ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ನಿದ್ರಾವಸ್ಥೆಯಲ್ಲಿವೆ-ಸಿದ್ದರಾಮಯ್ಯ

ಮೊದಲ ಅಲೆಯ ಅನುಭವ ಇದ್ದರೂ, ಎರಡನೇ ಅಲೆ ಜನವರಿಯಲ್ಲಿ ಬರುವುದಾಗಿ ಮಾಹಿತಿ ಇದ್ದರೂ ಈ ಸರಕಾರಗಳು ಎಚ್ಚೆತ್ತುಕೊಳ್ಳಲಿಲ್ಲ. ಎಲ್ಲರಿಗೂ ಲಸಿಕೆ ಕೊಡುವುದೇ ಇದಕ್ಕೆ ಪರಿಹಾರ ಎಂದು ತಜ್ಞರು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ನಿದ್ರಾವಸ್ಥೆಯಲ್ಲಿವೆ. ಹೀಗಾಗಿ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

Last Updated : May 14, 2021, 04:36 PM IST
  • ಲಸಿಕೆ ಬರಲು ತಿಂಗಳುಗಟ್ಟಲೆ ಸಮಯ ಬೇಕು ಅಂತಾ ಮುಖ್ಯಕಾರ್ಯದರ್ಶಿಗಳು ಹೇಳುತ್ತಾರೆ.
  • ಕೋವಿಶೀಲ್ಡ್ ಎರಡನೇ ಲಸಿಕೆಗೆ 12 ರಿಂದ 16 ವಾರ ಅಂತರ ತೆಗೆದುಕೊಳ್ಳಬಹುದು ಎಂದು ಈಗ ಹೇಳುತ್ತಿದ್ದಾರೆ. ಆ ಮೂಲಕ ಜನರು, ನ್ಯಾಯಾಲಯಗಳ ದಾರಿ ತಪ್ಪಿಸುತ್ತಿದ್ದಾರೆ.
  • ದೇಶದ ಎಲ್ಲ ನಾಗರಿಕರು ಉಚಿತ ಲಸಿಕೆ ಪಡೆಯಬೇಕು.
ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ನಿದ್ರಾವಸ್ಥೆಯಲ್ಲಿವೆ-ಸಿದ್ದರಾಮಯ್ಯ title=
Photo Courtesy: Facebook

ಬೆಂಗಳೂರು: ಮೊದಲ ಅಲೆಯ ಅನುಭವ ಇದ್ದರೂ, ಎರಡನೇ ಅಲೆ ಜನವರಿಯಲ್ಲಿ ಬರುವುದಾಗಿ ಮಾಹಿತಿ ಇದ್ದರೂ ಈ ಸರಕಾರಗಳು ಎಚ್ಚೆತ್ತುಕೊಳ್ಳಲಿಲ್ಲ. ಎಲ್ಲರಿಗೂ ಲಸಿಕೆ ಕೊಡುವುದೇ ಇದಕ್ಕೆ ಪರಿಹಾರ ಎಂದು ತಜ್ಞರು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ನಿದ್ರಾವಸ್ಥೆಯಲ್ಲಿವೆ. ಹೀಗಾಗಿ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ : Ganga River- ಇಲ್ಲಿಯವರೆಗೆ 73 ಶವಗಳು ಪತ್ತೆ, ಜೆಸಿಬಿಯಿಂದ ಮುಂದುವರೆದ ಸಮಾಧಿ ಕಾರ್ಯ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಲಸಿಕೆ ಕೋಡುವುದರಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ನಾವು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೇವೆ. ನಾವು ಹೇಳುವುದರ ಜತೆಗೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಲಸಿಕೆ ವಿಚಾರವಾಗಿ ಎರಡೂ ಸರ್ಕಾರಗಳಿಗೆ ಛೀಮಾರಿ ಹಾಕಿವೆ. ನಿನ್ನೆ ಕೂಡ ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಛಿಮಾರಿ ಹಾಕಿದೆ.ನಾನು ನನ್ನ ಇಡೀ ರಾಜಕೀಯ ಜೀವನದಲ್ಲಿ ಇಷ್ಟು ಬೇಜವಾಬ್ದಾರಿ ಸರ್ಕಾರಗಳನ್ನು ನೋಡಿರಲಿಲ್ಲ. ಕೋವಿಡ್ 19 ಸಾಂಕ್ರಾಮಿಕ ರೋಗ ಬಂದು ಒಂದು ವರ್ಷಕ್ಕೂ ಹೆಚ್ಚಿನ ಸಮಯವಾಗಿದೆ. 

