Bizarre Names: ಗೂಗಲ್, ಬಸ್, ಟ್ರೈನ್, ಹೈ ಕೋರ್ಟ್, ಡಾಲರ್ ಇವು ಮನುಷ್ಯರ ಹೆಸರು ಅಂತ ಹೇಳಿದ್ರೆ ನೀವು ನಂಬ್ತೀರಾ?

Bizarre Names In Hikki-Pikki Tribes: ಇದುವರೆಗೆ ನೀವು ಗೂಗಲ್ ನಲ್ಲಿ ಹಲವು ಬಾರಿ ಸರ್ಚ್ ಮಾಡಿರಬಹುದು. ಆದರೆ ನಮ್ಮ ದೇಶದ ಒಂದು ಭಾಗದಲ್ಲಿ ಜನರಿಗೆ ಗೂಗಲ್, ಕಾಫಿ ಇತ್ಯಾದಿ ಹೆಸರನ್ನಿಡುತ್ತಾರೆ ಎಂದು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಬನ್ನಿ ಆ ಪ್ರದೇಶ ಯಾವುದು ತಿಳಿದುಕೊಳ್ಳಲು ಪ್ರಯತ್ನಿಸೋಣ,  

Written by - Nitin Tabib | Last Updated : Mar 16, 2023, 03:07 PM IST
  • ಹಿಕ್ಕಿ-ಪಿಕ್ಕಿ ಸಮುದಾಯದ ಜನರು ತಮ್ಮ ಜೀವನೋಪಾಯಕ್ಕಾಗಿ ಮುಖ್ಯವಾಗಿ ಬೇಟೆಯ ಮೇಲೆ ಅವಲಂಭಿಸಿದ್ದಾರೆ.
  • ಈ ಜನರು ತಮ್ಮ ಜೀವನೋಪಾಯಕ್ಕಾಗಿ ದೇಶಾದ್ಯಂತ ಅಲೆದಾಟ ನಡೆಸಿ ಬೇಟೆಯಾಡುತ್ತಾರೆ.
  • ಹೀಗಾಗಿ ಹಲವು ಭಾಷೆಗಳಲ್ಲಿ ಮಾತನಾಡುವುದನ್ನು ಇವರು ಅರಿತುಕೊಂಡಿದ್ದಾರೆ.
Bizarre Names: ಗೂಗಲ್, ಬಸ್, ಟ್ರೈನ್, ಹೈ ಕೋರ್ಟ್, ಡಾಲರ್ ಇವು ಮನುಷ್ಯರ ಹೆಸರು ಅಂತ ಹೇಳಿದ್ರೆ ನೀವು ನಂಬ್ತೀರಾ? title=
ಹಿಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಜನರ ಹೆಸರುಗಳು!

Hikki-Pikki Tribe Of Karnataka: ಗೂಗಲ್ ಸರ್ಚ್ ಇಂಜಿನ್ ನಲ್ಲಿ ನಾವು ಹಲವು ರೀತಿಯ ಮಾಹಿತಿಗಾಗಿ ಹುಡುಕಾಟ ನಡೆಸುತ್ತೇವೆ. ಆದರೆ ದೇಶದ ಕೆಲವು ಭಾಗಗಳಲ್ಲಿ ಗೂಗಲ್, ಕಾಫಿ ಹೆಸರಿನ ಜನರೂ ಕೂಡ ವಾಸಿಸುತ್ತಾರೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಹೌದು, ಕೇಳಲು ವಿಚಿತ್ರ ಎನಿಸುತ್ತಿರಬಹುದು ಆದರೆ, ದೇಶದ ಕೆಲ ಭಾಗಗಳಲ್ಲಿ ಜನರಿಗೆ ಚಿತ್ರ-ವಿಚಿತ್ರ ಹೆಸರು ಇರುವುದು ಮಾತ್ರ ನಿಜ.

ಇದನ್ನೂ ಓದಿ-Viral Video: ಹುಡ್ಗಿಗಿ ಏನ್ ಮಾಡಾಕ್ ಹೋಗಿದ್ದ್ ಇಂವಾ ಇವನ್ ಗತಿ ಹಿಂಗಾಯ್ತ್ ! ವಿಡಿಯೋ ನೋಡ್ರಿ..

ಗೂಗಲ್ ಹಾಗೂ ಕಾಫಿ ಹೆಸರಿನ ವ್ಯಕ್ತಿಗಳು ಕರ್ನಾಟಕದ ಭದ್ರಪುರ್ ನಿವಾಸಿಗಳಾಗಿದ್ದಾರೆ. ಹಿಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಈ ಜನರು ಸೇರಿದ್ದಾರೆ. ಈ ಜನರು ತಮ್ಮ ಮಕ್ಕಳಿಗೆ ಇದೇ ರೀತಿಯ ಹೆಸರನ್ನಿಡುತ್ತಾರೆ. ಈ ಜನರು ತಮ್ಮ ಮಕ್ಕಳಿಗೆ ವಿಭಿನ್ನವಾಗಿ ಹೆಸರನ್ನಿಡುವುದನ್ನು ರೂಢಿಸಿಕೊಂಡಿದ್ದಾರೆ. ಈ ಜನಜಾತಿಯ ಮಕ್ಕಳಲ್ಲಿ Google, Coffee, Mysore Pak, British, Train, Bus, Glucose, High Court, Two, America, Obama, Dollar ಇತ್ಯಾದಿಗಳು  ಶಾಮೀಲಾಗಿದ್ದಾರೆ. 

ಇದನ್ನೂ ಓದಿ-Viral Video: ಹುಡ್ಗೀನ ಪಾರ್ಕ್ ಗೆ ಕರೆದು ಅಂಥದ್ದೇನ್ ಮಾಡಿದ ಹುಡ್ಗ, ನೆಟ್ಟಿಗರ ಪಿತ್ತ ನೆತ್ತಿಗೇರಿದೆ!

ಹಿಕ್ಕಿ-ಪಿಕ್ಕಿ ಸಮುದಾಯದ ಜನರು ತಮ್ಮ ಜೀವನೋಪಾಯಕ್ಕಾಗಿ ಮುಖ್ಯವಾಗಿ ಬೇಟೆಯ ಮೇಲೆ ಅವಲಂಭಿಸಿದ್ದಾರೆ. ಈ ಜನರು ತಮ್ಮ ಜೀವನೋಪಾಯಕ್ಕಾಗಿ ದೇಶಾದ್ಯಂತ ಅಲೆದಾಟ ನಡೆಸಿ ಬೇಟೆಯಾಡುತ್ತಾರೆ.
ಹೀಗಾಗಿ ಹಲವು ಭಾಷೆಗಳಲ್ಲಿ ಮಾತನಾಡುವುದನ್ನು ಇವರು ಅರಿತುಕೊಂಡಿದ್ದಾರೆ. ಈ ಜನರು ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಇವರು ಮಾತನಾಡುತ್ತಾರೆ. ಈ ಸಮುದಾಯದ ಜನರ ಆಫೀಸಿಯಲ್ ರೆಕಾರ್ಡ್ ಇರುವುದಿಲ್ಲ. ಆದರೆ, ಇವರ ಬಳಿ ಮತದಾರರ ಗುರುತು ಚೀಟಿ ಇದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News