ಗೃಹ ಜ್ಯೋತಿ ಯೋಜನೆ ಬಗ್ಗೆ ನಿಮಗಿರುವ ಪ್ರಶ್ನೆಗಳಿಗೆ ಉತ್ತರ

ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ "ಗೃಹ ಜ್ಯೋತಿ" ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.   

Written by - Prashobh Devanahalli | Last Updated : Jun 7, 2023, 04:54 PM IST
  • ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಜೂನ್ 15 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.
  • ನಾಗರೀಕರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
  • ಇದಲ್ಲದೆ, ಗೃಹ ಜ್ಯೋತಿ ಯೋಜನೆಗೆ ಸ್ಮಾರ್ಟ್ ಫೋನ್, ಲಾಪ್ ಟಾಪ್, ಕಂಪ್ಯೂಟರ್ ಮೂಲಕ ಸೇವಾಸಿಂಧು ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಳ್ಳಬೇಕು.
ಗೃಹ ಜ್ಯೋತಿ ಯೋಜನೆ ಬಗ್ಗೆ ನಿಮಗಿರುವ ಪ್ರಶ್ನೆಗಳಿಗೆ ಉತ್ತರ title=

ಬೆಂಗಳೂರು : ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆ ಪೈಕಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ "ಗೃಹ ಜ್ಯೋತಿ " ಘೋಷಣೆ ಆಗಿದೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ಗೊಂದಲಗಳಿವೆ. ಅಂತಹ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

ಪ್ರಶ್ನೆ 1: ಏನಿದು ಗೃಹ ಜ್ಯೋತಿ ಸ್ಕೀಂ?
ಉತ್ತರ: ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ  ಯೋಜನೆಯಾಗಿದೆ. 

ಪ್ರಶ್ನೆ 2 : ಈ ಯೋಜನೆಗೆ ನಾ‌ನು ಅರ್ಹನಾ? 
ಉತ್ತರ: ಕರ್ನಾಟಕ ರಾಜ್ಯದ ಎಲ್ಲಾ ಗೃಹ ವಿದ್ಯುತ್ ಬಳಕೆದಾರರು ಈ‌ ಯೋಜನೆಗೆ ಅರ್ಹರು

ಪ್ರಶ್ನೆ 3: ಈ‌ ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆ ಹೇಗೆ?
ಉತ್ತರ: ಸ್ಮಾರ್ಟ್ ಫೋನ್ ಲಾಪ್ ಟಾಪ್, ಕಂಪ್ಯೂಟರ್ ಮೂಲಕ ಸೇವಾಸಿಂಧು ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಳ್ಳಬೇಕು. ಅತೀ ಶೀಘ್ರದಲ್ಲೇ ಅರ್ಜಿ ಬಿಡುಗಡೆಯಾಗಲಿದೆ.  ಜೂನ್ 15 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.

ಪ್ರಶ್ನೆ 4: ಈ ಯೋಜನೆ ಯಾವಾಗಿನಿಂದ ಜಾರಿ? 
ಉತ್ತರ: ಆಗಸ್ಟ್ 1,2023 ರಿಂದ ( ಜುಲೈ 2023 ರ ಬಳಕೆಯ ಪ್ರಮಾಣ) ಜಾರಿಗೆ ಬರಲಿದೆ.

ಪ್ರಶ್ನೆ  5: ಖುದ್ದು ಅರ್ಜಿ ಸಲ್ಲಿಕೆಗೆ ಅವಕಾಶ ಇದ್ಯಾ? 
ಉತ್ತರ: ನಾಗರೀಕರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಪ್ರೆಶ್ನೆ 6 : ಯಾವೆಲ್ಲಾ ದಾಖಲೆಗಳು ಅಗತ್ಯವಿದೆ?
ಉತ್ತರ: ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಬಾಡಿಗೆದಾರರ ದಾಖಲಾತಿ, ರೆಂಟಲ್/ ಲೀಝ್ ಅಗ್ರಿಮೆಂಟ್, ಓಟರ್ ಐಡಿ

ಪ್ರಶ್ನೆ 7 : ಅರ್ಜಿ ಸಲ್ಲಿಕೆಗೆ ಶುಲ್ಕ ಇದ್ಯಾ?
ಉತ್ತರ: ಯಾವುದೇ ಶುಲ್ಕ ಪಾವತಿಯ ಅಗತ್ಯ ಇಲ್ಲ.

