ಬೆಂಗಳೂರು: ದಾವಣೆಗೆರೆಯಲ್ಲಿ ರೈತರ ಸಮಾವೇಶದಲ್ಲಿ ಭಾಗವಹಿಸಿ ಸಿದ್ದರಾಮಯ್ಯನವರದ್ದು ಸೀದಾ ರೂಪಯ್ಯ ಸರ್ಕಾರ ಎಂದು ತೆಗಳಿದ್ದ ಪ್ರಧಾನಿ ಮೋದಿಗೆ ಇಂದು ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಅವರಿಗೆ ಟಾಂಗ್ ನೀಡಿದ್ದಾರೆ.
Modi can waive 2.41 lakh cr loans of large industrialists but can’t waive loans of millions of farmers.
Modi encourages food imports & discourages food exports, thereby breaking farmer’s back.
Yet @narendramodi & @BSYBJP fool farmers with PR drama of collecting fistful of rice. https://t.co/oIyyNw696b
— Siddaramaiah (@siddaramaiah) February 28, 2018
"ಮೋದಿಯವರು 2.41 ಲಕ್ಷ ಕೋಟಿ ಬೃಹತ್ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತಾರೆ,ಆದರೆ ಲಕ್ಷಾಂತರ ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ".
ಮೋದಿಯವರು ಆಹಾರ ಆಮದಿಗೆ ಉತ್ತೇಜನ ನೀಡುತ್ತಾರೆ,ಆದರೆ ರಪ್ತಿಗೆ ಅವರು ಉತ್ತೇಜನ ನೀಡುತ್ತಿಲ್ಲ,ಆ ಮೂಲಕ ರೈತರ ಬೆನ್ನೆಲುಬನ್ನು ಮುರಿದಿದ್ದಾರೆ.ಆದರೂ ಕೂಡಾ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನವರು ಮುಷ್ಠಿ ಅನ್ನವನ್ನು ಸಂಗ್ರಹಿಸುವ ನಾಟಕವಾಡುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.