ದಾವಣಗೆರೆ: ಸಾಲಕ್ಕಾಗಿ ಬ್ಯಾಂಕಿಗೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಬ್ಯಾಂಕ್ ಮ್ಯಾನೇಜರ್ ಅನ್ನು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಸಾಲ ಕೇಳಿಕೊಂಡು ಬ್ಯಾಂಕಿಗೆ ಬಂದಿದ್ದ ಮಹಿಳೆಯ ಬಳಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದ ಬ್ಯಾಂಕ್ ಮ್ಯಾನೇಜರ್, 'ಸಾಲ ಬೇಕು ಎಂದರೆ ನನ್ನೊಂದಿಗೆ ಸರಸಕ್ಕೆ ಬರಬೇಕು' ಎಂದು ಮಹಿಳೆಯನ್ನು ತನ್ನ ಮನೆಗೂ ಆಮಂತ್ರಿಸಿದ್ದ ಎನ್ನಲಾಗಿದೆ.
ಘಟನೆಯು ನಗರದ ನಿಜಲಿಂಗಪ್ಪ ಎಕ್ಸಟೆನ್ಶನ್ ನಲ್ಲಿ ನಡೆದಿದ್ದು, ಮ್ಯಾನೇಜರ್ ನ ಆಮಂತ್ರಣದ ಮೇರೆಗೆ ಆತನ ಮನೆಗೆ ತೆರಳಿದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಮ್ಯಾನೇಜರ್ ನನ್ನು ಆತನದೇ ಮನೆಯಿಂದ ಬೀದಿಗೆ ಎಳೆದು ತಂದು ದೊಣ್ಣೆ, ಚಪ್ಪಲಿಗಳಿಂದ ಯದ್ವಾತದ್ವಾ ಥಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#WATCH Woman in Karnataka's Davanagere thrashes a bank manager for allegedly asking sexual favours to approve her loan (15 October) pic.twitter.com/IiiKbiEgZ9
— ANI (@ANI) October 16, 2018
ಸದ್ಯ ಘಟನೆ ಬಗ್ಗೆ ದೂರು ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.