ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಈಗ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಜನಾರ್ಧನರೆಡ್ಡಿ ಈಗ ತಮ್ಮ ಮುದ್ದಿನ ನಾಯಿ ಜೊತೆ ಈಗ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಿದ್ದಾರೆ.
ಈ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಹಿಂದೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಚಿತ್ರದ ಮನೋಜ್ಞತೆ ಬೆರಗಾಗಿ ಅವರು ಕಣ್ಣೀರು ಸುರಿಸಿದ್ದರು. ಇದಾದ ನಂತರ ರಾಜ್ಯ ಸರ್ಕಾರ ರಾಜ್ಯದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿತ್ತು.
Mining baron and former #BJP (@BJP4Karnataka) minister #GaliJanardhanaReddy watched '#777Charlie' with his pet dog in a Ballary multiplex theatre. The photos and videos of him watching the movie with pet #dog have gone viral on social media. pic.twitter.com/uMhROspPMX
— IANS (@ians_india) June 26, 2022
ಚಾರ್ಲಿ ಮತ್ತು ಧರ್ಮನ ಕಥೆ ಈ ಹೇಳುವ ಚಿತ್ರವು ಪ್ರಾಣಿಯ ಮೇಲಿನ ಪ್ರೀತಿಯನ್ನು ಅತ್ಯಂತ್ಯ ಮನೋಜ್ಞವಾಗಿ ಚಿತ್ರಿಸಲಾಗಿದೆ.ಈ ಚಿತ್ರಕ್ಕೆ ದೇಶಾದ್ಯಂತ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಈ ರೀತಿಯ ಪ್ರಾಣಿ ಜೊತೆಗಿನ ಮನುಷ್ಯನ ಸಂಬಂಧವನ್ನು ಹೇಳುವ ಈ ಚಿತ್ರ ಭಾರತೀಯ ಸಿನಿಮಾದಲ್ಲಿಯೇ ಒಂದು ಅಪರೂಪದ ಪ್ರಯೋಗ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
.