Vastu Tips : ವಾಸ್ತು ಪ್ರಕಾರ ಮನೆಯಲ್ಲಿ ಈ 3 ವಿಶೇಷ ಬದಲಾವಣೆ ಮಾಡಿ, ಅದೃಷ್ಟ ಕೂಡಿಬರುತ್ತದೆ!

ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಮತ್ತು ಧನಾತ್ಮಕ ಶಕ್ತಿಯನ್ನು ತುಂಬಲು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.

Written by - Zee Kannada News Desk | Last Updated : Mar 31, 2022, 05:47 PM IST
  • ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ
  • ಕುಟುಂಬದಲ್ಲಿ ಸಂತೋಷ ಮನೆ ಮಾಡುತ್ತೆ
  • ಹಣದ ಕೊರತೆ ಇರುವುದಿಲ್ಲ
Vastu Tips : ವಾಸ್ತು ಪ್ರಕಾರ ಮನೆಯಲ್ಲಿ ಈ 3 ವಿಶೇಷ ಬದಲಾವಣೆ ಮಾಡಿ, ಅದೃಷ್ಟ ಕೂಡಿಬರುತ್ತದೆ! title=

ನವದೆಹಲಿ : ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕು ಮತ್ತು ಅದರ ವಿನ್ಯಾಸದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಮನೆ ಕಟ್ಟುವಾಗ ವಾಸ್ತು ನಿಯಮಗಳನ್ನು ನಿರ್ಲಕ್ಷಿಸಿದರೆ ನಕಾರಾತ್ಮಕ ಶಕ್ತಿ ಉಳಿಯುತ್ತದೆ ಎಂದು ವಾಸ್ತು ಶಾಸ್ತ್ರದ ತಜ್ಞರು ಹೇಳುತ್ತಾರೆ. ಹೀಗಾಗಿ, ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಮತ್ತು ಧನಾತ್ಮಕ ಶಕ್ತಿಯನ್ನು ತುಂಬಲು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.

ಮನೆ ಪೂಜಾ ಕೋಣೆ

ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ, ಮನೆಯ ಪೂಜಾ ಕೋಣೆಗೆ ಅತ್ಯಂತ ಸೂಕ್ತವಾದ ದಿಕ್ಕು ಈಶಾನ್ಯ (ಪೂರ್ವ-ಉತ್ತರ ಮೂಲೆ) ಆಗಿದೆ. ಮನೆಯ ಪೂಜಾ ಕೋಣೆ ಯಾವಾಗಲೂ ಪೂರ್ವ, ಉತ್ತರ ಅಥವಾ ಪೂರ್ವ-ಉತ್ತರ ಕೋನದಲ್ಲಿರಬೇಕು. ಅಲ್ಲದೆ ಮನೆಯ ಪೂಜಾ ಕೋಣೆ ಸ್ವಲ್ಪ ಎತ್ತರದಲ್ಲಿರಬೇಕು.

ಇದನ್ನೂ ಓದಿ : Chaitra Navratri 2022 : ಚೈತ್ರ ನವರಾತ್ರಿಯಲ್ಲಿ ಈ ವಾಸ್ತು ಸಲಹೆ ಅನುಸರಿಸಿ, ಮನೆಯಲ್ಲಿ ಸಂತೋಷ - ಸಮೃದ್ಧಿ ನೆಲೆಸುತ್ತದೆ!

ಮನೆ ಗಡಿಯಾರ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗಡಿಯಾರ(Wall Clock)ವನ್ನು ಸರಿಯಾದ ಸ್ಥಳದಲ್ಲಿ ನೇತು ಹಾಕಿ, ಇಲ್ಲದಿದ್ದರೆ, ಜೀವನದಲ್ಲಿ ಹಲವಾರು ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ವಾಸ್ತು ಪ್ರಕಾರ, ಗಡಿಯಾರವನ್ನು ಮನೆಯಲ್ಲಿ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಗಡಿಯಾರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಬಹುದು.

ತುಳಸಿ ಗಿಡ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ತುಳಸಿ ಗಿಡ(Tulsi Tree)ವನ್ನು ಮನೆಯ ಅಂಗಳದಲ್ಲಿ ನೆಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದಲ್ಲದೆ, ತುಳಸಿ ಗಿಡವನ್ನು ಮನೆಯ ಪೂರ್ವ ಅಥವಾ ಪೂರ್ವ-ಉತ್ತರ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೀತಿ ತುಳಸಿ ಗಿಡವನ್ನು ನೆಡುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ. ಅದೇ ಸಮಯದಲ್ಲಿ, ಸಂತೋಷವು ಮನೆಯಲ್ಲಿ ಉಳಿಯುತ್ತದೆ.

ಇದನ್ನೂ ಓದಿ : Ugadi Horoscope: ಮುಂದಿನ ಇಡೀ ವರ್ಷ ಈ ಮೂರು ರಾಶಿಯವರಿಗೆ ಭಾರೀ ಧನ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News