Weekly Number Horoscope : ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮ ದಿನಾಂಕವನ್ನು ಕೂಡಿಸಿ ಬರುವ ಮೊತ್ತದಿಂದ ವ್ಯಕ್ತಿಯ ಮೂಲಾಂಕ ಅಥವಾ ರಾಡಿಕ್ಸ್ ಅನ್ನು ಕಂಡು ಹಿಡಿಯಲಾಗುತ್ತದೆ. ಇದರ ಆಧಾರದ ಮೇಲೆಯೇ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, 1 ರಿಂದ 9 ರವರೆಗೆ ಮೂಲಾಂಕವಿರುತ್ತದೆ. ಇದರ ಪ್ರಕಾರ, ದೈನಂದಿನ, ಸಾಪ್ತಾಹಿಕ, ಮಾಸಿಕ ಮತ್ತು ವಾರ್ಷಿಕ ಭವಿಷ್ಯವನ್ನು ಹೇಳಲಾಗುತ್ತದೆ. ಸಾಪ್ತಾಹಿಕ ಸಂಖ್ಯಾಶಾಸ್ತ್ರದ ಪ್ರಕಾರ, 2022 ರ ನವೆಂಬರ್ 27 ರಿಂದ ಡಿಸೆಂಬರ್ 3 ರವರೆಗಿನ ಸಮಯವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರಿಗೆ ಮಂಗಳಕರವಾಗಿರಲಿದೆ.
ಮುಂದಿನ ವಾರ ಯಾರಿಗೆ ಶುಭ ? :
ರಾಡಿಕ್ಸ್ 2 : ಮುಂದಿನ ವಾರ ನಿಮಗೆ ಅನುಕೂಲಕರವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. ಆರಂಭಿಸುವ ಕೆಲಸಗಳು ಅದೃಷ್ಟದ ಸಹಾಯದಿಂದ ಪೂರ್ಣಗೊಳ್ಳುತ್ತವೆ. ಹಣಕಾಸಿನ ಪ್ರಯೋಜನವಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.
ಇದನ್ನೂ ಓದಿ : Vastu Shastra : ಅಪ್ಪತಪ್ಪಿಯೂ ಇತರರ ಈ ವಸ್ತುಗಳನ್ನು ಬಳಸಬೇಡಿ, ಮನೆಯಲ್ಲಿ ದುರಾದೃಷ್ಟ ಬರುತ್ತದೆ
ರಾಡಿಕ್ಸ್ 3 : ಬಹಳ ದಿನಗಳಿಂದ ಕೈ ಸೇರದೇ ಹೊರಗಡೆ ಉಳಿದಿದ್ದ ಹಣ ಕೈ ಸೇರಲಿದೆ. ಸ್ಥಗಿತಗೊಂಡಿರುವ ಕೆಲಸಗಳು ಚುರುಕು ಪಡೆಯುತ್ತವೆ. ವೃತ್ತಿಜೀವನದಲ್ಲಿ ಹೊಸ ಅವಕಾಶ ಸಿಗಲಿದೆ. ಅಥವಾ ಹೊಸ ಯೋಜನೆಯ ಜವಾಬ್ದಾರಿ ನಿಮ್ಮ ಪಾಲಿನದ್ದಾಗಲಿದೆ. ಗೌರವ ಹೆಚ್ಚಾಗಲಿದೆ. ಉತ್ತಮ ಸ್ಥಾನ ಮತ್ತು ಹಣ ಪ್ರಾಪ್ತಿಯಾಗಲಿದೆ.
ರಾಡಿಕ್ಸ್ 6 : ಈ ಸಮಯವು ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ. ಹೊಸ ಕೆಲಸಕ್ಕೆ ಸೇರಬಹುದು. ಹಠಾತ್ ಧನಲಾಭವಾಗಬಹುದು. ಆದಾಯ ಹೆಚ್ಚಲಿದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ವಿವಾಹಿತರಿಗೂ ಸಮಯ ಉತ್ತಮವಾಗಿರುತ್ತದೆ.
ಇದನ್ನೂ ಓದಿ : Aquarium Vastu Tips : ಅಕ್ವೇರಿಯಂನಲ್ಲಿ ಮೀನು ಸಾಯುವುದು ಈ ಸಂಕೇತವಾಗಿದೆ!
ರಾಡಿಕ್ಸ್ 8 : ಮುಂದಿನ ವಾರ ವೃತ್ತಿಜೀವನದ ದೃಷ್ಟಿಯಿಂದ ಮಂಗಳಕರವಾಗಿರಲಿದೆ. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಇರುತ್ತದೆ. ಅಧಿಕಾರಿಗಳು-ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗುತ್ತದೆ. ಮನೆಯಲ್ಲೂ ಸಂತಸದ ವಾತಾವರಣ ಇರುತ್ತದೆ. ಪರೀಕ್ಷೆ ಮತ್ತು ಸಂದರ್ಶನದಲ್ಲಿ ಯಶಸ್ಸು ಸಿಗಲಿದೆ.
ರಾಡಿಕ್ಸ್ 9 : ವ್ಯಾಪಾರ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಪ್ರಯತ್ನ ಮಾಡುವುದಾದರೆ ಸರಿಯಾದ ಯೋಜನೆಯೊಂದಿಗೆ ಹೆಜ್ಜೆ ಇಡಿ. ಆಗ ಮಾಡುವ ಕೆಲಸದಲ್ಲಿ ಲಾಭವಾಗುವುದು. ಗೌರವ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.