Lok Sabha Election 2024: ಮಂಡ್ಯದಲ್ಲಿ ಕಾವೇರಿದ 'ಲೋಕ' ಕಣದ ರಾಜಕೀಯ ಅಖಾಡ

Lok Sabha Election 2024: 2024ರ ಲೋಕಸಭೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ.ಕಳೆದ 5 ವರ್ಷದ ಹಿಂದೆ ಸಂಸದರಾಗಿ ಚುನಾಯಿತರಾದವರು.ಮುಂದಿನ ಚುನಾವಣೆ ಘೋಷಣೆಗೂ ಇದೀಗ ಪ್ರಸ್ತುತ ಸಂಸದರು ಚುನಾವಣೆ ಗೆಲ್ಲಲ್ಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.

Written by - Manjunath N | Last Updated : Mar 21, 2024, 07:03 PM IST
  • ಮತ್ತೆ ಅದೃಷ್ಟ ಪರೀಕ್ಷೆಗೆ ಸಜ್ಜಾದರಾ ಸಂಸದೆ ಸುಮಲತಾ?
  • ಅಭಿವೃದ್ಧಿ ಕೆಲಸಗಳನ್ನ ಮುಂದಿಟ್ಟುಕೊಂಡು ಕಣದಲ್ಲಿ ಸಿದ್ದತೆ
  • ಮಂಡ್ಯದಿಂದ ಖುದ್ದು ಅಖಾಡಕ್ಕಿಳಿಯಲು HDK ಸರ್ವ ಸಜ್ಜು
 Lok Sabha Election 2024: ಮಂಡ್ಯದಲ್ಲಿ ಕಾವೇರಿದ 'ಲೋಕ' ಕಣದ ರಾಜಕೀಯ ಅಖಾಡ title=

ಭಾರತ ಸಂಸತ್ತು ಎರಡು ಸದನಗಳನ್ನು ಹೊಂದಿದೆ. ಇವುಗಳನ್ನು ರಾಜ್ಯಸಭೆ ಮತ್ತು ಲೋಕಸಭೆ ಎಂದು ಕರೆಯಲಾಗುತ್ತದೆ.ಲೋಕಸಭಾ ಸದನವೂ 545 ಸದಸ್ಯರನ್ನು ಹೊಂದಿದ್ದು, ಭಾರತದ ಸಂವಿಧಾನದ ಪ್ರಕಾರ ಈ ಪೈಕಿ 543 ಸದಸ್ಯರು ಚುನಾವಣಾ ಕ್ಷೇತ್ರಗಳಿಂದ ಐದು ವರ್ಷಗಳಿಗೊಮ್ಮೆ ಒಂದು ಅವಧಿಗಾಗಿ ಚುನಾಯಿಸಲ್ಪಡುತ್ತಾರೆ.ಇವರೆಲ್ಲರೂ ಚುನಾಯಿತ ಜನಪ್ರತಿನಿಧಿಗಳಾಗಿತ್ತಾರೆ, ಅಂದರೆ ಜನರಿಂದ ಆಯ್ಕೆಯಾಗುತ್ತಾರೆ.ಸಂಸದರ ಆಯ್ಕೆ ಮಾಡಲು ಮತದಾರರ ಪ್ರಭುಗಳೇ ಅಂತಿಮ.ಅಭಿವೃದ್ಧಿ ಲೆಕ್ಕಚಾರ ಸೇರಿದಂತೆ ನಾನಾ ವಿಷಯಗಳನ್ನು ಯೋಚಿಸಿ ತಮ್ಮ ಮತವನ್ನು ಮತದಾರರು ಚಲಾಯಿಸುತ್ತಾರೆ.ಈ ಸಲ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾದ್ರೆ ಸೂಕ್ತ ಅನ್ನೋ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕಾ ಲೆಕ್ಕಚಾರ, ಸಂಸದರ ರಿಪೋರ್ಟ್ ಕಾರ್ಡ್..! 

