Congress : ಮೃತ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 'ಕೈ' ನಾಯಕರು

ಅಧಿಕಾರದ ಒಟ್ಟು ಕೇಂದ್ರೀಕರಣ ನನ್ನಿಂದಲೇ ಆಗಬೇಕು ಎನ್ನುವ ದುರ್ಬುದ್ಧಿಯಿಂದ ಈ ಘಟನೆ ನಡೆದಿದೆ. ಇದರಿಂದಲೇ ಮಕ್ಕಳನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ.

Written by - Zee Kannada News Desk | Last Updated : Mar 5, 2022, 02:01 PM IST
  • ಉಕ್ರೇನ್ ನಲ್ಲಿ ಸೆಲ್ ದಾಳಿಗೆ ಮೃತನಾದ ಹಾವೇರಿ ಜಿಲ್ಲೆಯ ನವೀನ್
  • ನವೀನ್ ಮನೆಗೆ ಇಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಮತ್ತು ಕೆಬಿ ಕೋಳಿವಾಡ ಭೇಟಿ
  • ಬೇಟಿ ಬಳಿಕ 'ಕೈ' ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಕೋಳಿವಾಡ ಕರೆ
Congress : ಮೃತ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 'ಕೈ' ನಾಯಕರು title=

ಹಾವೇರಿ : ನವೀನ್ ಮೃತ ನಮ್ಮನ್ನ ಅಗಲಿದ್ದು ಅವರಿಗೆ ಶ್ರದ್ಧಾಜಲಿ ಸಲ್ಲಿಸೋಕೆ ಬಂದೆ. ವಿದ್ಯಾರ್ಜನೆಗೆ ಹೋಗಿದ್ದ ನವೀನ್ ಅಲ್ಲಿಂದ ಬಂದು ಕುಟುಂಬಕ್ಕೆ ಆಸರೆಯಾಗಬೇಕಿತ್ತು. ಅದು ನಮ್ಮ ದುರ್ದೈವ ಅವನನ್ನ ಕಳೆದುಕೊಂಡಿದ್ದು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.

ಉಕ್ರೇನ್ ನಲ್ಲಿ ಸೆಲ್ ದಾಳಿಗೆ ಮೃತನಾದ ಹಾವೇರಿ ಜಿಲ್ಲೆಯ ನವೀನ್ ಮನೆಗೆ ಇಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಮತ್ತು ಕೆಬಿ ಕೋಳಿವಾಡ(KB Koliwad and HK Patil) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರದ ಒಟ್ಟು ಕೇಂದ್ರೀಕರಣ ನನ್ನಿಂದಲೇ ಆಗಬೇಕು ಎನ್ನುವ ದುರ್ಬುದ್ಧಿಯಿಂದ ಈ ಘಟನೆ ನಡೆದಿದೆ. ಇದರಿಂದಲೇ ಮಕ್ಕಳನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಮಹಾಯುದ್ಧ ಆಗದಿರಲಿ ಅನ್ನೋ ಬಗ್ಗೆ ಆರೈಕೆ ಮಾಡೋಣ. ಎಲ್ಲ ಭಾರತೀಯರನ್ನ ಆದಷ್ಟು ಬೇಗ ಕರೆತರುವ ಕಾರ್ಯ ಆಗಬೇಕು. ಉಕ್ರೇನ್ ನಲ್ಲಿರುವ ಎಲ್ಲ ಯುವಕರು ಸುರಕ್ಷಿತವಾಗಿ ದೇಶಕ್ಕೆ ಬಂದು ಮುಟ್ಟಬೇಕು ಅಂತ ಕೇಳಿಕೊಳ್ಳುವೆ ಎಂದು ಹೇಳಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಬಜೆಟ್ ಸ್ವಾಗತಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಬೇಟಿ ಬಳಿಕ 'ಕೈ' ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivaumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಳಿವಾಡ ಕರೆ ಮಾಡಿ, ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಲು ಕರೆ ಮೂಲಕ ಆಹ್ವಾನ ನೀಡಿದರು.

ಕೋಳಿವಾಡ : ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದಿನಿ ನಾಳೆ ಬನ್ನಿ ಸರ್... 

ಸಿದ್ದರಾಮಯ್ಯ :  ನಾಳೆ ಬೇರೆ ಕೆಲಸ ಇದೆ ಆಗಲ್ಲ ಎಂದರು. 

ಕೋಳಿವಾಡ : ದಯವಿಟ್ಟು ನಾಳೆಯೇ ಬನ್ನಿ ಸರ್, ಅಧ್ಯಕ್ಷರು ಮತ್ತು ನೀವು ಇಬ್ಬರು ಒಮ್ಮೆಯೇ ಬನ್ನಿ ಸರ್

ಕೊನೆಗೆ ಮಂಗಳವಾರ ಸಿದ್ದರಾಮಯ್ಯ ಮತ್ತು ಡಿಕೆಶಿ ಬರುವ ಭರವಸೆ ನೀಡಿದರು.

ಇದನ್ನೂ ಓದಿ : ಉಕ್ರೇನ್ ನಲ್ಲಿ ಸಾವನ್ನಪ್ಪಿದ ನವೀನ್ ನಿವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News