ತುಮಕೂರು: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ, ವಿದ್ಯಾರ್ಥಿನಿಯರ ಮೊಬೈಲ್ಗೆ ಅಸಭ್ಯ ಸಂದೇಶ ಕಳಿಸುತ್ತಿದ್ದ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಕಾರಣಕ್ಕೆ ಅಮಾನತ್ತು ಗೊಂಡಿದ್ದಾನೆ. ಕೋಟಗಾರಲಹಳ್ಳಿ ಶಾಲೆಯ ಪಿ.ನಾಗಭೂಷಣ್ ಅಮಾನತು ಗೊಂಡ ಶಿಕ್ಷಕ. ಈತನ ವಿರುದ್ದ ಹಲವು ಆರೋಪಗಳು ಕೇಳಿ ಬಂದಿವೆ.
ಇದನ್ನೂ ಓದಿ- ಮಕ್ಕಳಿಗಾಗಿ ಆಟದ ಮೈದಾನ ರಕ್ಷಿಸಿ ಕೊಟ್ಟ ಮಾಜಿ ಶಾಸಕ ರಾಜಣ್ಣ
ಈತ ಶಾಲೆಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯರಿಗೆ, ತಾನೇ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದ ಎಂಬ ಆರೋಪವು ಸಹ ಈತನ ಮೇಲಿದೆ. ಈ ಆರೋಪದ ವಿಚಾರವಾಗಿ ಕಾರಣ ಕೇಳಿ ಶಾಲೆಯ ಮುಖ್ಯ ಶಿಕ್ಷಕರು, ಪಿ.ನಾಗಭೂಷಣ್ ಗೆ ನೋಟಿಸ್ ನೀಡಿದ್ದರು, ಈ ವೇಳೆ ತನ್ನ ತಪ್ಪನ್ನು ತಿದ್ದಿಕೊಳ್ಳುವುದಾಗಿ ಶಿಕ್ಷಕ ಪಿ.ನಾಗಭೂಷಣ್ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದ ಎನ್ನಲಾಗಿದೆ.
ಇದನ್ನೂ ಓದಿ- ಮಾರ್ಚ್ 1ರಿಂದ ಬಿಬಿಎಂಪಿ ನೌಕರರರಿಂದ ಅನಿರ್ಧಿಷ್ಟಾವಧಿ ಮುಷ್ಕರ
ಇನ್ನು ಶಿಕ್ಷಕರ ಈ ದುರ್ವರ್ತನೆ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ ಮಧುಗಿರಿ ಡಿ.ಡಿ.ಪಿ.ಐ ಕೆ.ಜಿ.ರಂಗಯ್ಯ, ವಿದ್ಯಾರ್ಥಿಗಳಿಗೆ ಅಸಭ್ಯ ಮೆಸೇಜ್ ಕಳುಹಿಸುತ್ತಿದ್ದ ಆರೋಪ ಹೊತ್ತ ಶಿಕ್ಷಕ ನಾಗಭೂಷಣ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. .
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.