'ಅಚ್ಚಳಿಯದ ಅರ್ಜುನನ ನೆನಪು' 

ವಿಶ್ವ ಪ್ರಖ್ಯಾತಿ ಪಡೆದ ದಸರಾ ಅಂದರೆ ಅದು ಮೈಸೂರು ದಸರಾ, ಪ್ರವಾಸಿಗರ ಮೈ ಮನ ಮತ್ತು ಗಮನ ಸೆಳೆಯುವ ನಮ್ಮ ನಾಡ ಹಬ್ಬ ಅದರಲ್ಲೂ ಜಂಬೂ ಸವಾರಿ ನೋಡುವುದೇ ಒಂದು ಅದ್ಭುತದ  ಸಂಗತಿ, ಅಂತಹ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿಯನ್ನು ನೋಡುವುದೇ ಒಂದು ರೋಮಾಂಚನಕಾರಿ, ಹಾಗೆ ಅದನ್ನು ಸಾವಿರಾರು ಜನರ ಮಧ್ಯ ಗಾಂಭೀರ್ಯದಿಂದ ಸವಾರಿ ಮಾಡುವ ಆನೆಯನ್ನು ನೋಡುವುದೇ ಒಂದು ಸೌಭಾಗ್ಯದ ಸಂಗತಿ.

Written by - Manjunath N | Last Updated : Dec 5, 2024, 02:46 PM IST
  • ಜಂಬೂ ಸವಾರಿಯಲ್ಲಿ ಹಲವಾರು ಆನೆಗಳು ಪಾಲ್ಗೊಂಡಿವೆ, ಅದರಲ್ಲಿ ಹೆಚ್ಚು ಪ್ರಸಿದ್ದಿ ಪಡಿದಿದ್ದು ನಮ್ಮ ಹೆಮ್ಮೆಯ ಕ್ಯಾಪ್ಟಿನ್ ಅರ್ಜುನ ಎಂದು ಹೇಳಬಹುದು.
  • ಜಂಬೂ ಸವಾರಿಯಲ್ಲಿ ಹಲವಾರು ವರ್ಷಗಳ ಕಾಲ ಕ್ಯಾಪ್ಶನ್ ಆಗಿ ತಮ್ಮ ಟೀಮ್ಅನ್ನು ಮುನ್ನಡೆಸುವ ಮೂಲಕ ಎಲ್ಲರ ಪ್ರೀತಿಯ ಪಾತ್ರನಾಗಿದ್ದನು.
 'ಅಚ್ಚಳಿಯದ ಅರ್ಜುನನ ನೆನಪು'  title=

ಅರ್ಜುನ್ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋ ಎದುರಾಳಿಗಳನ್ನ ಎದುರಿಸಿದ ಶೂರ, ಆತ ರಣಭೂಮಿಯಲ್ಲಿ ಘರ್ಜಿಸಿದರೆ ಎದುರಾಳಿಯ ಎದೆಯಲ್ಲಿ ನಡುಕ ಸುರು ಆಗುತಿತ್ತು, ನಾಡಿನ ಏಳಿಗೆಗಾಗಿ ದೇವಿಯ ಸೇವೆ ಮಾಡುತಿದ್ದ ಎಲ್ಲರ ಮೆಚ್ಚಿನ ಕ್ಯಾಪ್ಟನ್ ಆತ ಆದರೆ... ಇಂದಿಗೆ ಅವನನ್ನು ಕಳೆದುಕೊಂಡು ಸರಿ ಸುಮಾರು ಒಂದು ವರ್ಷವೇ ಕಳೆದು ಹೋಯಿತು.

