Tuesday Tips: ದೋಷನಿವಾರಣೆಗಾಗಿ ಹನುಮಂತನನ್ನು ಪೂಜಿಸಲು ಮಂಗಳವಾರ ಅತ್ಯುತ್ತಮ ದಿನ ಎಂದು ಪರಿಗಣಿಸಲಾಗಿದೆ. ಏಕೆಂದರೆ ವಾರದ ಈ ದಿನವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಎಲ್ಲಾ ಧರ್ಮಗ್ರಂಥಗಳು, ಜ್ಯೋತಿಷ್ಯ ಇತ್ಯಾದಿಗಳಲ್ಲಿ ವಾರದ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಯನ್ನು ಹೊಂದಿದೆ. ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದ್ದು, ಅದರ ಹಿಂದೆ ಒಂದು ನಿಯಮವನ್ನೂ ಮಾಡಲಾಗಿದೆ. ಆ ನಿಯಮಗಳನ್ನು ಪಾಲಿಸುವುದರಿಂದ ಒಳ್ಳೆಯದಾಗುವುದು ಎಂಬ ನಂಬಿಕೆ. ಹಲವು ಸಂದರ್ಭಗಳಲ್ಲಿ ಕೆಲವು ದಿನ ಮಾಡುವ ಕೆಲ ಕೆಲಸಗಳಿಂದ ಜೀವನವು ಅನೇಕ ರೀತಿಯ ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತದೆ.
ಪ್ರತಿ ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಆ ದಿನ ನಿರ್ದಿಷ್ಟ ದೇವರನ್ನು ಪೂಜಿಸಿ, ಆರಾಧಿಸುವುದರಿಂದ ಆ ದೇವರುಗಳು ಬೇಗನೆ ಸಂತಸಗೊಳ್ಳುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಇದರ ಹೊರತಾಗಿ, ಪ್ರತಿ ದಿನವು ತನ್ನದೇ ಆದ ಕೆಲವು ನಿಯಮಗಳನ್ನು ಹೊಂದಿದೆ. ಇವುಗಳನ್ನು ಅನುಸರಿಸಲು ವಿಫಲವಾದರೆ ಅನೇಕ ಅನಾನುಕೂಲಗಳಿಗೆ ಕಾರಣವಾಗುತ್ತದೆ. ಇದರೊಂದಿಗೆ, ಕುಂಡಲಿಯಲ್ಲಿ (Kundali) ಅದಕ್ಕೆ ಸಂಬಂಧಿಸಿದ ಗ್ರಹಗಳು (Grah) ಕೂಡ ಅಶುಭ ಪರಿಣಾಮಗಳನ್ನು ನೀಡಲು ಆರಂಭಿಸುತ್ತವೆ ಎನ್ನಲಾಗುತ್ತದೆ.
ಅಂತೆಯೇ ಮಂಗಳವಾರವು (Tuesday) ಹನುಮಂತನಿಗೆ (Lord Hanuman)ಮೀಸಲಾದ ದಿನ. ಈ ದಿನ ಹನುಮಂತನನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ತೊಂದರೆಗಳಿಂದ ಪರಿಹಾರ ಪಡೆಯಬಹುದು ಎಂಬ ನಂಬಿಕೆ ಇದೆ. ಆದರೆ ಮಂಗಳವಾರದನ್ನು ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ಕೆಲಸಗಳಿಂದ ಜೀವನದಲ್ಲಿ ಹಲವು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಮಂಗಳವಾರದಂದು ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ...
ಇದನ್ನೂ ಓದಿ- ಆಕರ್ಷಕ ಮತ್ತು ದೃಢ ವ್ಯಕ್ತಿತ್ವವುಳ್ಳವರು ಈ ಎರಡು ರಾಶಿಯವರು, ನೀವು ಕೂಡಾ ಇದೇ ರಾಶಿಯವರಾ?
