ಬೆಳಗಾವಿಯನ್ನು 3 ಜಿಲ್ಲೆಗಳನ್ನಾಗಿ ವಿಂಗಡಿಸಬೇಕು, ಶೀಘ್ರದಲ್ಲೇ ಈ ಕಾರ್ಯ ನಡೆಯುತ್ತದೆ: ಉಮೇಶ ಕತ್ತಿ

Umesh Katti: ಸಚಿವ ಸಂಪುಟ ಪುನರ್ ರಚನೆ, ಬೆಳಗಾವಿ ಜಿಲ್ಲೆ ವಿಂಗಡಣೆ ಬಗ್ಗೆ ಸಚಿವ ಉಮೇಶ ಕತ್ತಿ ಹೇಳಿದ್ದು ಹೀಗೆ..

Edited by - Zee Kannada News Desk | Last Updated : Jan 18, 2022, 04:35 PM IST
  • ಬೆಳಗಾವಿ ವಿಸ್ತಾರವಾದ ಜಿಲ್ಲೆಯಾಗಿದೆ
  • ಬೆಳಗಾವಿಯನ್ನು 3 ಜಿಲ್ಲೆಗಳನ್ನಾಗಿ ವಿಂಗಡಿಸಬೇಕು
  • ಕೆಲವು ಕಾರಣಗಳಿಂದ ತಡವಾಗುತ್ತಿದೆ
  • ಆದರೆ ಮುಂದಿನ ದಿನಗಳಲ್ಲಿ ಕಾರ್ಯಗತ ಆಗುತ್ತದೆ
  • ಸಚಿವ ಉಮೇಶ ಕತ್ತಿ ಹೇಳಿಕೆ
ಬೆಳಗಾವಿಯನ್ನು 3 ಜಿಲ್ಲೆಗಳನ್ನಾಗಿ ವಿಂಗಡಿಸಬೇಕು, ಶೀಘ್ರದಲ್ಲೇ ಈ ಕಾರ್ಯ ನಡೆಯುತ್ತದೆ: ಉಮೇಶ ಕತ್ತಿ title=
ಉಮೇಶ ಕತ್ತಿ

ಅಥಣಿ:  ಬೆಳಗಾವಿಯನ್ನು (Belagavi) 3 ಜಿಲ್ಲೆಗಳನ್ನಾಗಿ ವಿಂಗಡಿಸಬೇಕು, ಶೀಘ್ರದಲ್ಲೇ ಈ ಕಾರ್ಯ ನಡೆಯುತ್ತದೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು. 

ಅಥಣಿ ಪಟ್ಟಣದಲ್ಲಿ ಲಕ್ಷ್ಮಿ ಸಸ್ಯೋದ್ಯಾನ ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿದ ಸಚಿವ ಉಮೇಶ ಕತ್ತಿ (Umesh Katti), ಬೆಳಗಾವಿ ವಿಸ್ತಾರವಾದ ಜಿಲ್ಲೆಯಾಗಿದೆ. ಅದನ್ನು ಮೂರು ಜಿಲ್ಲೆಗಳಾಗಿ ವಿಂಗಡಣೆ ಮಾಡಬೇಕು. ಕೆಲವು ಕಾರಣಗಳಿಂದ ತಡವಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕಾರ್ಯಗತ ಆಗುತ್ತದೆ ಎಂದು ತಿಳಿಸಿದರು. 

 

 

ಶ್ರೀಗಂಧ (Sandal) ಬೆಳೆಯಲು ರೈತರಿಗೆ ಯಾವುದೇ ತೊಂದರೆಯಾಗದಂತೆ ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ತರಬೇಕೆಂದು ಅರಣ್ಯ ಇಲಾಖೆ ಯೋಜನೆಯನ್ನು ರೂಪಿಸಿದೆ. ಅಲ್ಲದೆ ಕೆಲವು ನಿಯಮಗಳನ್ನು ಸಹ ಸಡಿಲ ಮಾಡಲಾಗಿದೆ.  ಇದರಿಂದ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು. 

ಸಂಪುಟ ಪುನರ್ ರಚನೆ  ಸತ್ಯಕ್ಕೆ ದೂರದ ಮಾತು:

ಸಚಿವ ಸಂಪುಟ ಪುನರ್ ರಚನೆ ಮತ್ತು ವಿಸ್ತರಣೆ  (Cabinet Expansion) ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿಯಾದ ತಕ್ಷಣ ನಿಮಗೆ ಹೇಳುತ್ತೇನೆ. ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಎಂಬುದು ಸತ್ಯಕ್ಕೆ ದೂರದ ಮಾತು. ಸಚಿವ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬುವುದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

ಇದನ್ನೂ ಓದಿ: ಬಿಗ್ ರಿಲೀಫ್! ಈ ವಾರವೇ ಅಂತ್ಯಗೊಳ್ಳುತ್ತಾ ನೈಟ್ ಮತ್ತು ವೀಕೆಂಡ್ ಕರ್ಫ್ಯೂ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News