School Admission : ಜೂ.15ರಿಂದ ರಾಜ್ಯದ ಶಾಲೆಗಳಲ್ಲಿ 'ಮಕ್ಕಳ ದಾಖಲಾತಿ' ಆರಂಭ : ಇಲ್ಲಿದೆ ಸಂಪೂರ್ಣ ಮಾಹಿತಿ!

 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆಯಂತೆ ಜುಲೈ-01 ರಿಂದ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದ ಹಿನ್ನಲೆಯಲ್ಲಿ ಮಕ್ಕಳ ಶಾಲಾ ಪ್ರವೇಶ ದಾಖಲಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ಪ್ರಾರಂಭಿಸುವುದು.

Last Updated : Jun 4, 2021, 05:23 PM IST
  • 2021-22ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಮತ್ತು ಶುಲ್ಕ
  • ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಹೊರಡಿಸಿದೆ
  • ಈ ಹಿನ್ನಲೆಯಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆ
School Admission : ಜೂ.15ರಿಂದ ರಾಜ್ಯದ ಶಾಲೆಗಳಲ್ಲಿ 'ಮಕ್ಕಳ ದಾಖಲಾತಿ' ಆರಂಭ : ಇಲ್ಲಿದೆ ಸಂಪೂರ್ಣ ಮಾಹಿತಿ! title=

ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಮತ್ತು ಶುಲ್ಕ ಪಡೆಯುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ಹೊರಡಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ(Department of Public Education)ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಹೊಸ ದಾಖಲಾತಿ ಪ್ರಕ್ರಿಯೆಯು ಈಗ ಪ್ರಾರಂಭವಾಗುತ್ತಿತ್ತು. ಆದ್ರೇ ಕೋವಿಡ್-19 ಮುಂದುವರೆದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶಾಲಾ-ಕಾಲೇಜುಗಳಲ್ಲಿ ನಿಗದಿತ ಸಮಯಕ್ಕೆ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ. ಭೌತಿಕವಾಗಿ ಶಾಲೆಗಳ ಪುನರಾರಂಭದ ಕುರಿತು ಅನಿಶ್ಚಿತತೆ ಇರುವುದರಿಂದ, ಮಕ್ಕಳನ್ನು ಪರ್ಯಾಯ ಮಾರ್ಗವಾಗಿ ಸಂಪರ್ಕಿಸಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ.

ಇದನ್ನೂ ಓದಿ : 2021-22 Academic Year : ಜುಲೈ 1ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭ!

 2021-22ನೇ ಸಾಲಿನ ಶೈಕ್ಷಣಿಕ ವರ್ಷ(Academic Year 2021-22)ದ ವಾರ್ಷಿಕ ಯೋಜನೆಯಂತೆ ಜುಲೈ-01 ರಿಂದ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದ ಹಿನ್ನಲೆಯಲ್ಲಿ ಮಕ್ಕಳ ಶಾಲಾ ಪ್ರವೇಶ ದಾಖಲಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ಪ್ರಾರಂಭಿಸುವುದು.

ಇದನ್ನೂ ಓದಿ : 2nd PUC Exam Cancel : ದ್ವಿತೀಯ ಪಿಯುಸಿ ಪರೀಕ್ಷೆ ರದ್ದು : ಸಚಿವ ಸುರೇಶ್ ಕುಮಾರ್ 

ಶಾಲಾ ದಾಖಲಾತಿಗೆ(School Admission) ತರಗತಿವಾರು ಲಭ್ಯವಿರುವ ಸೀಟುಗಳ ಸಂಖ್ಯೆ, ಪ್ರವೇಶ ಪ್ರಕ್ರಿಯೆ ಪ್ರಕಟಣೆ, ತರಗತಿವಾರು ಪಾವತಿಸಬೇಕಾದ ಶುಲ್ಕದ ವಿವರಗಳನ್ನು ಒಳಗೊಂಡಂತೆ ಶಾಲಾ ಪ್ರವೇಶಕ್ಕೆ ಪೂರಕ ಮಾಹಿತಿಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ, ದಾಖಲಾತಿ ಪ್ರಕ್ರಿಯೆಯನ್ನು ಜೂನ್ 15ರಿಂದ ಪ್ರಾರಂಭಿಸಿ, ಆಗಸ್ಟ್ 31ರೊಳಗೆ ಮುಕ್ತಾಯಗೊಳಿಸುವುದು.

ಇದನ್ನೂ ಓದಿ : Heavy Rainfall : ಕೇರಳಕ್ಕೆ ಎಂಟ್ರಿ ನೀಡಿದ ಮಾನ್ಸೂನ್ : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರು!

ದಾಖಲಾತಿಗಾಗಿ ಶಾಲೆಯ ಆವರಣದಲ್ಲಿ ಮಕ್ಕಳು ಹಾಗೂ ಪೋಷಕರನ್ನು ಒಗ್ಗೂಡಿಸದಂತೆ ಕೋವಿಡ್-19(COVID-19)ರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ದಾಖಲಾತಿ ಮುಂದುವರೆಸುವುದು ಹಾಗೂ ಶಾಲೆಗಳಲ್ಲಿ ತರಗತಿಗಳನ್ನು ಭೌತಿಕವಾಗಿ ಮುಂದಿನ ಆದೇಶದವರೆಗೆ ಪ್ರಾರಂಭಿಸಬಾರದೆಂದು ಸೂಚಿಸಿದೆ.

ಇದನ್ನೂ ಓದಿ : ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್ ನಿಂದ ಕ್ಷಮೆಯಾಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News