ಲಸಿಕೆ ಬರಲು ತಿಂಗಳುಗಟ್ಟಲೆ ಸಮಯ ಬೇಕು ಅಂತಾ ಮುಖ್ಯಕಾರ್ಯದರ್ಶಿಗಳು ಹೇಳುತ್ತಾರೆ. ಕೋವಿಶೀಲ್ಡ್ ಎರಡನೇ ಲಸಿಕೆಗೆ 12 ರಿಂದ 16 ವಾರ ಅಂತರ ತೆಗೆದುಕೊಳ್ಳಬಹುದು ಎಂದು ಈಗ ಹೇಳುತ್ತಿದ್ದಾರೆ. ಆ ಮೂಲಕ ಜನರು, ನ್ಯಾಯಾಲಯಗಳ ದಾರಿ ತಪ್ಪಿಸುತ್ತಿದ್ದಾರೆ. ದೇಶದ ಎಲ್ಲ ನಾಗರಿಕರು ಉಚಿತ ಲಸಿಕೆ ಪಡೆಯಬೇಕು.

ಇದನ್ನೂ ಓದಿ : ಯುವಕರಿಗೆ ಕೊರೊನಾ ಬರುವ ಸಾಧ್ಯತೆ ಜಾಸ್ತಿ..! ಕಾರಣವೇನು ಗೊತ್ತೇ

ರಾಜ್ಯದಲ್ಲಿ 3.26 ಕೋಟಿ ಜನ 18 ರಿಂದ 44 ವಯೋಮಾನದವರಿದ್ದಾರೆ. ವ್ಯರ್ಥ ಲಸಿಕೆ ಸೇರಿ ಇವರಿಗೆ ಎರಡು ಡೋಸ್ ಗೆ 7 ಕೋಟಿ ಲಸಿಕೆ ಬೇಕು. 1 ಕೋಟಿ ಲಸಿಕೆ ಪಡೆಯಲು 300 ಕೋಟಿ ರುಪಾಯಿ ಬೇಕು.7 ಕೋಟಿ ಲಸಿಕೆಗೆ 2100 ಕೋಟಿ ಬೇಕಾಗುತ್ತದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಳೆದ ಅಕ್ಟೋಬರ್, ನವೆಂಬರ್ ನಿಂದ ಲಸಿಕೆ ಉತ್ಪಾದಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.  

ಹೀಗಾಗಿ ನಮ್ಮ ಪಕ್ಷದ ಶಾಸಕರಿಂದ ಅವರ ಕ್ಷೇತ್ರದ ಅಭಿವೃದ್ಧಿಗೆ ಬರುವ ಅನುದಾನದಲ್ಲಿ ತಲಾ 1 ಕೋಟಿ ರೂಪಾಯಿಯನ್ನು ಲಸಿಕೆ ಖರೀದಿಗೆ ಸಂಗ್ರಹಿಸಲಿದ್ದೇವೆ. ಅದು ಸೇರಿ ಒಟ್ಟು 100 ಕೋಟಿ ರೂ. ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ ಶಾಸಕರು ಜನರಿಗೆ ನೆರವಾಗಲೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ನಾವು ಕೊಡುವುದರಿಂದ ಎಲ್ಲವೂ ಆಗುತ್ತದೆ ಎಂದು ಹೇಳುವುದಿಲ್ಲ. ಆದರೆ ಈ ಪರಿಸ್ಥಿತಿಯಲ್ಲಿ ನಮ್ಮ ಕೈಲಾದ ನೆರವನ್ನು ನಾವು ನೀಡುತ್ತಿದ್ದೇವೆ.

ಇದನ್ನೂ ಓದಿCorona Treatment: ಕರೋನಾ ಚಿಕಿತ್ಸೆಗಾಗಿ ಸರ್ಕಾರ ನೀಡುತ್ತಿದೆ 5 ಲಕ್ಷ ರೂಪಾಯಿ, ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

ಸರ್ಕಾರ ಪರೀಕ್ಷೆ ಕಡಿಮೆ ಮಾಡಬಾರದು. ಸಮುದಾಯ ಆಸ್ಪತ್ರೆ ಹಾಗೂ ಇತರೆ ಕಡೆಗಳಲ್ಲಿ ಪರೀಕ್ಷೆ ನಡೆಸುವುದನ್ನು ನಿಲ್ಲಿಸಲಾಗಿದೆ. ರೋಗ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಿದರೆ ಮಾತ್ರ ಸೋಂಕು ತಹಂಬದಿಗೆ ತರಲು ಸಾಧ್ಯ. ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಪಡಿತರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಬೇಕು ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News