ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಕಟೌಟ್ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿತ್ತು. ಇದು ಗಲಾಟೆ, ಗೊಂದಲಕ್ಕೆ ಕಾರಣವಾಗಿತ್ತು. ಟಿಪ್ಪು-ಔರಂಗಜೇಬ ಕಟೌಟ್ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಶಿವಮೊಗ್ಗ–ಹೊನ್ನಾಳಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಮನವರಿಕೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಶಾಂತಿಯ ನಾಡಾಗಿದ್ದ ನಮ್ಮ ಕರ್ನಾಟಕವನ್ನು ಮತಾಂಧ ಟಿಪ್ಪು-ಔರಂಗಜೇಬನ ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್!’ ಎಂದು ಟೀಕಿಸಿದೆ.
ಇದನ್ನೂ ಓದಿ: Cauvery Dispute: ಒಣಗಿದ ತರಕಾರಿ ಹಿಡಿದು ಆಕ್ರೋಶ..! ನೀರು ಬಿಡದಂತೆ ಆಗ್ರಹ
ಕೋಲಾರದಲ್ಲಿ ತಲ್ವಾರ್ ಶೈಲಿಯ ಕಮಾನ್, ಕಟೌಟ್ ನಿರ್ಮಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾಯ್ತು, ಈಗ ಶಿವಮೊಗ್ಗದಲ್ಲಿ ಅದೇ ರೀತಿಯ ತಲ್ವಾರ್ ಕಮಾನ್, ಟಿಪ್ಪು ಕಟೌಟ್ಗಳನ್ನು ನಿರ್ಮಿಸಿ ಶಾಂತಿ ಕದಡುವ ಕೆಲಸ ನಡೆದಿದೆ. ಜಿಲ್ಲಾಡಳಿತ ಮೌನವಾಗಿದ್ದು, ಕಾಂಗ್ರೆಸ್ ಸರ್ಕಾರ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.
ಶಾಂತಿಯ ನಾಡಾಗಿದ್ದ ನಮ್ಮ ಕರ್ನಾಟಕವನ್ನು ಮತಾಂಧ ಟಿಪ್ಪು-ಔರಂಗಜೇಬನ ನಾಡನ್ನಾಗಿಸಲು ಹೊರಟಿದೆ ಕಾಂಗ್ರೆಸ್!
ಕೋಲಾರದಲ್ಲಿ ತಲ್ವಾರ್ ಶೈಲಿಯ ಕಮಾನ್, ಕಟೌಟ್ ನಿರ್ಮಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾಯ್ತು, ಈಗ ಶಿವಮೊಗ್ಗದಲ್ಲಿ ಅದೇ ರೀತಿಯ ತಲ್ವಾರ್ ಕಮಾನ್, ಟಿಪ್ಪು ಕಟೌಟ್ಗಳನ್ನು ನಿರ್ಮಿಸಿ ಶಾಂತಿ ಕದಡುವ ಕೆಲಸ ನಡೆದಿದೆ.… pic.twitter.com/2abaJUx8Es
— BJP Karnataka (@BJP4Karnataka) October 1, 2023
‘ವಿವಾದಾತ್ಮಕ ಕಟೌಟ್ಗಳನ್ನು ತೆರವುಗೊಳಿಸಿ ಎಂದು ಪೊಲೀಸರು ಹೇಳಿದರೂ, ಪೊಲೀಸರಿಗೆ ಆವಾಜ್ ಹಾಕುತ್ತಾರೆಂದರೇ, ಆ ಪುಂಡರ ಹಿಂದಿರುವ ಶಕ್ತಿ ಕಾಂಗ್ರೆಸ್ ಸರ್ಕಾರವೇ ಹೊರತು ಮತ್ತಾರು ಅಲ್ಲ’ವೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹಾಡಹಗಲೇ ಹಣ ಸುಲಿಗೆ ಮಾಡಿದ ಖದೀಮರ ಗ್ಯಾಂಗ್..! ದೃಶ್ಯ ಸಿಸಿಟಿವಿಯಲ್ಲಿ ಸೆರೆ
‘ಆಧುನಿಕ ಔರಂಗಜೇಬನಂತೆ ಮತಾಂಧರಿಗೆ ಅಭಯ ನೀಡುವ ಸಿದ್ದರಾಮಯ್ಯರ ಸರ್ಕಾರ ಬಂದಿದ್ದೇ ಬಂದಿದ್ದು, ಸಮಾಜಘಾತುಕ ಶಕ್ತಿಗಳೆಲ್ಲಾ, ಸಮಾಜದ ಶಾಂತಿಯನ್ನು ಕದಡಲು ಸದಾ "ಸಿದ್ಧ" ಎಂಬಂತೆ ಕುಳಿತಿವೆ. ಒಂದು ವೇಳೆ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಗೆ ಭಂಗ ಬಂದದ್ದೇ ಆದಲ್ಲಿ, ಅದಕ್ಕೆ ನೇರ ಹೊಣೆ ರಾಜ್ಯದ ಕಾಂಗ್ರೆಸ್ ಸರ್ಕಾರ’ವೆಂದು ಬಿಜೆಪಿ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.