Aleovera for Skincare : ಅಲೋವೆರಾವನ್ನು ತ್ವಚೆಯ ಆರೈಕೆಯಲ್ಲಿ ಹಲವು ವಿಧಗಳಲ್ಲಿ ಬಳಸಬಹುದು. ಇದು ಅನೇಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದರಲ್ಲಿರುವ ವಿಟಮಿನ್ ಎ, ಬಿ, ಸಿ ಮತ್ತು ಇ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅಲೋವೆರಾವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವು ಮೃದುವಾಗುತ್ತದೆ. ಮಾತ್ರವಲ್ಲ ಚರ್ಮಕ್ಕೆ ವಯಸ್ಸಾಗದಂತೆ ತಡೆಯುತ್ತದೆ. ಅಂದರೆ ವಯಸ್ಸಾದ ಲಕ್ಷಣ ತ್ವಚೆಯಲ್ಲಿ ಕಂಡು ಬರದಂತೆ ನೋಡಿಕೊಳ್ಳುತ್ತದೆ. ಅಲೋವೆರಾವನ್ನು ಮುಖಕ್ಕೆ ಸರಿಯಾಗಿ ಹಚ್ಚುವುದರಿಂದ ತ್ವಚೆಗೆ ಹಲವಾರು ಪ್ರಯೋಜನಗಳಿವೆ. ರಾತ್ರಿ ವೇಳೆ ಮುಖಕ್ಕೆ ಅಲೋವೆರಾ ಜೆಲ್ ಹಚ್ಚುವ ಮೂಲಕ ತ್ವಚೆ ನೈಸರ್ಗಿಕ ಹೊಳಪು ಪಡೆಯುತ್ತದೆ.
ಯಾವುದೇ ಅಡ್ಡ ಪರಿಣಾಮ ಇಲ್ಲದೆ ಸಿಗುವುದು ನ್ಯಾಚ್ಯುರಲ್ ಗ್ಲೋ :
ಮುಖದ ಮೇಲೆ ಅಲೋವೆರಾವನ್ನು ಹೇಗೆ ಹಚ್ಚಬೇಕು ? :
ಅಲೋವೆರಾವನ್ನು ನೇರವಾಗಿ ಮುಖದ ಮೇಲೆ ಹಚ್ಚಬಹುದು. ಇದಕ್ಕಾಗಿ ನೀವು ನಿಮ್ಮ ಅಂಗೈಯಲ್ಲಿ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. ರಾತ್ರಿಯಿಡೀ ಅಲೋವಿರಾ ಮುಖದ ಮೇಲೆಯೇ ಇರುವಂತೆ ಬಿಡಿ. ಕೆಲವೇ ದಿನಗಳಲ್ಲಿ ಮುಖ ಮಿರ ಮಿರನೆ ಮಿಂಚುತ್ತದೆ.
ಇದನ್ನೂ ಓದಿ : ಹುಣಸೆ ಎಲೆ ಹೀಗೆ ಬಳಸಿ.. ಬಿಳಿ ಕೂದಲು ಶಾಶ್ವತವಾಗಿ ಬುಡದಿಂದಲೇ ಕಪ್ಪಾಗುವುದು!
ಅಲೋವೆರಾ ಮತ್ತು ರೋಸ್ ವಾಟರ್: ಅಲೋವೆರಾ ಜೆಲ್ ಜೊತೆಗೆ ರೋಸ್ ವಾಟರ್ ಅನ್ನು ಬೆರೆಸಿ ರಾತ್ರಿ ವೇಳೆ ಮುಖಕ್ಕೆ ಹಚ್ಚಬಹುದು. ಇದು ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಈ ಮಿಶ್ರಣವನ್ನು ಹಚ್ಚುತ್ತಾ ಬಂದರೆ ನಂತರ ಯಾವುದೇ ರೀತಿಯ ಕ್ರೀಂ ಲೋಶನ್ ಅಗತ್ಯ ಇರುವುದಿಲ್ಲ ಎಂದು ಹೇಳಲಾಗುತ್ತದೆ.
