Astrology: ಜನ್ಮ ಜಾತಕದಲ್ಲಿ ಈ ಯೋಗ ಇರುವವರ ಭಾಗ್ಯ ಬಂಬಾಟಾಗಿರುತ್ತದೆ, ಪಂಚ ಮಹಾಪುರುಷ ಯೋಗಗಳಲ್ಲಿ ಇದೂ ಒಂದು

Astrology: ಜೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ಜನರ ಜನ್ಮಜಾತಕದಲ್ಲಿ ಪಂಚ ಮಹಾಯೋಗಗಳಲ್ಲಿ ಒಂದು ಯೋಗ ಇದ್ದರೂ ಕೂಡ ಅವರು ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ. ಮಾಲವ್ಯ ಯೋಗವೂ ಕೂಡ ಪಂಚಮಹಾಪುರುಷ ಯೋಗಗಳಲ್ಲಿ ಒಂದು. ಮಾಲವ್ಯ ಯೋಗವಿರುವ ಜನರು ಧಣಿಯಾಗಿರುತ್ತಾರೆ. ಅವರಿಗೆ ಜೀವನದಲ್ಲಿ ಅಪಾರ ಯಶಸ್ಸು, ಐಶ್ವರ್ಯ ಹಾಗೂ ಖ್ಯಾತಿ ಪ್ರಾಪ್ತಿಯಾಗುತ್ತದೆ.   

Written by - Nitin Tabib | Last Updated : Sep 13, 2022, 09:11 PM IST
  • ಯಾವುದೇ ಓರ್ವ ವ್ಯಕ್ತಿಯ ಸಂಪೂರ್ಣ ಜೀವನ ಹಾಗೂ ಭಾಗ್ಯ ಹೇಗಿರುತ್ತದೆ?
  • ಇದು ಆ ವ್ಯಕ್ತಿ ಹುಟ್ಟಿದ ಸಮಯ ನಿರ್ಧರಿಸುತ್ತದೆ. ಜನ್ಮ ಜಾತಕದಲ್ಲಿನ ಜನ್ಮ ತಿಥಿ,
  • ಗ್ರಹ-ನಕ್ಷತ್ರಗಳ ದೆಸೆ ಹಾಗೂ ಶುಭ ಹಾಗೂ ಅಶುಭ ಯೋಗಗಳಿಂದ ವ್ಯಕ್ತಿಯ ಜೀವನ ಹೇಗಿರಲಿದೆ ಎಂಬುದು ಬಹುತೇಕ ಸ್ಪಷ್ಟವಾಗುತ್ತದೆ.
Astrology: ಜನ್ಮ ಜಾತಕದಲ್ಲಿ ಈ ಯೋಗ ಇರುವವರ ಭಾಗ್ಯ ಬಂಬಾಟಾಗಿರುತ್ತದೆ, ಪಂಚ ಮಹಾಪುರುಷ ಯೋಗಗಳಲ್ಲಿ ಇದೂ ಒಂದು title=
Pancha Mahapurush Yoga

