ಬೆಂಗಳೂರು: 2019 - 2024ನೇ ಸಾಲಿನಲ್ಲಿ ಕೈಗಾರಿಕಾ ಪಾಲಿಸಿ ತರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್ಕೆಸಿಸಿಐ) 102 ನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಾ.ಜಿ. ಪರಮೇಶ್ವರ, ಕರ್ನಾಟಕ ಕೈಗಾರಿಕೆ, ಶಿಕ್ಷಣ ಸೇರಿದಂತೆ ಇತರೆ ಕ್ಷೇತ್ರದಲ್ಲಿ 4 ಸ್ಥಾನದಲ್ಲಿ ಇದೆ. ಅದರಲ್ಲೂ ಕೈಗಾರಿಕಾ ಕ್ಷೇತ್ರ ಅತಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕಾಗಿ ಕೈಗಾರಿಕಾ ಪಾಲಿಸಿಯನ್ನು ತರಲಾಗುತ್ತಿದೆ. ತುಮಕೂರ, ಬೀದರ್, ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆ ಬೆಳೆಯುತ್ತಿದೆ ಎಂದರು.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ಆಗಿ ಹೊರಹೊಮ್ಮಲಿದೆ ತುಮಕೂರು:
ತುಮಕೂರು ಜಿಲ್ಲೆಯು ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ಆಗಿ ಹೊರಹೊಮ್ಮಲಿದೆ. ಈಗಾಗಲೇ 18 ಸಾವಿರ ಎಕರೆ ಪ್ರದೇಶ ವಶಪಡಿಸಿಕೊಂಡಿದ್ದೇವೆ. 105 ಕಂಪನಿಗಳು ಹೂಡಿಕೆಗೆ ಮುಂದಾಗಿವೆ ಎಂದು ಪರಮೇಶ್ವರ ಮಾಹಿತಿ ನೀಡಿದರು.
ಬೆಂಗಳೂರಿನಿಂದ ತುಮಕೂರಿಗೆ ಸಬ್ ಅರ್ಬನ್ ರೈಲು ತರಲು ಚಿಂತಿಸಲಾಗಿದೆ. ಅಂತೆಯೇ ಮೆಟ್ರೋ ರೈಲು ಸಹ ತುಮಕೂರು ಸಮೀಪಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ತಿಳಿಸಿದರು.