ಹಾಸನದಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನವಿದೆ - ಮಾಜಿ ಪ್ರಧಾನಿ ದೇವೇಗೌಡ

    

Last Updated : Apr 11, 2018, 07:37 PM IST
ಹಾಸನದಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನವಿದೆ - ಮಾಜಿ ಪ್ರಧಾನಿ ದೇವೇಗೌಡ  title=

ಬೆಂಗಳೂರು: ಹಾಸನದ ಅರಕಲಗೂಡಿನಲ್ಲಿ ಮಾಜಿ ಪ್ರಧಾನಿ ಮಾತನಾಡುತ್ತಾ ಹಾಸನದಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯೋ ಅನುಮಾನವಿದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು "ಸಿದ್ದರಾಮಯ್ಯ ಅಂಡ್ ಟೀಂ ಜಿಲ್ಲೆಯಲ್ಲಿ ಏಳೂ ಸ್ಥಾನ ಗೆಲ್ಲಬೇಕು ಎಂದು ವೀರಾವೇಶದ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆ ಇಷ್ಟು ಹದಗೆಡಲು ಸಿಎಂ ಕುಮ್ಮಕ್ಕು ಕಾರಣ ಎಂದು‌ ಕಿಡಿಕಾರಿದರು. ಸಿಎಂ‌ಗೆ ಚುನಾವಣಾ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ.ಹಾಸನ ಜಿಲ್ಲೆಯಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯೋ ಬಗ್ಗೆ ಅನುಮಾನವಿದೆ ಆದ್ದರಿಂದ ನಾನು‌ ರಾವತ್ ಜೊತೆ ದೂರವಾಣಿ ಯಲ್ಲಿ ಮಾತನಾಡಿದ್ದೇನೆ ಎಂದು ತಿಳಿಸಿದರು. 

ಇನ್ನು ಮುಂದುವರೆದು ಮಾತನಾಡಿದ ಅವರು  ಮುಖ್ಯ ಕಾರ್ಯದರ್ಶಿಗಳು  ಸರಕಾರದ ವಿರುದ್ಧ ಮಾತನಾಡಲ್ಲ, ಏಕೆಂದ್ರೆ ಸಿಎಂ ಅವರಿಗೆ ಲೈಫ್ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದ ಆಡಳಿತ ಯಂತ್ರ ಕೋಡ್ ಆಫ್ ಕಂಡಕ್ಟ್ ಗೆ ಮಾನ್ಯತೆ ಕೊಡದೆ, ಕಡತಗಳನ್ನ ವಿಲೇವಾರಿ ಮಾಡುತ್ತಿದ್ದಾರೆ ಈ ಕುರಿತಾಗಿ  ನಾನು‌ ಮತ್ತೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡುವೆ ಎಂದು ತಿಳಿಸಿದರು.

Trending News