ಬೆಂಗಳೂರು: ಬೆಸ್ಕಾಂನ ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ಫೆಬ್ರವರಿ 14, 2023ರವರೆಗೆ ಒಟ್ಟು 10,74,000 ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಶೇ. 70ರಷ್ಟು ಪ್ರಗತಿ ಸಾಧಿಸಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 58,77,000 ಎಲ್ ಟಿ ವಿದ್ಯುತ್ ಮಾಪಕಗಳಿವೆ. ಸಮೀಕ್ಷೆಯ ಪ್ರಕಾರ ಇವುಗಳಲ್ಲಿ 17,23,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳಾಗಿದ್ದು, ಇವುಗಳನ್ನು ಡಿಎಲ್‌ಎಮ್‌ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪಕಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಬೆಸ್ಕಾಂ ಜುಲೈ 2022 ರಂದು ಚಾಲನೆ ನೀಡಿತ್ತು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ವಿದ್ಯುತ್ ಸಂಪರ್ಕಿತ ಲೋಡ್ ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ: ಕಾಂಗ್ರೆಸ್
ಗ್ರಾಹಕರಿಗೆ ತಾವು ಬಳಸಿರುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ಜೊತೆಗೆ ಅವರು ಎರಡು ವರ್ಷಗಳ ಹಿಂದಿನ ಅವಧಿಯವರೆಗೂ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಛೇರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ ತಾವು ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಇಲ್ಲವೇ ಎಂದು ಖಾತರಿ ಪಡಿಸಿಕೊಳ್ಳಬಹುದಾಗಿದೆ.ಈ ಹಿಂದಿನ ಮೆಕಾನಿಕಲ್ ಮೀಟರ್ ಗಳು ಸಂಪರ್ಕಿತ ಲೋಡ್, ಪವರ್ ಫ್ಯಾಕ್ಟರ್ ಮತ್ತು ವೊಲ್ಟೇಜ್ ಗಳನ್ನು ದಾಖಲಿಸುವ ವ್ಯವಸ್ಥೆ ಇರಲಿಲ್ಲ.ಇದರಿಂದಾಗಿ ಬೆಸ್ಕಾಂಗೆ ವಿದ್ಯುತ್ ಶುಲ್ಕ ಸಂಗ್ರಹಣೆಯಲ್ಲಿ ನಷ್ಟ ಉಂಟಾಗುತ್ತಿತ್ತು.
ಈಗಿನ ಡಿಜಿಟಲ್ ಮೀಟರ್ ಗಳಲ್ಲಿ ಈ ಎಲ್ಲಾ ಸೌಲಭ್ಯಗಳಿದ್ದು, ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಸಿದರೂ ಸಹಾ ಅದು ಡಿಜಿಟಲ್ ಮೀಟರ್ ನಲ್ಲಿ ದಾಖಲಾಗುತ್ತದೆ. ಉದಾಹರಣೆಗೆ ಮೊಬೈಲ್ ಚಾರ್ಜಿಂಗ್, ಟೆಲಿವಿಷನ್ ಸ್ಟಾಂಡ್ ಬೈ ಮೋಡ್ ಮತ್ತು ಜಿರೋ ವ್ಯಾಟ್ ಬಲ್ಬ್ ಬಳಕೆ ಯ ವಿದ್ಯುತ್ ಪ್ರಮಾಣವನ್ನು ಡಿಜಿಟಲ್ ಮೀಟರ್ ದಾಖಲಿಸುತ್ತದೆ. ಆದರೆ ಈ ಸಣ್ಣ ಪ್ರಮಾಣದ ವಿದ್ಯುತ್ ಬಳಕೆಯನ್ನು ಮೆಕಾನಿಕಲ್ ಮೀಟರ್ ಗಳು ದಾಖಲಿಸುವುದಿಲ್ಲ. ಇದರೊಂದಿಗೆ ಗ್ರಾಹಕರು ನಿಖರವಾಗಿ ಬಳಸುವ ವಿದ್ಯುತ್ ಪ್ರಮಾಣವನ್ನು ಮಾತ್ರ ಡಿಜಿಟಲ್ ಮೀಟರ್‌ನಲ್ಲಿ ದಾಖಲಿಸಿ ಬಿಲ್ಲಿಂಗ್ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ವಿದ್ಯುತ್ ಉಳಿತಾಯಕ್ಕೆ ಸಹಾಯವಾಗುತ್ತದೆ.
