JC Madhu Swamy : ರಾಜ್ಯದಲ್ಲಿ 'ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ' ಜಾರಿಗೆ ಕ್ಯಾಬಿನೆಟ್ ಅನುಮೋದನೆ! 

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಸಚಿವ ಜೆ ಮಾಧುಸ್ವಾಮಿ ಅವರು ಸಂಪುಟ ಸಭೆಯ ನಂತರ ಗುರುವಾರ ಈ ಮಾಹಿತಿ ತಿಳಿಸಿದ್ದಾರೆ.

Written by - Channabasava A Kashinakunti | Last Updated : Aug 20, 2021, 09:22 AM IST
  • ರಾಜ್ಯದಲ್ಲಿ 'ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2021'
  • ಅನುಷ್ಠಾನಕ್ಕೆ ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ
  • ಈ ಕಾಯ್ದೆಯಡಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು
JC Madhu Swamy : ರಾಜ್ಯದಲ್ಲಿ 'ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ' ಜಾರಿಗೆ ಕ್ಯಾಬಿನೆಟ್ ಅನುಮೋದನೆ!  title=

ಬೆಂಗಳೂರು : ರಾಜ್ಯದಲ್ಲಿ 'ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2021' ಅನ್ನು ಅನುಷ್ಠಾನಕ್ಕೆ  ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ, ಇದು ಕೋವಿಡ್ -19 ನಿಂದ ಸಮಾಜವನ್ನು ಆಳವಾಗಿ ರಕ್ಷಿಸಲು ಸಹಾಯ ಮಾಡುತ್ತದೆ.

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಸಚಿವ ಜೆ ಮಾಧುಸ್ವಾಮಿ(JC Madhu Swamy) ಅವರು ಸಂಪುಟ ಸಭೆಯ ನಂತರ ಗುರುವಾರ ಈ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ : Rare Neelakurinji Flowers : ರಾಜ್ಯದಲ್ಲಿ ಅರಳಿದ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ 'ನೀಲಕುರಿಂಜಿ ಹೂವುಗಳು' 

ಮಾನಸಿಕ ಆರೋಗ್ಯ ಸಮಸ್ಯೆ(Mental Health Problem)ಗಳಿರುವ ವ್ಯಕ್ತಿಗಳಿಗೆ ಆರೋಗ್ಯ ಮತ್ತು ಸೇವೆಗಳನ್ನು ಒದಗಿಸಲು ಈ  ಕಾಯ್ದೆ ಸಹಾಯ ಮಾಡುತ್ತದೆ. ಇದು ಮಾನಸಿಕ ಆರೋಗ್ಯಕ್ಕಾಗಿ ಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುತ್ತದೆ, ಉತ್ತೇಜಿಸುತ್ತದೆ ಮತ್ತು ಪೂರೈಸುತ್ತದೆ.

ಈ ಕಾಯ್ದೆಯಡಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ(State Mental Health Authority)ವನ್ನು ಸ್ಥಾಪಿಸಲಾಗುವುದು. ಪ್ರಾಧಿಕಾರದ ಮಾರ್ಗಸೂಚಿಗಳ ಕರಡು ರಚನೆಗಾಗಿ ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸುತ್ತದೆ. ಪ್ರಾಧಿಕಾರವು ನೋಂದಾವಣೆಯನ್ನು ನಿರ್ವಹಿಸುತ್ತದೆ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ಮನಶ್ಶಾಸ್ತ್ರಜ್ಞರು, ದಾದಿಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರ ಪಟ್ಟಿಯನ್ನು ಪ್ರಕಟಿಸುತ್ತದೆ.

ಇದನ್ನೂ ಓದಿ : TB Test : ಕೊರೋನಾದಿಂದ ಗುಣಮುಖರಾದವರಿಗೆ 'TB ಟೆಸ್ಟ್' ಗೆ ಒಳಗಾಗುವಂತೆ ರಾಜ್ಯ ಸರ್ಕಾರ ಒತ್ತಾಯ!

ಕೇಂದ್ರೀಯ ಮಾನಸಿಕ ಆರೋಗ್ಯ ಕಾಯ್ದೆ 2017(Central Mental Healthcare Act, 2017) ರೊಂದಿಗೆ ರಾಜ್ಯ ಕಾಯಿದೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಸಚಿವ ಮಾಧುಸ್ವಾಮಿ, ಕೋವಿಡ್(Covid-19)ಸವಾಲನ್ನು ಪರಿಗಣಿಸಿ ರಾಜ್ಯಾದ್ಯಂತ 2,859 ಉಪ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 478 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.

ಮೂರು ವರ್ಷಗಳ ಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಗಳಿಗೆ ದಾದಿಯರು(Nurses) ಮತ್ತು ಸಿಬ್ಬಂದಿಗಳ ಬಲವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಬದುಕಿದ್ದರೆ ಇದೇ ಅವಧಿಯಲ್ಲಿಯೇ ನಾನು ಸಿಎಂ ಆಗ್ತೀನಿ: ಉಮೇಶ್ ಕತ್ತಿ ಹೊಸ ಬಾಂಬ್..!

ನಿರೀಕ್ಷಿತ ಕೋವಿಡ್ ಮೂರನೇ ಅಲೆ(Covid 3rd Wave) ಅನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದರು. ನಾವು ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ಮೂಲಕ ಅಗತ್ಯ ಕ್ರಮಗಳನ್ನು ಆರಂಭಿಸುತ್ತಿದ್ದೇವೆ ಎಂದು  ಹೇಳಿದರು.

'ಶುಚಿ' ಕಾರ್ಯಕ್ರಮದಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲು 47 ಕೋಟಿ ರೂ. ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News