ಪ್ರಶ್ನೆ 8: ಜೂನ್‌ ತಿಂಗಳ ವಿದ್ಯುತ್ ಶುಲ್ಕ ಭರಿಸಬೇಕಾ? 
ಉತ್ತರ: ಹೌದು 

ಪ್ರಶ್ನೆ 9: ಒಂದಕ್ಕಿಂತ ಹೆಚ್ಚು ವಿದ್ಯುತ್ ಮೀಟರ್ ಇದ್ದರೆ, ಎಲ್ಲ ಮೀಟರ್ ಗೂ ಈ ಯೋಜನೆ ಅನ್ವಯಿಸುತ್ತಾ? 
ಉತ್ತರ: ಅನ್ವಯ ಆಗಲ್ಲ

ಪ್ರಶ್ನೆ 10: ಯೋಜನೆ ಅರ್ಜಿ ಸಲ್ಲಿಕೆ ನಂತರ ರಶೀದಿ ಸಿಗುತ್ತಾ? 
ಉತ್ತರ: ಹೌದು, ಸೇವಾಸಿಂಧುನಲ್ಲಿ ಅರ್ಜಿ ಸಲ್ಲಿಕೆ ನಂತರ ಎಸ್ ಎಂ ಎಸ್  ಅಥವಾ ಇಮೇಲ್ ಮೂಲಕ ರಶೀದಿ ಸಿಗಲಿದೆ.

ಪ್ರಶ್ನೆ 11:  ಅಪಾರ್ಟ್ಮೆಂಟ್ ನಲ್ಲಿ‌ ವಾಸ ಇರುವವರಿಗೆ ಯೋಜನೆ ಅನ್ವಯ ಆಗುತ್ತಾ?
ಉತ್ತರ: ಹೌದು, ಪ್ರತ್ಯೇಕ ಮೀಟರ್ ಇದ್ದರೆ ಯೋಜನೆ ಅನ್ವಯ. 

ಪ್ರಶ್ನೆ 12: ನಾನು ಬಾಡಿಗೆದಾರ, ವಿದ್ಯುತ್ ಬಿಲ್ ಮಾಲೀಕರ ಹೆಸರಿನಲ್ಲಿ ಇದೆ, ನಾನು ಫಲಾನುಭವಿ ಆಗಬಹುದಾ? 
ಉತ್ತರ: ಹೌದು, ಯೋಜನೆಗೆ ಫಲಾನುಭವಿ ಆಗಲು ಬಾಡಿಗೆ ಮನೆಯಲ್ಲಿ ವಾಸ ಇರುವ ದಾಖಲಾತಿ/ ಅದೇ ವಿಳಾಸದ ವೋಟರ್ ಐಡಿ, ಆಧಾರ್ ಇದ್ದರೆ ಫಲಾನುಭವಿ ಆಗಬಹುದು. 

ಪ್ರಶ್ನೆ 13: ಎರಡು ತಿಂಗಳ ಹಿಂದೆ ನಾನು ಮನೆ ಬದಲಾವಣೆ ಮಾಡಿದ್ದೇನೆ, ನನಗೆ ಯೋಜನೆ ಸಿಗುತ್ತಾ?
ಉತ್ತರ: ಹೌದು, ಹೊಸ ವಿಳಾಸಕ್ಕೂ ಈ ಯೋಜನೆ ಅನ್ವಯ.