ಡಿಜಿಟಲ್ ಮೀಟರ್ ಗಳಲ್ಲಿ ಸಂಪರ್ಕಿತ ಲೋಡ್ ದಾಖಲಾಗುವ ಸೌಲಭ್ಯವಿದು, ಸಂಪರ್ಕಿತ ಲೋಡ್ ಮಂಜೂರಾದ ವಿದ್ಯುತ್ ಲೋಡ್ ಗಿಂತ ಜಾಸ್ತಿ ಇದ್ದಲ್ಲಿ ಗ್ರಾಹಕರು ತಾವು ಬಳಸಿರುವ ವಿದ್ಯುತ್ ಲೋಡ್ ವ್ಯತ್ಯಾಸಕ್ಕೆ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ದೋಷಯುಕ್ತ ಡಿಜಿಟಲ್ ಮೀಟರ್ ಅಳವಡಿಸಿದ್ದರೆ, ಗ್ರಾಹಕರು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಗಮನಕ್ಕೆ ತರಲು ವಿನಂತಿಸಲಾಗಿದೆ.ದೋಷಯುಕ್ತ ಡಿಜಿಟಲ್ ಮೀಟರ್ ರೇಟಿಂಗ್ ಖಾತರಿ ಪಡಿಸಿಕೊಂಡು ತಕ್ಷಣ ಸೂಕ್ರ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಪುಟದಿಂದ ಅಶ್ವತ್ಥ್ ನಾರಾಯಣ್ ಕಿತ್ತುಹಾಕುವಂತೆ ರಾಜ್ಯಪಾಲರಿಗೆ ಸಿದ್ದರಾಮಯ್ಯ ಒತ್ತಾಯ
ದೋಷಯುಕ್ತ ಮೀಟರ್ ಅಳವಡಿಸಿದ್ದರೆ ಅಥವಾ ಮೀಟರ್ ಅಳವಡಿಕೆ ಸಂದರ್ಭದಲ್ಲಿ ಗ್ರಾಹಕರಿಂದ ಹಣಕ್ಕೆ ಬೇಡಿಕೆ ಇಟ್ಟ ಕುರಿತು ದೂರು ಬಂದರೆ, ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.
ಆದ್ರೆ ಈ ನೂತನ ಡಿಜಿಟಲ್ ಮೀಟರ್ ಅಳವಡಿಕೆ ವಿರುದ್ಧ ಬೆಸ್ಕಾಂ ಗ್ರಾಹಕರು ಅಸಮಧಾನ ಹೊರ ಹಾಕುತ್ತಿದ್ದಾರೆ. ನೂತನ ಡಿಜಿಟಲ್ ಮೀಟರ್ ನಿಂದಾಗಿ ಹಳೆಯ ಬಿಲ್ ಗಿಂತಲೂ ದುಪ್ಪಟ್ಟು ಬಿಲ್ ಬರಲಾಗ್ತಿದೆ. ಹೀಗಾಗಿ ಈ ನೂತನ ಡಿಜಿಟಲ್ ಮೀಟರ್ ಅಳವಡಿಕೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತಪಡೊಸುತ್ತಿದ್ದಾರೆ.ಜೊತೆಗೆ ಕಳೆದು ಎರಡು ಮೂರು ತಿಂಗಳಿಂದ ನಗರ ವ್ಯಾಪ್ತಿಯಲ್ಲಿ 70ರಸಾವಿರ ದೂರುಗಳು ದಾಖಲಾಗಿವೆ. ಹೀಗಾಗಿ ಈ ನೂತನ ಡಿಜಿಟಲ್ ಮೀಟರ್ ಅಳವಡಿಕೆ ತಮ್ಮಮನೆಗಳಿಗೆ ಬೇಡ ಎನ್ನುವವರೆ ಹೆಚ್ಚಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.