2024ರ ಲೋಕಸಭೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಕಳೆದ 5 ವರ್ಷದ ಹಿಂದೆ ಸಂಸದರಾಗಿ ಚುನಾಯಿತರಾದವರು. ಮುಂದಿನ ಚುನಾವಣೆ ಘೋಷಣೆಗೂ ಇದೀಗ ಪ್ರಸ್ತುತ ಸಂಸದರು ಚುನಾವಣೆ ಗೆಲ್ಲಲ್ಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಅದರಲ್ಲೂ ಸಕ್ಕರೆನಾಡು ಮಂಡ್ಯದಲ್ಲಿ ಕಳೆದ ಚುನಾವಣೆಯಲ್ಲಿ ಪಕ್ಷೇತರ ಸಂಸದೆಯಾಗಿ ಗೆದ್ದು ಬೀಗಿದ್ದ ಸುಮಲತಾ ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸರ್ವ ರೀತಿಯಲ್ಲಿ ಸಜ್ಜಾಗಿದ್ದಾರೆ‌. ತಮ್ಮ ಅಧಿಕಾರಿವಧಿಯಲ್ಲಿನ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಅಖಾಡಕ್ಕೆ ಇಳಿಯಲಿದ್ದಾರೆ. ಹಾಗಿದ್ರೆ ಮಂಡ್ಯ ಸಂಸದೆಯ ಅಭಿವೃದ್ಧಿ ಕೆಲಸಗಳು ಏನು? ಕ್ಷೇತ್ರದಲ್ಲಿನ ಮತಗಳ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ತಿಳಿಯೋಣ ಬನ್ನಿ.

ಇದನ್ನೂ ಓದಿ-ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್‌ಪಿಜಿ ಸಿಲಿಂಡರ್ ಬೆಲೆ 2,000 ರೂ.ಗೆ ಏರಬಹುದು: ಪಶ್ಚಿಮ ಬಂಗಾಳ ಸಿಎಂ

 ಮಂಡ್ಯ ಕ್ಷೇತ್ರ ಪರಿಚಯ 
ಸಂಸದೆ : ಸುಮಲತಾ, ಪಕ್ಷೇತರ
ಪಡೆದ ಮತ : 7,03.660 (ಶೇ. 51%)
ಸಮೀಪದ ಸ್ಪರ್ಧಿ : ನಿಖಿಲ್ ಕುಮಾರಸ್ವಾಮಿ
ಪಡೆದ ಮತ : 5,77,774 (ಶೇ. 41%)
ಒಟ್ಟು ಮತಗಳು : 17,49,388
ನಿರ್ಣಾಯಕ : ಒಕ್ಕಲಿಗ, ದಲಿತ, ಕುರುಬರು
ಬೆಳೆ : ಕಬ್ಬು, ಭತ್ತ, ರಾಗಿ

ಇನ್ನು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೇಂದ್ರದಲ್ಲಿ ಮಾತುಕತೆ ನಡೆಸಿದ ಜೆಡಿಎಸ್ ವರಿಷ್ಠರು ಈ ಬಾರಿ ಲೋಕಸಮರದ ಚುನಾವಣೆಗೆ ಕೇಸರಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಲೋಕಸಭೆ ಚುನಾವಣೆಯನ್ನ ಮೈತ್ರಿಯಾಗಿ ಎದುರಿಸುವ ನಿರ್ಧಾರ ಮಾಡಿರೋದು ಸಂಸದೆ ಸುಮಲತಾಗೆ ಕ್ಷೇತ್ರ ಕೈ ತಪ್ಪುವ ಆತಂಕ ಎದುರಾಗಿದೆ. ಆದ್ರು ಸಂಸದೆ ಮಾತ್ರ ಕ್ಷೇತ್ರ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಏನೇ ಆದರೂ ತಮ್ಮ ಸ್ಪರ್ಧೆ ಮಂಡ್ಯದ ಮಣ್ಣಿನಿಂದಲೇ ಎಂದಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ. ಆದ್ರೆ ಜೆಡಿಎಸ್‌ ನಾಯಕರು ಗೆದ್ದಷ್ಟೇ ಖುಷಿಯಲ್ಲಿದ್ದಾರೆ.ಆದ್ರೆ.. ಬಿಜೆಪಿ ನೇತೃತ್ವದ NDA ಸೇರಿರೋ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಖಚಿತ ಅಂತಿದ್ದಾರೆ ದಳಪತಿಗಳು.

