ಕರ್ನಾಟಕದಲ್ಲಿರುವುದು 'ಸಿದ್ದರಾಮಯ್ಯ' ಸರ್ಕಾರವಲ್ಲ. 'ಸೀದಾ ರುಪಯ್ಯಾ' ಸರ್ಕಾರ- ಮೋದಿ

    

Last Updated : Feb 27, 2018, 05:30 PM IST
ಕರ್ನಾಟಕದಲ್ಲಿರುವುದು 'ಸಿದ್ದರಾಮಯ್ಯ' ಸರ್ಕಾರವಲ್ಲ. 'ಸೀದಾ ರುಪಯ್ಯಾ' ಸರ್ಕಾರ- ಮೋದಿ   title=

ಬೆಂಗಳೂರು:  ದಾವಣೆಗೆರೆಯಲ್ಲಿನ ಬಿಜೆಪಿಯ ರೈತರ ಸಮಾವೇಶವದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ  ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿರುವುದು 'ಸಿದ್ದರಾಮಯ್ಯ' ಸರ್ಕಾರವಲ್ಲ. 'ಸೀದಾ ರುಪಯ್ಯಾ' ಸರ್ಕಾರ ಎಂದು ಕಿಡಿ ಕಾರಿದರು.

ರೈತರ ಸಮಾವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಕೇಂದ್ರ ನೀಡಿದ ಹಣವನ್ನು ಕರ್ನಾಟಕ ಸರ್ಕಾರ ಖರ್ಚು ಮಾಡೋದಿಲ್ಲ. ಕೇಂದ್ರದ ಯೋಜನೆಗಳನ್ನು ಅಳುವಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಅವರು ರಾಜ್ಯ ಸರ್ಕಾರವನ್ನು ಆರೋಪಿಸಿದರು. ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ರೈತ ಪರ, ಬಡ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರದಿಂದ ಬಿಡುಗಡೆ ಮಾಡಿದ ಹಣವನ್ನೂ ಕೂಡ ಸರಿಯಾಗಿ ಬಳಸುವಲ್ಲಿ ವಿಫಲವಾಗಿದ್ದಾರೆ ಎಂದು ಮೋದಿ ತಿಳಿಸಿದರು.

ಈಗಿರುವ ಎಲ್ಲ ಸಮಸ್ಯೆಗಳಿಗೆ 60 ವರ್ಷಗಳಿಂದ ದೇಶವನ್ನು ಆಳಿದ ಒಂದು ಕುಟುಂಬ ಕಾರಣ ಎಂದು ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದಾರೆ.  ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಕಿಡಿಕಾರಿದ ಮೋದಿ  ಕರ್ನಾಟಕದಲ್ಲಿರುವುದು 'ಸಿದ್ದರಾಮಯ್ಯ' ಸರ್ಕಾರವಲ್ಲ. 'ಸೀದಾ ರುಪಯ್ಯಾ' ಸರ್ಕಾರ. ಇಲ್ಲಿ ಯಾವುದೇ ಕೆಲಸಕ್ಕಾದರೂ 'ರೂಪಾಯಿ' ಕೊಡದೆ ಕೆಲಸ ಆಗುವುದಿಲ್ಲ. ಕರ್ನಾಟಕಕ್ಕೆ ಇಂತಹ ಸರ್ಕಾರ ಶೋಭೆ ತರಿವುದಿಲ್ಲ. ಜವಾಬ್ದಾರಿಯುತ, ಸಂವೇದನಾಶೀಲ, ಪ್ರಾಮಾಣಿಕ ಸರ್ಕಾರದ ಅವಶ್ಯಕತೆ ಕರ್ನಾಟಕಕ್ಕೆ ಇದೆ ಎಂದು ತಿಳಿಸಿದರು.

Trending News