ಅಲೋವೆರಾ ಮತ್ತು ಕಿತ್ತಳೆ ಸಿಪ್ಪೆ :
ಮೊದಲು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಅದನ್ನು ಪುಡಿಮಾಡಿಟ್ಟುಕೊಳ್ಳಿ . ನಂತರ ಅಲೋವೆರಾ ಜೆಲ್ಗೆ ಕಿತ್ತಳೆ ಸಿಪ್ಪೆಯ ಪುಡಿಯನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ತ್ವಚೆಯ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ. ಸುಕ್ಕು ಬಾರದಂತೆ ನೋಡಿಕೊಳ್ಳುತ್ತದೆ.
ಅಲೋವೆರಾ ಮತ್ತು ಜೇನುತುಪ್ಪ :
ಈ ಫೇಸ್ ಪ್ಯಾಕ್ ತಯಾರಿಸಲು, ಮೊದಲು ಅಲೋವೆರಾ ಜೆಲ್ ಅನ್ನು ಜೇನುತುಪ್ಪ ಮತ್ತು ಸ್ವಲ್ಪ ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಈ ಫೇಸ್ ಪ್ಯಾಕ್ ವಿಶೇಷವಾಗಿ ಒಣ ಚರ್ಮಕ್ಕೆ ಒಳ್ಳೆಯದು.
ಇದನ್ನೂ ಓದಿ : ದಾಸವಾಳದ ಜೊತೆ ಈ ಕಪ್ಪು ಕಾಳನ್ನು ಅರೆದು ನೆತ್ತಿಗೆ ಹಚ್ಚಿದರೆ ಎಷ್ಟೇ ಬಿಳುಪಾದ ಕೂದಲು ಸಹ ಬುಡದಿಂದಲೇ ಕಪ್ಪಾಗುತ್ತೆ!
ಮುಲ್ತಾನಿ ಮಿಟ್ಟಿ ಮತ್ತು ಅಲೋವೆರಾ ಫೇಸ್ ಪ್ಯಾಕ್: ಈ ಪ್ಯಾಕ್ ತಯಾರಿಸಲು, ಮುಲ್ತಾನಿ ಮಿಟ್ಟಿಯನ್ನು ಅಲೋವೆರಾ ಜೆಲ್ ಮತ್ತು ನೀರಿನೊಂದಿಗೆ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಸಂಪೂರ್ಣ ಮುಖದ ಮೇಲೆ ಚೆನ್ನಾಗಿ ಹಚ್ಚಿ. ಸುಮಾರು 15-20 ನಿಮಿಷಗಳ ಕಾಲ ಒಣಗಲು ಬಿಡಿ. ಇದರ ನಂತರ, ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಅಲೋವೆರಾ ಮತ್ತು ಅರಿಶಿನ :
ಅಲೋವೆರಾದೊಂದಿಗೆ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ರಾತ್ರಿ ವೇಳೆ ಮುಖಕ್ಕೆ ಹಚ್ಚಿದರೆ ಚರ್ಮವು ಹೊಳೆಯುತ್ತದೆ. ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಬೇಕಾದರೆ ಈ ಪೇಸ್ಟ್ ಅನ್ನು ರಾತ್ರಿ ಪೂರ್ತಿ ಮುಖದ ಮೇಲೆ ಬಿಡಬಹುದು. ಈ ಮಿಶ್ರಣ ಮುಖಕ್ಕೆ ಗೋಲ್ಡನ್ ಗ್ಲೋ ನೀಡುತ್ತದೆ.
ಇದನ್ನೂ ಓದಿ : ಅಡುಗೆ ಮನೆಯಲ್ಲಿರುವ ಈ 4 ವಸ್ತು ಬಳಸಿ ಕೂದಲು ಸ್ವಚ್ಛಗೊಳಿಸಿ, ಕೂದಲು ಉದುರುವುದಿಲ್ಲ!
(ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ.. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.