Malavya Yoga: ಯಾವುದೇ ಓರ್ವ ವ್ಯಕ್ತಿಯ ಸಂಪೂರ್ಣ ಜೀವನ ಹಾಗೂ ಭಾಗ್ಯ ಹೇಗಿರುತ್ತದೆ? ಇದು ಆ ವ್ಯಕ್ತಿ ಹುಟ್ಟಿದ ಸಮಯ ನಿರ್ಧರಿಸುತ್ತದೆ. ಜನ್ಮ ಜಾತಕದಲ್ಲಿನ ಜನ್ಮ ತಿಥಿ, ಗ್ರಹ-ನಕ್ಷತ್ರಗಳ ದೆಸೆ ಹಾಗೂ ಶುಭ ಹಾಗೂ ಅಶುಭ ಯೋಗಗಳಿಂದ ವ್ಯಕ್ತಿಯ ಜೀವನ ಹೇಗಿರಲಿದೆ ಎಂಬುದು ಬಹುತೇಕ ಸ್ಪಷ್ಟವಾಗುತ್ತದೆ. ವ್ಯಕ್ತಿ ಸಂತೋಷದ ಜೀವನ ಕಳೆಯುತ್ತಾನೆಯೋ ಅಥವಾ ಆತನ ಜೀವನ ಕಷ್ಟಗಳಿಂದ ಕೂಡಿರುತ್ತದೆಯೋ ಅದನ್ನು ಜನ್ಮ ಕುಂಡಲಿಯನ್ನು ನೋಡಿ ಲೆಕ್ಕಹಾಕಬಹುದು. ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಓರ್ವ ವ್ಯಕ್ತಿಯ ಜನ್ಮ ಜಾತಕದಲ್ಲಿ ಪಂಚಮಹಾಯೋಗಗಳಲ್ಲಿ ಒಂದು ಯೋಗವಿರುತ್ತದೆಯೋ, ಆ ವ್ಯಕ್ತಿ ಅದೃಷ್ಟದ ಧಣಿಯಾಗಿರುತ್ತಾನೆ. ಈ ಪಂಚ ಮಹಾಪುರುಷಯೋಗಗಳಲ್ಲಿ ಮಾಲವ್ಯ ಯೋಗ ಕೂಡ ಒಂದು. ಮಾಲವ್ಯ ಯೋಗದಲ್ಲಿ ಜನಿಸಿದ ವ್ಯಕ್ತಿ ತನ್ನ ಜೀವನದಲ್ಲಿ ಅಪಾರ ಯಶಸ್ಸನ್ನು ಸಂಪಾದಿಸುತ್ತಾನೆ. ಅಷ್ಟೇ ಅಲ್ಲ ಇಂಥಹ ವ್ಯಕ್ತಿ ಧನ-ಸಂಪತ್ತಿನ ಜೊತೆಗೆ ರೂಪ-ಗುಣ, ಖ್ಯಾತಿ ಹಾಗೂ ಐಶ್ವರ್ಯದ ಮಾಲೀಕರಾಗಿರುತ್ತಾರೆ.

ಜೋತಿಷ್ಯ ಪಂಡಿತರ ಪ್ರಕಾರ ಜನ್ಮ ಜಾತಕದಲ್ಲಿ e ಪಂಚ ಮಹಾಪುರುಷ ಯೋಗ ಹೇಗೆ ನಿರ್ಮಾಣಗೊಳ್ಳುತ್ತದೆ ಹಾಗೂ ಮಾಲವ್ಯ ಯೋಗ ಹೊಂದಿರುವ ವ್ಯಕ್ತಿಯ ಜೀವನದ ಮೇಲೆ ಇದರ ಪ್ರಭಾವ ಹೇಗೆ ಇರುತ್ತದೆ ತಿಳಿದುಕೊಳ್ಳೋಣ ಬನ್ನಿ,

ಪಂಚಮಹಾಪುರುಷ ಯೋಗ ಹೇಗೆ ನಿರ್ಮಾಣಗೊಳ್ಳುತ್ತದೆ?
ಜಾತಕದಲ್ಲಿ, ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿ ಗ್ರಹಗಳು ಪಂಚ ಮಹಾಪುರುಷ ಯೋಗದ ವಿವಿಧ ಯೋಗಗಳನ್ನು ರೂಪಿಸುತ್ತವೆ. ಇದರಿಂದ ರುಚಕ್ ಯೋಗ, ಭದ್ರ ಯೋಗ, ಹಂಸ ಯೋಗ, ಮಾಲವ್ಯ ಯೋಗ ಮತ್ತು ಶಶ ಯೋಗಗಳು ಹುಟ್ಟುತ್ತವೆ.

ಯಾವ ಗ್ರಹದ ಕಾರಣ ಪಂಚ ಮಹಾಪುರುಷ ಯೋಗದಲ್ಲಿ ಯಾವ ಯೋಗ ನಿರ್ಮಾಣಗೊಳ್ಳುತ್ತದೆ?
>> ಪಂಚ ಮಹಾಪುರುಷ ಯೋಗದಲ್ಲಿ ಮಂಗಳ ಗ್ರಹದಿಂದ ನಿರ್ಮಾಣಗೊಳ್ಳುವ ಯೋಗವನ್ನು ರುಚಕ ಯೋಗ ಎಂದು ಕರೆಯುತ್ತಾರೆ.
>> ಪಂಚ ಮಹಾಪುರುಷ ಯೋಗಗಳಲ್ಲಿ ಭದ್ರ ಯೋಗ ಕೂಡ ಒಂದು, ಬುಧ ಗ್ರಹದ ಕಾರಣ ಈ ಯೋಗ ನಿರ್ಮಾಣಗೊಳ್ಳುತ್ತದೆ.
>> ಪಂಚ ಮಹಾಪುರುಷ ಯೋಗಗಳಲ್ಲಿ ಹಂಸ ಯೋಗ ಕೂಡ ಒಂದು, ಇದು ದೇವಗುರು ಬೃಹಸ್ಪತಿಯ ಕಾರಣ ನಿರ್ಮಾಣಗೊಳ್ಳುತ್ತದೆ.
>> ಶುಕ್ರ ಗ್ರಹದ ಕಾರಣ ಪಂಚ ಮಹಾಪುರುಷ ಯೋಗದ ಮಾಲವ್ಯ ಯೋಗ ನಿರ್ಮಾಣಗೊಳ್ಳುತ್ತದೆ.
>> ಶನಿ ಗ್ರಹದಿಂದ ಪಂಚ ಮಹಾಪುರುಷ ಯೋಗದ ಶಶಾ ಯೋಗ ನಿರ್ಮಾಣಗೊಳ್ಳುತ್ತದೆ.

