Araga Jnanendra : 'ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನವರು ಹೆಣ್ಣೂ ಅಲ್ಲ ಗಂಡೂ ಅಲ್ಲ ಅನ್ನೋ ರೀತಿಯಲ್ಲಿ ವರ್ತಿಸಿದರು'

ಯಾರು ಯಾವ ವಸ್ತ್ರ ಉಡ್ತಾರೆ ಅನ್ನೋದು ಮುಖ್ಯ ಅಲ್ಲ. ಶಾಲೆ ಒಳಗೆ ಯೂನಿಫಾರಂ ಬೇಕಾ ಬೇಡವಾ ಅಂತ ಸಿದ್ದರಾಮಯ್ಯ ಹೇಳೋದೇ‌ ಇಲ್ಲ. ಹಿಜಾಬ್ ಬಗ್ಗೆ ಬಾಯಿ ಬಿಡಬಾರದು ಅಂತ ಡಿಕೆಶಿ ತಮ್ಮ ಶಾಸಕರಿಗೆ ಹೇಳಿದ್ರು. ಹಿಜಾಬ್ ಬಗ್ಗೆ ಬಾಯಿ ಬಿಡಬಾರದು, ತುಷ್ಟೀಕರಣ ಕಾಂಗ್ರೆಸ್ ನಿಲುವು ಆಗಿದೆ ಎಂದರು.

Written by - Prashobh Devanahalli | Last Updated : Mar 25, 2022, 05:41 PM IST
  • ವಿಧಾನಸಭೆಯ ಕಲಾಪದಲ್ಲಿ ಇಂದು ಸಿದ್ದರಾಮಯ್ಯ ಹೇಳಿಕೆಗೆ ಗೃಹ ಸಚಿವ ತಿರುಗೇಟು
  • ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನವರು ಹೆಣ್ಣೂ ಅಲ್ಲ ಗಂಡೂ ಅಲ್ಲ
  • ಶಾಲೆ ಒಳಗೆ ಯೂನಿಫಾರಂ ಬೇಕಾ ಬೇಡವಾ ಅಂತ ಸಿದ್ದರಾಮಯ್ಯ ಹೇಳೋದೇ‌ ಇಲ್ಲ
Araga Jnanendra : 'ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನವರು ಹೆಣ್ಣೂ ಅಲ್ಲ ಗಂಡೂ ಅಲ್ಲ ಅನ್ನೋ ರೀತಿಯಲ್ಲಿ ವರ್ತಿಸಿದರು' title=

ಬೆಂಗಳೂರು : ವಿಧಾನಸಭೆಯ ಕಲಾಪದಲ್ಲಿ ಇಂದು ಸಿದ್ದರಾಮಯ್ಯ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿ, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನವರು ಹೆಣ್ಣೂ ಅಲ್ಲ ಗಂಡೂ ಅಲ್ಲ ಅನ್ನೋ ರೀತಿಯಲ್ಲಿ ವರ್ತಿಸಿದರು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಠಾಧೀಶರ ಪೇಟ ವಿಚಾರದ ಹೇಳಿಕೆ ಖಂಡಿಸಿ ಮಾತನ್ನಾಡಿದ ಜ್ಞಾನೇಂದ್ರ(Araga Jnanendra), ಯಾರು ಯಾವ ವಸ್ತ್ರ ಉಡ್ತಾರೆ ಅನ್ನೋದು ಮುಖ್ಯ ಅಲ್ಲ. ಶಾಲೆ ಒಳಗೆ ಯೂನಿಫಾರಂ ಬೇಕಾ ಬೇಡವಾ ಅಂತ ಸಿದ್ದರಾಮಯ್ಯ ಹೇಳೋದೇ‌ ಇಲ್ಲ. ಹಿಜಾಬ್ ಬಗ್ಗೆ ಬಾಯಿ ಬಿಡಬಾರದು ಅಂತ ಡಿಕೆಶಿ ತಮ್ಮ ಶಾಸಕರಿಗೆ ಹೇಳಿದ್ರು. ಹಿಜಾಬ್ ಬಗ್ಗೆ ಬಾಯಿ ಬಿಡಬಾರದು, ತುಷ್ಟೀಕರಣ ಕಾಂಗ್ರೆಸ್ ನಿಲುವು ಆಗಿದೆ ಎಂದರು.

ಇದನ್ನೂ ಓದಿ : Siddaramaiah : ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ : ಸಿದ್ದರಾಮಯ್ಯ

ಒಂದು ಸಮುದಾಯ ಎತ್ತಿ‌ ಕಟ್ಟೋ‌ ಕೆಲಸ ಅವರದ್ದು, ಮುಸ್ಲಿಂ ಸಮುದಾಯದಲ್ಲಿ ಕೆಲವು ಮತಾಂಧ ಶಕ್ತಿ ತಲೆ ಎತ್ತಲು ಕಾಂಗ್ರೆಸ್(Congress) ಕಾರಣ. ಸ್ವಾಮೀಜಿಯವ್ರು ಬಟ್ಟೆಯನ್ನು ತಲೆ ಮೇಲಾದ್ರೂ ಹಾಕಿಕೊಳ್ಳಲಿ, ಕಾಲಿನ ಮೇಲಾದ್ರೂ ಹಾಕಿಕೊಳ್ಳಲಿ, ಯೂನಿಫಾರಂ ಬಗ್ಗೆ ಮೊದಲು ನಿಮ್ಮ ನಿಲುವು ಹೇಳಿ. ಹಿಜಾಬ್ ವಿವಾದ ನಾವು ಸೃಷ್ಟಿಸಿದ್ದಲ್ಲ, ಮತಾಂಧ ಶಕ್ತಿಗಳ ಹುಟ್ಟಡಗಿಸುತ್ತಿದ್ದೇವೆ ನಾವು. ಇಷ್ಟು ವರ್ಷ ಈ ಕೆಲಸ ಮಾಡಲು ಕಾಂಗ್ರೆಸ್ ನವ್ರಿಗೆ ಎದೆಗಾರಿಕೆ ಇರಲಿಲ್ಲ ಎಂದು ಟೀಕಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News