ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ, ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಮತ್ತಷ್ಟು ರಂಗು ತರಲು ಸ್ಯಾಂಡಲ್ ವುಡ್ ತಾರೆಯರನ್ನು ಕರೆತರಲು ನಿರ್ಧರಿಸಿದೆ.
ಈ ಬಗ್ಗೆ ಸುಳಿವು ನೀಡಿರುವ ಕೆಪಿಸಿಸ್ ಅಧ್ಯಕ್ಷ ಜಿ.ಪರಮೇಶ್ವರ್, ಪ್ರಚಾರಕ್ಕಾಗಿ ಸ್ಟಾರ್ ಕ್ಯಾಂಪೇನರ್'ಅಲ ಪಟ್ಟಿಯನ್ನು ಪಕ್ಷ ಸಿದ್ದಪದಿಸುತ್ತಿದೆ. ಆದರೆ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಆದರೆ ಈ ಬಾರಿ ಚುನಾವಣಾ ಪ್ರಚಾರದಲ್ಲಿ ಸುಮಾರು 40 ಮಂದಿ ಸ್ಟಾರ್ ಕ್ಯಾಂಪೇನರ್'ಗಳು ಭಾಗಿಯಾಗಲಿದ್ದಾರೆ ಎಂದಿದ್ದಾರೆ.
ಅವರಲ್ಲಿ ನಟಿ ರಮ್ಯಾ, ಮಾಲಾಶ್ರಿ, ಅಭಿನಯ, ನಟರಾದ ಮುಖ್ಯಮಂತ್ರಿ ಚಂದ್ರು, ಅಂಬರೀಷ್, ಭಾವನಾ ಸೇರಿದಂತೆ ಇತರ ನಟರು ಕಾಂಗ್ರೆಸ್ ಪರ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.