ಇದನ್ನೂ ಓದಿ-Jupiter Retrograde 2022: 12 ವರ್ಷಗಳ ಬಳಿಕ ಈ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ, ಈ ಜನರಿಗೆ ಲಾಭವೇ ಲಾಭ

ಮಾಲವ್ಯ ಯೋಗ ಇರುವ ವ್ಯಕ್ತಿಯ ವ್ಯಕ್ತಿತ್ವ ಹೇಗೆ ಇರುತ್ತದೆ?
ಪಂಚ ಮಹಾಪುರುಷ ಯೋಗಗಳಲ್ಲಿ ಮಾಲವ್ಯ ಯೋಗ ಕೂಡ ಒಂದು. ಜೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ತನ್ನದೇ ಆದ ರಾಶಿಯಾಗಿರುವ ವೃಷಭ ಮತ್ತು ತುಲಾ ರಾಶಿಯ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಭಾವದಲ್ಲಿ ಅಥವಾ ಉಚ್ಛ ರಾಶಿಯಾಗಿರುವ ಮೀನ ರಾಶಿಯಲ್ಲಿ ವಿರಾಜಮಾನನಾಗಿರುವಾಗ, ಮಾಲವ್ಯ ಯೋಗ ರೂಪುಗೊಳ್ಳುತ್ತದೆ. ಮಾಲವ್ಯ ಯೋಗವಿರುವ ವ್ಯಕ್ತಿಯ ಮೇಲೆ ಶುಕ್ರನ ಪ್ರಭಾವ ಸದಾ ಇರುತ್ತದೆ, ಆದ್ದರಿಂದ ಇಂತಹ ವ್ಯಕ್ತಿಯ ಅದೃಷ್ಟವು ತುಂಬಾ  ಬಲವಾಗಿರುತ್ತದೆ.

ಇದನ್ನೂ ಓದಿ-Pitru Paksha 2022: ನಿಮ್ಮಿಂದ ಶ್ರಾದ್ಧ ನೆರವೇರಿಸಲು ಆಗುತ್ತಿಲ್ಲ ಎಂದಾದಲ್ಲಿ ಈ ಉಪಾಯಗಳನ್ನು ಅನುಸರಿಸಿ ಅಗಲಿದವರನ್ನು ಸಂತೋಷಪಡಿಸಿ

ಸಂಗೀತ, ಸಿನಿಮಾ, ಮಾಧ್ಯಮದಂತಹ ಕಲಾ ಕ್ಷೇತ್ರದ ಕೆಲಸಗಳಲ್ಲಿ ಅವರು ಯಶಸ್ಸನ್ನು ಪಡೆಯುತ್ತಾರೆ. ಇದೆ ವೇಳೆ, ಈ ವ್ಯಕ್ತಿ ವ್ಯಕ್ತಿತ್ವದಿಂದ ತುಂಬಾ ಶ್ರೀಮಂತನಾಗಿರುತ್ತಾನೆ, ಇವರು ತಮ್ಮ ಮುಂದೆ ಇರುವ ವ್ಯಕ್ತಿಯನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಅವರಿಗೆ ಜೀವನದಲ್ಲಿ ಭೌತಿಕ ಸುಖದ ಕೊರೆತೆ ಎಂದಿಗೂ ಕೂಡ ಇರುವುದಿಲ್ಲ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News