ಜಾಮೀಯಾ ಮಸೀದಿ ವಿವಾದದ ನಡುವೆ ಮತ್ತೊಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಗೋ ಮಧುಸೂದನ್

ಶ್ರೀರಂಗಪಟ್ಟಣದಲ್ಲಿ ಹಲವು ದೇವಸ್ಥಾನ ನಾಶ ವಾಗಿರುವ ಬಗ್ಗೆ ವಿಧಾನ ಪರಿ ಷತ್ ಮಾಜಿ ಸದಸ್ಯ ಗೋ ಮಧುಸೂದನ್ ಆರೋಪ  ಮಾಡಿದ್ದಾರೆ.  ಜಾಮೀಯಾ ಮಸೀದಿ ವಿವಾದದ ನಡುವೆ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

Written by - Ranjitha R K | Last Updated : Jun 6, 2022, 05:36 PM IST
  • ರಾಜ್ಯದಲ್ಲಿ ಹೆಚ್ಚಾಯಿತು ಧರ್ಮ ದಂಗಲ್
  • ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಗೋ . ಮಧುಸೂದನ್
  • ದೇವಸ್ಥಾನಗಳು ಧ್ವಂಸವಾಗಿರುವ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ
ಜಾಮೀಯಾ ಮಸೀದಿ ವಿವಾದದ ನಡುವೆ ಮತ್ತೊಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಗೋ ಮಧುಸೂದನ್ title=
Go Madhusudhan

ಮಂಡ್ಯ : ದಿನಕಳೆದಂತೆ ರಾಜ್ಯದಲ್ಲಿ  ಧರ್ಮ ದಂಗಲ್ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ನಡೆಯುತ್ತಿರುವ ವಿವಾದದ ನಡುವೆಯೇ ಮಂಡ್ಯದಲ್ಲಿ ವಿಧಾನ ಪರಿ ಷತ್ ಮಾಜಿ ಸದಸ್ಯ ಗೋ ಮಧುಸೂದನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇನ್ನೂ ಹಲವು ಕಡೆ ದೇವಸ್ಥಾನಗಳು  ಧ್ವಂಸ ವಾಗಿದೆ ಎಂದು ಹೇಳಿದ್ದಾರೆ. ದೇವಸ್ಥಾನ ಕೆಡವಿ ಮಸೀದಿ ಕಟ್ಟಲಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ.  

ಶ್ರೀರಂಗಪಟ್ಟಣದಲ್ಲಿ ಹಲವು ದೇವಸ್ಥಾನ ನಾಶ ವಾಗಿರುವ ಬಗ್ಗೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಆರೋಪ  ಮಾಡಿದ್ದಾರೆ. ಜಾಮೀಯಾ ಮಸೀದಿ ವಿವಾದದ ನಡುವೆ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಿಮಿಷಾಂಬ ದೇವಸ್ಥಾನದ ಬಳಿ ಚೆನ್ನಾಂಬ ದೇವಸ್ಥಾನವಿದೆ.  ಮೊದಲು ಇಲ್ಲಿ ವರದರಾಜೇಸ್ವಾಮಿ ದೇವಸ್ಥಾನವಿತ್ತು. ಆದರೆ ಈಗ ಅಲ್ಲಿ ಉರ್ದು ಶಾಲೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ದೇವಸ್ಥಾನದ ಒಳಗಡೆ  ಟಿಪ್ಪು ಅರ್ಚಕನನ್ನ ಕತ್ತರಿಸಿಹಾಕಿದ್ದ ಎಂದು ಕೂಡಾ ಆರೋಪಿಸಿದ್ದಾರೆ. ನಂತರ ಮೂರ್ತಿಯನ್ನ ಒಡೆದು ಹಾಕಿ, ಅಲ್ಲಿ ‌ಉರ್ದು ಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ ಗೋ . ಮಧುಸೂದನ್. 

ಇದನ್ನೂ ಓದಿ : ಬೆಳಗಾವಿಯಲ್ಲಿ ದೇಸಿ ಸೊಬಗು.. ಜಾನಪದ ಶೈಲಿಯ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

ಇಷ್ಟು ಮಾತ್ರವಲ್ಲದೆ, ಟಿಪ್ಪು ಅರಮನೆ ಹಿಂದೆಗಡೆ ಈಶ್ವರ ದೇವಸ್ಥಾನ ಇದ್ದು, ಅದರ ಗೋಪುರವನ್ನು ಸಹ ಟಿಪ್ಪು ಕೆಡವಿದ್ದಾನೆಂದು ಎಂಬ ಗಂಭೀರ ಆರೋಪ ಮಾಡಿದ್ದಾರೆ.  ಗೋ ಮಧುಸೂಧನ್ ಈ ಹೇಳಿಕೆಗಳು ಇದೀಗ ಸಾಕಷ್ಟು ಚರ್ಚಗೆ ಗ್ರಾಸವಾಗಿದೆ..

ಇನ್ನು ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದದ ಮಾತನಾಡಿದ ಅವರು,  ಜಾಮೀಯಾ ಮಸೀದಿ ಹನುಮಂತನರಾಯನ ಗುಡಿಯಾಗಿತ್ತು ಎಂದು ಹೇಳಿದ್ದಾರೆ. ಜಾಮೀಯ ಮಸೀದಿ ಬಗ್ಗೆ 1998 ರಲ್ಲಿ ನಾನು ಸದನದಲ್ಲಿ ಮಾತನಾಡಿದ್ದೆ. ಈಗ ರಾಜ್ಯದಲ್ಲಿ ಇತಿಹಾಸದ ಬಗ್ಗೆ ದೊಡ್ಡ ಚರ್ಚೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Ananth Raju Suicide : ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಅಸಲಿಯತ್ತು ಬಯಲು! 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News