ಸಂಚಲನ ಮೈಸೂರು ರಂಗತಂಡದಿಂದ ಮಾರ್ಚ್ 11ಕ್ಕೆ ‘ಹಯವದನ’ ನಾಟಕ ಪ್ರದರ್ಶನ

ಬೆಂಗಳೂರಿನ ಜೆ.ಪಿ.ನಗರ 2ನೇ ಹಂತದಲ್ಲಿರುವ ರಂಗಶಂಕರದಲ್ಲಿ ಮಾರ್ಚ್ 11ರಂದು ಸಂಜೆ 7 ಗಂಟೆಗೆ ನಾಟಕ ಪ್ರದರ್ಶಿತಗೊಳ್ಳಲಿದೆ.

Written by - Zee Kannada News Desk | Last Updated : Mar 9, 2022, 07:47 PM IST
  • ಸಂಚಲನ ಮೈಸೂರು ರಂಗ ತಂಡದಿಂದ ಮಾರ್ಚ್ 11ರಂದು ‘ಹಯವದನ’ ನಾಟಕ ಪ್ರದರ್ಶನ
  • ಬೆಂಗಳೂರಿನ ರಂಗಶಂಕರದಲ್ಲಿ ಸಂಜೆ 7 ಗಂಟೆಗೆ ಗಿರೀಶ್ ಕಾರ್ನಾಡ್ ರ ‘ಹಯವದನ’ ನಾಟಕ ಪ್ರದರ್ಶನ
  • ದೀಪಕ್ ಮೈಸೂರು ನಿರ್ದೇಶನದ ನಾಟಕಕ್ಕೆ ಶ್ರೀನಿವಾಸ್ ಭಟ್(ಚೀನಿ) ಮತ್ತು ಉದಯ ನುಸೃತ್ ಸಾಬ್ರಿ ಸಂಗೀತ ನಿರ್ವಹಣೆ
ಸಂಚಲನ ಮೈಸೂರು ರಂಗತಂಡದಿಂದ ಮಾರ್ಚ್ 11ಕ್ಕೆ ‘ಹಯವದನ’ ನಾಟಕ ಪ್ರದರ್ಶನ title=
ಮಾರ್ಚ್ 11ರಂದು ‘ಹಯವದನ’ ನಾಟಕ ಪ್ರದರ್ಶನ

ಬೆಂಗಳೂರು: ಸಂಚಲನ ಮೈಸೂರು ರಂಗ ತಂಡ(Sanchalana Mysuru Theatre Group)ದಿಂದ ಮಾರ್ಚ್ 11ರಂದು ಗಿರೀಶ್ ಕಾರ್ನಾಡ್ ಅವರ ‘ಹಯವದನ’ ನಾಟಕ(Hayavadana Play) ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಜೆ.ಪಿ.ನಗರ 2ನೇ ಹಂತದಲ್ಲಿರುವ ರಂಗಶಂಕರ(Ranga Shankara)ದಲ್ಲಿ ಸಂಜೆ 7 ಗಂಟೆಗೆ ನಾಟಕ ಪ್ರದರ್ಶಿತಗೊಳ್ಳಲಿದೆ.

ರಂಗಭೂಮಿ ಸಾಹಿತ್ಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಗಿರೀಶ್ ಕಾರ್ನಾಡ್(Girish Karnad) ಅವರ ‘ಹಯವದನ’ ನಾಟಕವನ್ನು ವೀಕ್ಷಿಸಲು ರಂಗಾಸಕ್ತರಿಗೆ ಇದು ಸುವರ್ಣಾವಕಾಶ. ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರು ಈ ನಾಟಕಕ್ಕೆ ಸಂಗೀತ ನೀಡಿದ್ದು, ಶ್ರೀನಿವಾಸ್ ಭಟ್(ಚೀನಿ) ಮತ್ತು ಉದಯ ನುಸೃತ್ ಸಾಬ್ರಿ ಸಂಗೀತ ನಿರ್ವಹಣೆ ಮಾಡಿದ್ದಾರೆ. ದೀಪಕ್ ಮೈಸೂರು ಈ ನಾಟಕವನ್ನು ನಿರ್ದೇಶಿಸಿದ್ದು, ಪ್ರವೀಣ್ ಬೆಳ್ಳಿ ಸಹ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Trikona Cinema : ಕನ್ನಡ ಸೇರಿ ಮೂರು ಭಾಷೆಗಳಲ್ಲಿ ತೆರೆಗೆ ಬರಲಿದೆ 'ತ್ರಿಕೋನ' ಸಿನಿಮಾ! ಏನಿದರ ಕಥೆ?

