ದೇಶಾದ್ಯಂತ ಕನ್ನಡ ಭಾಷಾ ದಿನವನ್ನು ಯಾವಾಗ ಆಚರಿಸುತ್ತೀರಿ ಮೋದಿಯವರೇ ?- ಕುಮಾರಸ್ವಾಮಿ

ಇಂದು ಹಿಂದಿ ದಿವಸ್ ಆಚರಿಸುತ್ತಿರುವ ಕೇಂದ್ರ ಸರ್ಕಾರರ ವಿರುದ್ಧ ತರಾಟೆ ತಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದಿಯ ಹಾಗೆ ಅಧಿಕೃತ ಭಾಷೆಯಾಗಿರುವ ಕನ್ನಡ ಭಾಷಾ ದಿನವನ್ನು ಎಂದು ಆಚರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

Last Updated : Sep 14, 2019, 02:25 PM IST
ದೇಶಾದ್ಯಂತ ಕನ್ನಡ ಭಾಷಾ ದಿನವನ್ನು ಯಾವಾಗ ಆಚರಿಸುತ್ತೀರಿ ಮೋದಿಯವರೇ ?- ಕುಮಾರಸ್ವಾಮಿ   title=

ಬೆಂಗಳೂರು:  ಇಂದು ಹಿಂದಿ ದಿವಸ್ ಆಚರಿಸುತ್ತಿರುವ ಕೇಂದ್ರ ಸರ್ಕಾರರ ವಿರುದ್ಧ ತರಾಟೆ ತಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದಿಯ ಹಾಗೆ ಅಧಿಕೃತ ಭಾಷೆಯಾಗಿರುವ ಕನ್ನಡ ಭಾಷಾ ದಿನವನ್ನು ಎಂದು ಆಚರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

ಹಿಂದಿ ದಿವಸ್ ಆಚರಣೆಯಂದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಶುಭ ಹಾರೈಸಿದ್ದರು. ಅಷ್ಟೇ ಅಲ್ಲದೆ ಅಮಿತ್ ಶಾ ಹಿಂದಿಯನ್ನು ದೇಶದ ಏಕ ಭಾಷೆಯಾಗಿ ಜಾರಿಗೆ ತರುವ ಪ್ರಸ್ತಾವವನ್ನು ಟ್ವೀಟ್ ನಲ್ಲಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಕೇಂದ್ರದ ನಡೆ ವಿರುದ್ಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ 'ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ 'ಹಿಂದಿ ದಿವಸ್' ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ.' ಎಂದು ಕಿಡಿ ಕಾರಿದ್ದಾರೆ.

1949 ಸೆಪ್ಟೆಂಬರ್ 14 ರಂದು ಸಂವಿಧಾನ ಸಭೆ ಹಿಂದಿಯನ್ನು ದೇವನಾಗರಿ ಲಿಪಿ ಮೂಲಕ ಅಧಿಕೃತ ಭಾಷೆ ಎಂದು ಪರಿಗಣಿಸಿತು, ಅಂದಿನಿಂದ ಹಿಂದಿ ದಿವಸ್ ಆಚರಣೆಯನ್ನು ಕೇಂದ್ರ ಸರ್ಕಾರ ಆಚರಿಸಿಕೊಂಡು ಬರುತ್ತಿದೆ.

Trending News