ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಈ ಕಾರಣದಿಂದಾಗಿ ಎಲ್ಲೆಡೆ ವೈರಲ್ ಜ್ವರ ಸಾಮಾನ್ಯವಾಗಿದೆ. ಹವಾಮಾನದ ಬದಲಾವಣೆಯೊ, ಸಾಂಕ್ರಾಮಿಕ ರೋಗ ರುಜಿನಗಳ ಆಕ್ರಮಣವೋ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಆಸ್ಪತ್ರೆಗೆ ದಿನ ನಿತ್ಯ ಆಗಮಿಸುವ ರೋಗಿಗಳ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಚೀಟಿ ಕೌಂಟರ್ ತುಂಬಾ ಜನಜಂಗುಳಿ, ಇತ್ತ ವೈದ್ಯರ ಮುಂದೆ ರೋಗಿಗಳ ದಂಡೇ ನೆರದಿದ್ದರೇ, ಅತ್ತ ಕ್ಷ-ಕಿರಣ ವಿಭಾಗದಲ್ಲಿ ಕಾಲಿಡಲೂ ಜಾಗ ಇಲ್ಲದಂತಾಗಿದೆ. ಇನ್ನೂ ರಕ್ತ, ಮೂತ್ರ ಪರೀಕ್ಷೆ ಪ್ರಯೋಗಾಲಯವೂ ಸಹ ಜನರಿಂದ ತುಂಬಿ ತುಳಕುತ್ತಿದೆ, ತುರ್ತು ಚಿಕಿತ್ಸಾ ವಿಭಾಗದಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಇದನ್ನೂ ಓದಿ- ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಮುಖ್ಯವಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಇನ್ನೇನು ಮನೆ ಸೇರಬೇಕು ಎನ್ನುವ ರೋಗಿಗಳು ಸುರಿಯುವ ಮಳೆಯಲ್ಲೇ ಗಂಟೆ ಗಟ್ಟಲೇ ಕಾಯ್ದು ಔಷಧಿ ಮಾತ್ರೆ ಪಡೆಯುವ ಸ್ಥಿತಿಯಂತೂ ಸಾಕಾಗಿ ಹೋಗಿದೆ.
ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಎಲ್ಲೆಡೆ ತಂಪು ಗಾಳಿಯಿಂದ ಶೀತ, ನೆಗಡಿ, ಕಫ, ಕೆಮ್ಮು, ಮೈ-ಕೈ ನೋವು, ಸಂಧಿವಾತ, ನರಗಳ ದೌರ್ಬಲ್ಯದಂತಹ ಕಾರಣ ಹೊತ್ತು ದಿನೇ ದಿನೇ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಸಾಮಾನಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ಚಿಕ್ಕಮಕ್ಕಳ ಸಂಖ್ಯೆ ಸಹ ಅತಿಯಾಗಿದ್ದು ತಾಲೂಕು ಆಸ್ಪತ್ರೆ ಆಡಳಿತ ರೋಗಿಗಳನ್ನು ನಿಭಾಯಿಸಲು ಹರಸಾಹಸ ಪಡುತ್ತಿದೆ.
ವೈರಲ್ ಜ್ವರದ ಹಾವಳಿ ಹೆಚ್ಚುತ್ತಿದೆ. ಕೆಮ್ಮು, ಜ್ವರ, ಶೀತ, ಗಂಟಲು, ತಲೆ ನೋವು, ಹೊಟ್ಟೆ ನೋವು ಮುಂತಾದ ಲಕ್ಷಣದಿಂದ ವೈದ್ಯರನ್ನು ಮೊರೆ ಹೋಗುವವರ ಸಂಖ್ಯೆ ಏರಿಕೆಯಾಗಿದ್ದರಿಂದ ಜನರಲ್ಲಿ ಆತಂಕದಲ್ಲಿದ್ದಾರೆ.
ಇದನ್ನೂ ಓದಿ- ಕರೆಂಟ್ ಶಾಕ್‌ನಿಂದ ಮರಿ ಮಂಗ ಸಾವು; ಮುಗಿಲು ಮುಟ್ಟಿದ ತಾಯಿ ಮಂಗನ ರೋಧನೆ!
ಮಳೆಗಾಲದಲ್ಲಿ ಸಾಮಾನ್ಯವಾಗಿ ಹೊಸ ವೈರಸ್‌ಗಳು ಉತ್ಪತ್ತಿಯಾಗುತ್ತವೆ. ಕೆಲವೊಂದು ಹವಾಮಾನದಲ್ಲಿ ಅಷ್ಟು ಸುಲಭವಾಗಿ ವೈರಸ್‌ಗಳು ಸಾಯುವುದಿಲ್ಲ. ಹವಾಮಾನ ಬದಲಾಗುತ್ತಿದ್ದಂತೆ ಹೊಸ ವೈರಸ್‌ಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ, ಕೆಲ ಪ್ರತಿಕೂಲ ಹವಾಮಾನದಿಂದ ವೈರಸ್‌ಗಳು ಬೇಗ ಹರಡುತ್ತವೆ. ಆದ್ದರಿಂದ ವೈದ್ಯರು ಸಲಹೆ ಸರಿಯಾದ ಚಿಕಿತ್ಸೆ ನೀಡುವುದರ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.