ಪ್ರಶ್ನೆ 14: ವಾಣಿಜ್ಯ ಮಳಿಗೆ ನಡೆಸುತ್ತಿದ್ದೇನೆ, ಈ‌ ಯೋಜನೆ ನಮಗೆ ಅನ್ವಯಿಸುತ್ತಾ? 
ಉತ್ತರ: ಇಲ್ಲ 

ಪ್ರಶ್ನೆ 15: ಎಷ್ಟು ಉಚಿತ ಯೂನಿಟ್ ವಿದ್ಯುತ್ ಬಳಕೆಗೆ ನಾನು ಅರ್ಹ? ಅದನ್ನು ಲೆಕ್ಕಹಾಕುವುದು ಹೇಗೆ? 
ಉತ್ತರ: 2022-23 ವರ್ಷದ ಸರಾಸರಿ ವಿದ್ಯುತ್ ಬಳಕೆ ಹಾಗೂ ಹತ್ತು ಶೇ. ಹೆಚ್ಚುವರಿ ಯೂನಿಟ್ ಗಳು ( 200 ಯೂನಿಟ್ ಮೀರದ ಹಾಗೆ)  

ಪ್ರಶ್ನೆ 16: ಅಕೌಂಟ್ ಐಡಿ ಎಲ್ಲಿ ಸಿಗುತ್ತದೆ
ಉತ್ತರ: ಪ್ರತಿ ತಿಂಗಳ ವಿದ್ಯುತ್ ಬಿಲ್ ನಲ್ಲಿ

ಪ್ರಶ್ನೆ 17: ಆಧಾರ್ ಜೊತೆ ಅಕೌಂಟ್ ಐಡಿ ಜೋಡನೆ ಕಡ್ಡಾಯವೇ?
ಉತ್ತರ: ಹೌದು 

ಪ್ರಶ್ನೆ 18: ಹೊರ ರಾಜ್ಯದ ಅಧಾರ್ ಕಾರ್ಡ್ ಇದ್ದು, ಕರ್ನಾಟಕದಲ್ಲಿ ವಾಸ ಆಗಿರುವವರಿಗೆ ಅನ್ವಯ ಆಗುತ್ತಾ?
ಉತ್ತರ: ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಾಖಲಾತಿ ಸಲ್ಲಿಸಬೇಕು.

ಪ್ರಶ್ನೆ 19 : ಹಿಂದಿನ ವಿದ್ಯುತ್ ಶುಲ್ಕ ಪಾವತಿ ಬಾಕಿ ಇದ್ದಲ್ಲಿ, ಯೋಜನರ ಅರ್ಹನಾ?
ಉತ್ತರ: ಹೌದು, ಜೂನ್ 30 ರ ಒಳಗಾಗಿ ಮೂರು ತಿಂಗಳ ಬಾಕಿ ಬಿಲ್  ಪಾವತಿ ಮಾಡಬೇಕು. ಇಲ್ಲಾಂದ್ರೆ ಸೌಲಭ್ಯ ಇಲ್ಲ.

ಪ್ರಶ್ನೆ 20: ನಿಗದಿತ ಮೀರಿ ಹೆಚ್ಚುವರಿ ಬಳಕೆಗೆ ಶುಲ್ಕ ಪಾವತಿ ಮಾಡಬೇಕಾ?
ಉತ್ತರ: ಹೌದು

ಪ್ರಶ್ನೆ 21: ವಿದ್ಯುತ್ ಬಿಲ್ ಮೃತಪಟ್ಟವರ ಹೆಸರಿನಲ್ಲಿ ಇದೆ, ಹಾಗಾದಾಗ ಏನು ಮಾಡೋದು?
ಉತ್ತರ: ವಿದ್ಯುತ್ ಸಂಪರ್ಕ ಪಡೆಯುವವರ ಹೆಸರು ಬದಲಾವಣೆ ಮಾಡಬೇಕು ಹಾಗೂ ಬಳಿಕ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. 

ಪ್ರಶ್ನೆ 22: 200 ಯೂನಿಟ್ ಗೂ ಹೆಚ್ಚು ಬಳಕೆ ಮಾಡಿದರೆ ಪೂರ್ಣ ಬಿಲ್ ಪಾವತಿ ಮಾಡಬೇಕಾ?
ಉತ್ತರ: ಹೌದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News