ಈ ಮಧ್ಯೆ ಮಂಡ್ಯದಲ್ಲಿ ಸ್ಥಳೀಯ ನಾಯಕರ ಟಿಕೆಟ್ ಕಿತ್ತಾಟ ಶಮನಕ್ಕೆ ಖುದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣಕ್ಕಿಳಿಯಲು ರೆಡಿಯಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಜೊತೆಗೆ ಸೋತ ನೆಲದಲ್ಲೇ ನಿಖಿಲ್ ಅವರನ್ನು ಮತ್ತೆ ಗೆಲ್ಲಿಸಲಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆದೆ. ಆದ್ರೆ ನಿಖಿಲ್ ಹಿಂದೇಟು ಹಾಕಿರೋ ಕಾರಣ ಹೆಚ್ಡಿಕೆ ಸ್ಪರ್ಧೆಯೇ ಖಚಿತ ಎನ್ನುತ್ತಿವೆ.

ಇದನ್ನೂ ಓದಿ-ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂಸದರ ಸಾಧನೆ:

* ಸಾಭಿಮಾನಿ ಸಂಸದೆಯಾಗಿ ಕಲಾಪದಲ್ಲಿ ಗಟ್ಟಿ ಧ್ವನಿ
* ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷೇತರ ಸಂಸದೆಯಾಗಿ ಯತ್ನ
* ಕೇಂದ್ರ ಸರ್ಕಾರದದಿಂದ ಜಿಲ್ಲೆಗೆ ಹಲವು ಯೋಜನೆಗಳು
* ಜಲಜೀವನ್ ಮಿಷನ್ ಸೇರಿ ಕೋಟ್ಯಂತರ ರೂ. ಅನುದಾನ 
* ಹೆಚ್ಚುವರಿ ರೈಲು, ರೈಲ್ವೆ ನಿಲ್ದಾಣ, ರಸ್ತೆಗಳ ಅಭಿವೃದ್ಧಿ 
* ಸ್ಥಗಿತವಾಗಿದ್ದ ಮೈಷುಗರ್ ಕಬ್ಬು ಅರಿಯಲು ಪ್ರಾರಂಭ
* ಪಾಂಡವಪುರದ PSSK ಸಕ್ಕರೆ ಕಾರ್ಖಾನೆ ಪುನರಾಂಭ 
* ಜಿಲ್ಲೆಯ ಅಕ್ರಮ ಗಣಿಗಾರಿಕೆ ವಿರುದ್ದ ಸದನದಲ್ಲಿ ಧ್ವನಿ 
* ಕೆ.ಆರ್.ಎಸ್ ಜಲಾಶಯ ಉಳಿಸುವ ಕೆಲಸಕ್ಕೆ ಬುನಾದಿ 
* ಬೇಬಿ ಬೆಟ್ಟ ಸೇರಿ ಹಲವೆಡೆ ಅಕ್ರಮ ಗಣಿಗಾರಿಕೆಗೆ ಬ್ರೇಕ್‌
* ರೈತರಿಗೆ ಕೇಂದ್ರದ ಯೋಜನೆ ಜಾರಿಗೆ ತರಲು ಪ್ರಯತ್ನ
* ಅತಿ ಹೆಚ್ಚು ದಿಶಾ ಸಭೆ ನಡೆಸಿದ ದೇಶದ ಮೊದಲ ಸಂಸದೆ 

ಹಾಗ್‌ ನೋಡಿದ್ರೆ.. ಹಾಲಿ ಸಂಸದೆ ಸುಮಲತಾ ಅವರ ರಿಪೋರ್ಟ್ ಕಾರ್ಡ್‌ ಗ್ರಾಫ್ ಚೆನ್ನಾಗಿದೆ. ಕಳೆದ 5 ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪರಿಶ್ರಮ ಕಾಣಿಸುತ್ತಿದೆ. ಜೊತೆಗೆ ಈಗ ಮಂಡ್ಯದ ನೆಲದ ವಾಸನೆ ಜೊತೆ ಸುಮಲತಾ ಅಂಬರೀಶ್‌ ಹೇಗೆ ಬೆರೆತಿದ್ದಾರೆ ಅಂತ ಗಮನಿಸೋಣ..

