ಬೆಂಗಳೂರು : ಇಂದು ಬೆಂಗಳೂರು ಅಕ್ಷರಶಃ ಸ್ತಬ್ಧವಾಗುವ ಸಾಧ್ಯತೆ ಇದೆ. ವಿಧಾನಸೌಧ, ಮೆಜೆಸ್ಟಿಕ್, ಸಿಟಿ ರೈಲ್ವೆ ಸ್ಟೇಷನ್, ಫ್ರೀಡಂ ಪಾರ್ಕ್, ರಾಜಭವನ, ಮೈಸೂರು ಬ್ಯಾಂಕ್ ಸರ್ಕಲ್ ಕಡೆ ವಾಹನ ಹತ್ತಿ ತೆರಳಬೇಡಿ. ರಾಜಧಾನಿಯ ರಸ್ತೆಗಳು ಇವತ್ತು ಬ್ಲಾಕ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ನಡುಮಧ್ಯಾಹ್ನದ ಹೊತ್ತಿಗೆ ಟ್ರಾಫಿಕ್ ಏರು ಪೇರಾಗುವ ಸಾಧ್ಯತೆಗಳಿವೆ. ಸಾಧ್ಯವಾದಷ್ಟು ಮೆಟ್ರೋ ಸಂಪರ್ಕ ಬಳಸಿ. ಇಲ್ಲವಾದರೆ, ರಸ್ತೆಯಲ್ಲೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚು.
ರಾಜಧಾನಿಯಲ್ಲಿಂದು ಚಳವಳಿಗಳ ಸರಮಾಲೆ :
ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ (Congress) ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ಇವತ್ತು ಸಾಥ್ ನೀಡಲಿದೆ. ಸುಮಾರು 20 ಸಾವಿರ ರೈತರು, ಕಾಂಗ್ರೆಸ್ ಕಾರ್ಯಕರ್ತರು, ವಾಹನಗಳು ಈ ಪ್ರತಿಭಟನೆಯಲ್ಲಿ (Protest) ಪಾಲ್ಗೊಳ್ಳಲಿವೆ. ಬೆಳಗ್ಗೆ 8 ಗಂಟೆಯಿಂದಲೇ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ(Railway Station) ವಿವಿಧ ಕಡೆಗಳಿಂದ ರೈತರು ಆಗಮಿಸುತ್ತಿದ್ದಾರೆ. ಅಲ್ಲಿಂದಲೇ ವಿವಿಧ ರೀತಿಯ ಪ್ರತಿ ಭಟನೆ ನಡೆಯಲಿದೆ.
ಇದನ್ನೂ ಓದಿ : Suresh Angadi: ಶಾ ಭೇಟಿ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಬೈಎಲೆಕ್ಷನ್ ಟಿಕೆಟ್ ಇವರಿಗೆ ಫಿಕ್ಸ್..!?
ಪ್ರತಿಭಟನೆಯ ವಿವರ ಇಲ್ಲಿದೆ.:
ರೈತರು ರೈಲ್ವೆ ನಿಲ್ದಾಣ ಸುತ್ತ ಮುತ್ತ ನಡೆಸಲಿರುವ ಪ್ರತಿಭಟನೆಯ ವಿವರ ಹೀಗಿದೆ.
8 ಗಂಟೆಗೆ ಸ್ನಾನ ಚಳವಳಿ
8.30ಕ್ಕೆ ಒಲೆ ಹಚ್ಚೊ ಚಳವಳಿ
8.45 ಕ್ಕೆ ಬಾರುಕೋಲು ಚಳವಳಿ
9ಗಂಟೆಗೆ ಉರುಳುಸೇವೆ
9.15ಕ್ಕೆ ಮೋದಿ ಸರ್ಕಾರದ ವಿರುದ್ಧ ಅಣಕು ಪ್ರದರ್ಶನ
9.30 ಅರೆಬೆತ್ತಲೆ ಚಳವಳಿ
10 ಗಂಟೆಗೆ ಕಪ್ಪುಪಟ್ಟಿ ಪ್ರದರ್ಶನ
10.30ಕ್ಕೆ ರಾಜಭವನ ಚಲೋ
11 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಬಹಿರಂಗ ಸಭೆ
ಸಿದ್ದರಾಮಯ್ಯ, ಡಿಕೆಶಿ ನೇತೃತ್ವ:
ಈ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆಶಿ (DKShivakumar) ಸಾಥ್ ನೀಡಲಿದ್ದಾರೆ. ರೈತರು (Farmers) ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ ನಡೆಯುವ ಬಹಿರಂಗ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ : B.C.Patil: 'ನಾವು ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋಗಿದ್ವಿ'
ಟ್ರಾಫಿಕ್ ಜಾಮ್ಆಗುತ್ತೆ ಎಚ್ಚರ..!
ರೈಲ್ವೆ ನಿಲ್ದಾಣದಿಂದ ಆನಂದ್ ರಾವ್ ಸರ್ಕಲ್ ಫ್ಲೈ ಓವರ್ ಮಾರ್ಗವಾಗಿ ಜಾಥಾ ನಡೆಯಲಿದೆ. ಹಾಗಾಗಿ, ಟೌನ್ ಹಾಲ್, ಕಾರ್ಪೋರೇಶನ್, ಅಣ್ಣಮ್ಮ ದೇಗುಲ ರಸ್ತೆ, ಗಾಂಧಿನಗರ, ಮೌರ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್, ಕೆ ಆರ್ ರಸ್ತೆ ಸರ್ಕಲ್ ಗಳಲ್ಲಿ, ರಾಜಭವನ ರಸ್ತೆ, ಮಹಾರಾಣಿ ಕಾಲೇಜ್ ರಸ್ತೆ ಜಾಮ್ ಆಗುವ ಸಾಧ್ಯತೆಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.