ಸಂಚಲನ ಮೈಸೂರು ರಂಗತಂಡ

ರಂಗಕರ್ಮಿ ದೀಪಕ್ ಮೈಸೂರು(Deepak Mysuru) ಅವರ ನೇತೃತ್ವದಲ್ಲಿ ಸಂಚಲನ ಮೈಸೂರು ರಂಗತಂಡವು ಕಳೆದ ಹಲವಾರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲೂ ಜನಪದ ಪ್ರಕಾರಗಳು, ಕಲೆ, ಸಾಹಿತ್ಯ-ಸಂಸ್ಕೃತಿ, ಪರಿಸರ ಮುಂತಾದ ಸಂವೇದನಾಶೀಲ ವಿಷಯಗಳ ಕುರಿತು ಕ್ರೀಯಾಶೀಲ ರಂಗಚಟುವಟಿಕೆಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸುತ್ತಿದೆ. ಕನ್ನಡ ನಾಡು-ನುಡಿ, ಭಾಷೆಯ ಬಗ್ಗೆ ಜವಾಬ್ದಾರಿ ಮತ್ತು ಬದ್ಧತೆಯಿಂದ ಶ್ರಮಿಸುತ್ತಿರುವ ಸಂಚಲನ ಮೈಸೂರು ರಂಗತಂಡ(Sanchalana Mysuru Theatre Group)ವು ಪ್ರತಿವರ್ಷ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.

ಇದಕ್ಕೆ ಪೂರಕವಾಗಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಚಲನ ರಂಗತಂಡವು ‘ಯುವರಂಗ ತರಬೇತಿ ಶಿಬಿರ’, ಮಹಿಳೆಯರಿಗಾಗಿ ‘ಸಂಚಲನ ಮಹಿಳಾ ರಂಗ ತರಬೇತಿ ಶಿಬಿರ’, ಮಕ್ಕಳಿಗಾಗಿ ‘ಕುಣಿಯೋಣು ಬಾರಾ... ಸಂಚಲನ ಮಕ್ಕಳ ರಂಗ ತರಬೇತಿ ಶಿಬಿರ’, ‘ಸಂಚಲನ ಮಕ್ಕಳ ನಾಟಕೋತ್ಸವ’, ‘ಮಕ್ಕಳ ರಂಗ ಹಬ್ಬ’, ಚಿತ್ರಕಲಾ ಪ್ರದರ್ಶನ, ಸಂಚಲನ ರಂಗೋತ್ಸವ, ಪುಸ್ತಕ ಪ್ರಕಟಣೆ, ಕವಿಗೋಷ್ಠಿ, ವಿಚಾರ ಸಂಕಿರಣ ಹೀಗೆ ಹತ್ತು-ಹಲವು ಕಾರ್ಯಕ್ರಮಗಳನ್ನು ಸಂಸ್ಥೆಯು ಆಯೋಜಿಸಿಕೊಂಡು ಬರುತ್ತಿದೆ.

 

ಇದನ್ನೂ ಓದಿ: ಲಕ್ಸ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕನ್ನಡದ ಈ ಬಿಷಪ್ ಕಾಟನ್ ಬೆಡಗಿ ...!

ಇದುವರೆಗೆ ರಾಷ್ಟ್ರಕವಿ ಕುವೆಂಪು(Kuvempu)ರವರ ‘ಚಂದ್ರಹಾಸ’, ‘ಬೊಮ್ಮನಹಳ್ಳಿಯ ಕಿಂದರಿಜೋಗಿ’, ಡಾ.ಚಂದ್ರಶೇಖರ ಕಂಬಾರರ ‘ಪುಷ್ಪರಾಣಿ’, ಕೆ.ರಾಮಯ್ಯನವರ ‘ಒಗಟಿನ ರಾಣಿ’, ಎಚ್.ಎಸ್.ವೆಂಕಟೇಶ್ ಮೂರ್ತಿಯವರ ‘ಬಿಲ್ಲಹಬ್ಬ’, ಭಾಸ ಮಹಾಕವಿಯ ‘ಮಧ್ಯಮ ವ್ಯಾಯೋಗ’ ಸೇರಿದಂತೆ ಅನೇಕ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News