ಮಂಗಳವಾರ ಈ ಕೆಲಸವನ್ನು ಮಾಡಬೇಡಿ :
ಮಂಗಳವಾರ ಶ್ರೀ ರಾಮನ ಪರಮ ಭಕ್ತ ಹನುಮಂತನಿಗೆ (Lord Hanuman) ಮೀಸಲಾಗಿರುವ ದಿನ. ಈ ದಿನ ಹನುಮಂತನಿಗೆ ಕೋಪ ತರುವಂತಹ, ಆತನ ಮುನಿಸಿಗೆ ಕಾರಣವಾಗುವಂತಹ ಅಥವಾ ಅಶುಭ ಪರಿಣಾಮಗಳು ಉಂಟಾಗುವಂತಹ ಕೆಲಸಗಳನ್ನು ಮಾಡದಂತೆ ಸಲಹೆ ನೀಡಲಾಗುತ್ತದೆ.
>> ಮಂಗಳವಾರ ಮಾಂಸಾಹಾರ-ಆಲ್ಕೋಹಾಲ್ ಸೇವಿಸಬೇಡಿ. ಇದನ್ನು ಮಾಡುವುದರಿಂದ, ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.
>> ಮಂಗಳವಾರ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ. ಇದು ಹಣದ ನಷ್ಟಕ್ಕೂ ಕಾರಣವಾಗುತ್ತದೆ.
>> ಮಂಗಳವಾರ (Tuesday Remedies) ಬ್ರಹ್ಮಚರ್ಯವನ್ನು ಅನುಸರಿಸಿ ಏಕೆಂದರೆ ಈ ದಿನ ಜನಿಸಿದ ಮಕ್ಕಳು ಉಗ್ರ ಸ್ವಭಾವದವರು ಮತ್ತು ಅಹಂಕಾರಿಗಳು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- October 2021 Rashi Parivartan: ಎರಡು ದೊಡ್ಡ ಗ್ರಹಗಳ ರಾಶಿ ಪರಿವರ್ತನೆ, ನಿಮ್ಮ ಮೇಲೆ ಅದರ ಪರಿಣಾಮ ಏನೆಂದು ತಿಳಿಯಿರಿ
>> ಮಂಗಳವಾರ ಹಣದ ವಹಿವಾಟು ಮಾಡುವುದನ್ನು ತಪ್ಪಿಸಿ. ವಿಶೇಷವಾಗಿ ಸಾಲ ನೀಡುವುದಾಗಲೀ ಅಥವಾ ಸಾಲ ಮಾಡುವುದಾಗಲೀ ಮಾಡದಿದ್ದರೆ ಒಳಿತು. ಇದನ್ನು ಮಾಡುವುದರಿಂದ, ಹಣ ನಷ್ಟವಾಗುವ ಸಾಧ್ಯತೆ ಇದೆ. ಅಂದರೆ, ಅದನ್ನು ಎರವಲು ಪಡೆದರೆ, ಅದರ ಹೊರೆ ಹೆಚ್ಚಾಗುತ್ತದೆ ಮತ್ತು ಕೊಟ್ಟರೆ ಆ ಹಣ ಮುಳುಗಬಹುದು ಎನ್ನಲಾಗುತ್ತದೆ.
>> ಮಂಗಳವಾರ ಚೂಪಾದ ವಸ್ತುಗಳನ್ನು ಖರೀದಿಸಬೇಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಅಶಾಂತಿ ಹೆಚ್ಚಾಗುತ್ತದೆ. ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತವೆ ಎನ್ನುವರು.
>> ಮಂಗಳವಾರ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ. ಒಂದೊಮ್ಮೆ ಈ ದಿಕ್ಕಿನಲ್ಲಿ ನೀವು ಪ್ರಯಾಣಿಸಬೇಕಾದರೆ, ಮನೆಯಿಂದ ಹೊರಡುವಾಗ ಬೆಲ್ಲ ತಿನ್ನಿರಿ ಮತ್ತು ನೀರು ಕುಡಿಯಿರಿ, ನಂತರ ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೋರಡಿ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.