ಸುಮಲತಾ ಪ್ಲಸ್ 
1. ಸಂಸತ್ತಿನಲ್ಲಿ ಉತ್ತಮ ಮಾತುಗಾರಿಕೆ
2. ಕೇಂದ್ರ ನಾಯಕರ ಜತೆ ಉತ್ತಮ ನಂಟು
3. ಜಿಲ್ಲೆಯಲ್ಲಿ ವಿಶಿಷ್ಟ ರಾಜಕೀಯ ಪ್ರಭಾವ 
4. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಗುಣ
5. ಕೇಂದ್ರದಿಂದ ಹೆಚ್ಚಿನ ಅನುದಾನ-ಅಭಿವೃದ್ಧಿ
6. ಕೈ ನಾಯಕರ ಜೊತೆ ಉತ್ತಮ ಭಾಂಧವ್ಯ

ಸುಮಲತಾ ಮೈನಸ್ 
1. ಜನರ ಸಮಸ್ತೆ ಸ್ಪಂದಿಸದಿರುವುದು
2. ತಮ್ಮ ಬೆಂಬಲಿಗರಿಗಷ್ಟೇ ಮನ್ನಣೆ
3. JDS ನಾಯಕರ ಜೊತೆ ಸಾಮರಸ್ಯ ಕೊರತೆ
4. ಕ್ಷೇತ್ರದಲ್ಲಿ ಮನೆ ಮಾಡುವುದಾಗಿ ಹೇಳಿ ತಪ್ಪಿದ್ದು
5. ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಮಾಡದಿರುವುದು

ಅಂದ್‌ ಹಾಗೆ.. ಸಿದ್ದರಾಮಯ್ಯ ಸರ್ಕಾರಕ್ಕೆ ಮಂಡ್ಯ ಕ್ಷೇತ್ರವು ಪ್ರತಿಷ್ಠೆಯಾಗಿ ಕಾಡುತ್ತಿದೆ. ಕಳೆದ ಬಾರಿ ಅಭ್ಯರ್ಥಿಯನ್ನ ಇಳಿಸದೆ ಪಕ್ಷೇತರ ಸಂಸದೆ ಸುಮಲತಾ ಬೆಂಬಲಿಸಿದ್ದ ಕಾಂಗ್ರೆಸ್‌ ಈ ಸಲ ಗೆಲುವಿಗೆ ಹಪಾಹಪಿಸುತ್ತಿದೆ. 

ಕಾಂಗ್ರೆಸ್ (ಪ್ಲಸ್ ಪಾಯಿಂಟ್)
1. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ 
2. ಸತತ ಚುನಾವಣೆಯಲ್ಲಿ ಗೆಲುವು
3. ಸಚಿವ ಚಲುವರಾಯಸ್ವಾಮಿ ನಾಯಕತ್ವ
4. 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಬಲ
5. 1 ಕ್ಷೇತ್ರದಲ್ಲಿ ರೈತ ಸಂಘದ ಬೆಂಬಲ 
6. ಸ್ಥಳೀಯ JDS ನಾಯಕರ ಒಡಕು
7. ಬಜೆಟ್‌ನಲ್ಲಿ ಹೊಸ ಕಾರ್ಖಾನೆ ಘೋಷಣೆ
8. ಪಂಚ ಗ್ಯಾರಂಟಿ ಯೋಜನೆಗಳು

ಕಾಂಗ್ರೆಸ್ (ಮೈನಸ್‌ ಪಾಯಿಂಟ್) 
1. ತಮಿಳುನಾಡಿಗೆ ಕಾವೇರಿ ಹರಿಬಿಟ್ಟ ಕಳಂಕ
2. ಗ್ಯಾರಂಟಿ ಯೋಜನೆಗಳ ಗೊಂದಲ
3. JDS ಮತ್ತು BJP ಮೈತ್ರಿಯ ಲಾಭ
4. ಜಿಲ್ಲೆಯಲ್ಲಿ JDS ಮೇಲಿನ ಅನುಕಂಪ
5. ಪ್ರಬಲ ಅಭ್ಯರ್ಥಿ ಇಲ್ಲದಿರೋದು
6. ಕೆರೆಗೋಡು ಧ್ಚಜ ವಿವಾದ