ವಿಶ್ವ ಪ್ರಖ್ಯಾತಿ ಪಡೆದ ದಸರಾ ಅಂದರೆ ಅದು ಮೈಸೂರು ದಸರಾ, ಪ್ರವಾಸಿಗರ ಮೈ ಮನ ಮತ್ತು ಗಮನ ಸೆಳೆಯುವ ನಮ್ಮ ನಾಡ ಹಬ್ಬ ಅದರಲ್ಲೂ ಜಂಬೂ ಸವಾರಿ ನೋಡುವುದೇ ಒಂದು ಅದ್ಭುತದ  ಸಂಗತಿ, ಅಂತಹ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿಯನ್ನು ನೋಡುವುದೇ ಒಂದು ರೋಮಾಂಚನಕಾರಿ, ಹಾಗೆ ಅದನ್ನು ಸಾವಿರಾರು ಜನರ ಮಧ್ಯ ಗಾಂಭೀರ್ಯದಿಂದ ಸವಾರಿ ಮಾಡುವ ಆನೆಯನ್ನು ನೋಡುವುದೇ ಒಂದು ಸೌಭಾಗ್ಯದ ಸಂಗತಿ.

ಇದನ್ನೂ ಓದಿ: ಬಲ ಪ್ರದರ್ಶನ ಅಗತ್ಯವಿಲ್ಲ! ನಮ್ಮ ಆಚಾರ ವಿಚಾರ ಜನರಿಗೆ ತಲುಪಿಸಿದರೆ ಬಿಜೆಪಿ, ಜೆಡಿಎಸ್ ಗ್ಯಾಕೆ ಹೊಟ್ಟೆಯುರಿ: ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ

ಜಂಬೂ ಸವಾರಿಯಲ್ಲಿ ಹಲವಾರು ಆನೆಗಳು ಪಾಲ್ಗೊಂಡಿವೆ, ಅದರಲ್ಲಿ ಹೆಚ್ಚು ಪ್ರಸಿದ್ದಿ ಪಡಿದಿದ್ದು ನಮ್ಮ ಹೆಮ್ಮೆಯ ಕ್ಯಾಪ್ಟಿನ್ ಅರ್ಜುನ ಎಂದು ಹೇಳಬಹುದು.ಜಂಬೂ ಸವಾರಿಯಲ್ಲಿ ಹಲವಾರು ವರ್ಷಗಳ ಕಾಲ ಕ್ಯಾಪ್ಶನ್ ಆಗಿ ತಮ್ಮ ಟೀಮ್ಅನ್ನು ಮುನ್ನಡೆಸುವ ಮೂಲಕ ಎಲ್ಲರ ಪ್ರೀತಿಯ ಪಾತ್ರನಾಗಿದ್ದನು.

ದಿನಾಂಕ 04 ಡಿಸೆಂಬರ್ 2023ರಂದು ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ಬಾಳೆಕೆರೆ ಕಾಡಿನಲ್ಲಿ ಅರ್ಜುನನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು, ಈ ವೇಳೆ ಅರ್ಜುನನ ಜೊತೆ ಒಂಟಿ ಸಲಗದೊಂದಿಗೆ ಮುಖಾಮುಖಿ ಆಗಿದ್ದು, ಈ ಭೀಕರ ಸೆಣಸಾಟದಲ್ಲಿ ಹಿಂದೇಟು ಹಾಕದ ಅರ್ಜುನನಿಗೆ ಕಾಡಿನ ಒಂಟಿ ಸಲಗ ಎದೆಯ ಭಾಗದಲ್ಲಿ ತೀವ್ರ ಗಾಯವಾಗಿತ್ತು. ಆದರೂ ಕ್ಯಾಪ್ಟಿನ್ ಅರ್ಜುನ ತನ್ನ ಜೊತೆ ಇದ್ದ ಮಾವುತ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳನ್ನು ಸಂರಕ್ಷಿಸಿ ಕೊನೆಯ ಕ್ಷಣದವರೆಗೂ ಹೋರಾಡಿ ಇಹಲೋಕ ತ್ಯಜಿಸಿತು. ಮರಣದಲ್ಲಿಯೂ ಜೀವನ ಸಾರ್ಥಕತೆಯನ್ನು ಮೆರೆದ ಕ್ಯಾಪ್ಟಿನ್ ಅರ್ಜುನ ನಮ್ಮನ್ನ ಅಗಲಿ ಒಂದು ವರ್ಷ ಕಳೆದಿದೆ. ಆದರೆ 'ಅರ್ಜುನ'ನ ನೆನಪು ಮಾತ್ರ ಸದಾಕಾಲ ಅಚ್ಚಳಿಯದೆ ಉಳಿಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News