಲ್ಲಿ ಮತ ಭೇಧ ಇರುತ್ತೆ, ಇರಬೇಕು ಎಂದರು.
ಇದನ್ನೂ ಓದಿ- ಬೆಳಗಾವಿ ಅಧಿವೇಶನ: ಕಾಂಗ್ರೆಸ್ ಮೀಸಲಾತಿ ಅಸ್ತ್ರ; ಬಿಜೆಪಿ ಸುಳ್ಳು ಆರೋಪ!
ಟಿಕೆಟ್ ಘೋಷಣೆ ವಿಚಾರ:
ಸಿದ್ದರಾಮಯ್ಯ ಅವರಿಂದ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಯಾರೂ ಟಿಕೆಟ್ ಘೋಷಣೆ ಮಾಡಲು ಆಗಲ್ಲ. ಅಧ್ಯಕ್ಷರು ಹಾಗೂ ಸಿಎಲ್ ಪಿ ಕೂಡಾ ಅವರವರ ಟಿಕೆಟ್ ಘೋಷಣೆ ಮಾಡಲು ಆಗಲ್ಲ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಸಭೆ ಆಗಿ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್ ಅಧ್ಯಕ್ಷರ) ಸೀಲ್ ಬೀಳುವ ವರೆಗೂ ಯಾರಿಗೂ ಏನು ಗ್ಯಾರಂಟಿ ಇಲ್ಲ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರಿಗೂ ಕಾಂಗ್ರೆಸ್ ನಲ್ಲಿ ಸೀಟು ತಪ್ಪಿರುವ ಉದಾಹರಣೆಗಳಿವೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.