ಇದಿಷ್ಟು ಆಡಳಿತರೂಢ ಕಾಂಗ್ರೆಸ್‌ ಪಕ್ಷದ ಪ್ಲಸ್‌ ಮತ್ತು ಮೈನಸ್‌. ಈಗ ಬಿಜೆಪಿಯ ಪಾಸಿಟಿವ್‌ ಮತ್ತು ನೆಗೆಟಿವ್‌ ಹೇಗಿದೆ ಅಂದ್ರೆ... ಒಕ್ಕಲಿಗರ ಮತಕೋಟೆಯಲ್ಲಿ ದಳಪತಿಗಳ ಜೊತೆ ಕೇಸರಿ ಬ್ರಿಗೇಡ್‌ ಜಂಟಿ ಕಾರ್ಯಾಚರಣೆಗೆ ಮುಂದಾಗಿದೆ. ಇದು ಕೊಂಚ ಭರವಸೆ ಮೂಡಿಸಿದೆ.

JDS-BJP ಮೈತ್ರಿ ಪ್ಲಸ್

1. JDS-BJP ಮೈತ್ರಿ
2. ಸರ್ಕಾರದಲ್ಲಿ ಒಕ್ಕಲಿಗರ ಕಡೆಗಣನೆ
3. ಮೋದಿ ಅಲೆ ಮತ್ತು ಹಿಂದುತ್ವ
4. ‌ರೈತರ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ
5. ಡಿಕೆ ಶಿವಕುಮಾರ್ ಅಸಂಬದ್ಧ ಹೇಳಿಕೆಗಳು
6. ಕೆರೆಗೋಡು ಪ್ರಕರಣದಲ್ಲಿ ಹಿಂದುತ್ವದ ಅಲೆ

JDS-BJP ಮೈತ್ರಿ ಮೈನಸ್‌ 

1. ಮೈತ್ರಿ ನಡುವೆಯೂ ಒಳೇಟು ಭೀತಿ
2. JDS ನಾಯಕರಲ್ಲಿ ಹೊಂದಾಣಿಕೆ ಕೊರತೆ
3. ಅಲ್ಪಸಂಖ್ಯಾತರ ಮತ ಕೈತಪ್ಪುವ ಸಾಧ್ಯತೆ
4. ಅಸೆಂಬ್ಲಿ ಚುನಾವಣೆ ಸೋಲಿನ ಬಳಿಕ ಮೌನ
5. ಇನ್ನೂ ಎಚ್ಚೆತ್ತುಕೊಳ್ಳದ JDS ನಾಯಕರು
6. ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಪ್ರಾಬಲ್ಯ
7. ಮೈತ್ರಿಯಿಂದಾಗಿ ಅಭ್ಯರ್ಥಿ ಆಯ್ಕೆ ಗೊಂದಲ

ಅಸಲಿಗೆ ಬಿಜೆಪಿಗೆ ನೆಲೆ ಕಡಿಮೆಯೇ.. ಆದ್ರೆ ಜೆಡಿಎಸ್‌ ಮತ್ತು ಕಾಂಗ್ರೆಸ್ ಬೇರುಗಳು ಕಾವೇರಿ ಕೊಳ್ಳದಲ್ಲಿ ಆಳವಾಗಿ ಬೇರೂರಿವೆ. ಮೈಸೂರು-ಬೆಂಗಳೂರು ಆರು ಪಥ ರಸ್ತೆ ನಿರ್ಮಾಣದಿಂದ ಬಿಜೆಪಿ ಕೂಡ ಲೈಮ್‌ಟೈಮಿಗೆ ಬಂದಿದೆ. ಜೊತೆಗೆ ಹಾಲಿ ಸಂಸದೆ ಸುಮಲತಾ ಕೇಸರಿ ಬ್ರಿಗೇಡ್‌ಗೆ ಅಂಡಿಕೊಂಡಿರೋ ಕಾರಣ ಕಮಲ ಎಲ್ಲರಿಗೂ ಕಾಣುವಂತಾಗಿದೆ. ಆಕಾಂಕ್ಷಿಗಳು ಬೇರೆ ಕ್ಷೇತ್ರದಂತೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಕಾಂಗ್ರೆಸ್‌ ಕೂಡ ಅಭ್ಯರ್ಥಿಯನ್ನ ಅಂತಿಮ ಮಾಡಿಕೊಂಡಿದೆ. 

ಇದನ್ನೂ ಓದಿ: ಬಿಸಿಲು ಜೋರು.. ದಾಹ ತಣಿಸುವ ಹಣ್ಣುಗಳ ಬೆಲೆ ತುಸು ಏರಿಕೆ

ಸಮರ ಕಲಿಗಳು
ಟಿಕೆಟ್ ಆಕಾಂಕ್ಷಿಗಳು
* ಕಾಂಗ್ರೆಸ್ -ಸ್ಟಾರ್ ಚಂದ್ರು @ ವೆಂಕಟರಮಣೆಗೌಡ
* ಜೆಡಿಎಸ್ -ಕುಮಾರಸ್ವಾಮಿ/ ಪುಟ್ಟರಾಜು 
* ಜೆಡಿಎಸ್‌-ಸುರೇಶ್ ಗೌಡ, ಮಾಜಿ ಶಾಸಕ
* ಬಿಜೆಪಿ -ಸುಮಲತಾ ಅಂಬರೀಶ್
* ಪಕ್ಷೇತರ -ಸುಮಲತಾ (ಮೈತ್ರಿ ಟಿಕೆಟ್‌ ತಪ್ಪಿದರೆ)

ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ವಿವರ ನೋಡೋದಾದ್ರೆ ಒಟ್ಟು ಮತದಾರರ ಸಂಖ್ಯೆ- 17 ಲಕ್ಷದ 49 ಸಾವಿರದ 388.. ಹಾಗೆಯೇ ಪುರುಷರ ಮತದಾರರು 8 ಲಕ್ಷದ 66 ಸಾವಿರದ 370. ಮಹಿಳಾ ಮತದಾರರು ಎಷ್ಟೆಂದರೆ 8 ಲಕ್ಷದ 88 ಸಾವಿರದ 854. ಅಸಲಿಗೆ ಒಕ್ಕಲಿಗರ ಮತಗಳು ಪ್ರಮುಖವಾಗಿದ್ದರೂ ಅಹಿಂದ ಮತಗಳೇ ಇಲ್ಲಿನ ನಿರ್ಣಾಯಕ. ಯಾವ ಜಾತಿ ಎಷ್ಟೆಷ್ಟು ಮತದಾರರು ಅಂತ ನೋಡೋಣ ಬನ್ನಿ...

ಜಾತಿವಾರು ಲೆಕ್ಕಾಚಾರ 

ಒಕ್ಕಲಿಗರು-7,89,420
ದಲಿತರು - 3,03,601
ಲಿಂಗಾಯತರು-1,61,436
ಕುರುಬರು- 1,71,854
ವಿಶ್ವಕರ್ಮ- 31,550
ಮುಸ್ಲಿಮರು- 1,29,154
ಕ್ರೈಸ್ತರು- 26,623
ಬ್ರಾಹ್ಮಣರು- 24,915
ಬೆಸ್ತರು- 56,219
ಇತರೆ- 55,012
ಒಟ್ಟು- 17,49,388

ಒಟ್ನಲ್ಲಿ ಮಂಡ್ಯ ಕ್ಷೇತ್ರವು ರಾಜ್ಯದ ಹೈವೋಲ್ಟೇಜ್ ರಣಕಣವಾಗಿ ಮಾರ್ಪಟ್ಟಿದೆ. ಜಾತ್ಯತೀತ ಜನತಾದಳದ ನಾಯಕರ ಜೊತೆ ಸ್ವಾಭಿಮಾನಿ ಲೇಡಿ ಸುಮಲತಾರ ಪೈಪೋಟಿ ದೊಡ್ಡ ಮಟ್ಟದ ಸದ್ದು ಉಂಟು ಮಾಡಿದೆ. ಆದ್ರೆ ಯಾವ ರೀತಿ ಕೂಡಿ ಕಳೆದರೂ ಸುಮಲತಾ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಿಲ್ಲ. ಹಾಗಂತ ಜೆಡಿಎಸ್‌ ನಾಯಕರು ಕೂಡ ಕೈ ಕಟ್ಟಿ ಕೂತಿಲ್ಲ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News