ಪಿತೃ ಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಮತ್ತು ಅದರ ಪ್ರಾಮುಖ್ಯತೆ ಏನು ಎಂದು ತಿಳಿಯಿರಿ?

Pitru Paksha 2021 : ಧಾರ್ಮಿಕ ನಂಬಿಕೆಗಳ ಪ್ರಕಾರ,  ಪಿತೃ ಪಕ್ಷದ 15 ದಿನಗಳಲ್ಲಿ ಪೂರ್ವಜರ  ಶ್ರಾದ್ಧವನ್ನು ಮಾಡಲಾಗುತ್ತದೆ.  ಮತ್ತು ಪೂರ್ವಜರ ಆತ್ಮದ ಶಾಂತಿಗಾಗಿ ತರ್ಪಣವನ್ನು ಬಿಡಲಾಗುತ್ತದೆ.

Written by - Ranjitha R K | Last Updated : Sep 21, 2021, 08:07 PM IST
  • ಶ್ರಾದ್ಧದ ಸಮಯದಲ್ಲಿ ಪೂರ್ವಜರನ್ನು ಪೂಜಿಸಲು ಕಪ್ಪು ಎಳ್ಳನ್ನು ಬಳಸಲಾಗುತ್ತದೆ
  • ನಂಬಿಕೆಯ ಪ್ರಕಾರ, ಪೂರ್ವಜರ ವಾಸವು ಚಂದ್ರನ ಮೇಲ್ಭಾಗದಲ್ಲಿದೆ
  • ಬೆಲ್ಲ ಮತ್ತು ಉಪ್ಪನ್ನು ಸಹ ಪಿತೃ ಪಕ್ಷದಲ್ಲಿ ದಾನ ಮಾಡಲಾಗುತ್ತದೆ.
ಪಿತೃ ಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಮತ್ತು ಅದರ ಪ್ರಾಮುಖ್ಯತೆ ಏನು ಎಂದು ತಿಳಿಯಿರಿ? title=
ಶ್ರಾದ್ಧದ ಸಮಯದಲ್ಲಿ ಪೂರ್ವಜರನ್ನು ಪೂಜಿಸಲು ಕಪ್ಪು ಎಳ್ಳನ್ನು ಬಳಸಲಾಗುತ್ತದೆ (file photo)

ನವದೆಹಲಿ : Pitru Paksha 2021 : ಧಾರ್ಮಿಕ ನಂಬಿಕೆಗಳ ಪ್ರಕಾರ,  ಪಿತೃ ಪಕ್ಷದ (PitraPaksha) 15 ದಿನಗಳಲ್ಲಿ ಪೂರ್ವಜರ  ಶ್ರಾದ್ಧವನ್ನು ಮಾಡಲಾಗುತ್ತದೆ.  ಮತ್ತು ಪೂರ್ವಜರ ಆತ್ಮದ ಶಾಂತಿಗಾಗಿ ತರ್ಪಣವನ್ನು ಬಿಡಲಾಗುತ್ತದೆ. ಧರ್ಮಗ್ರಂಥಗಳಲ್ಲಿಯೂ ಶ್ರಾದ್ಧದ ಬಗ್ಗೆ ಅನೇಕ ಕಡೆಗಳಲ್ಲಿ ಉಲ್ಲೇಖಿಸಲಾಗಿದೆ.  ಪಿತೃಪಕ್ಷದಲ್ಲಿ , ಪೂರ್ವಜರು ತಮ್ಮ ಕುಟುಂಬ ಸದಸ್ಯರಿಗೆ ತರ್ಪಣ ಪಡೆದ ನಂತರ ಆಶೀರ್ವಾದ ನೀಡುತ್ತಾರೆ ಎನ್ನುವುದು ನಂಬಿಕೆ. ಪಿತೃ ಪಕ್ಷದಲ್ಲಿ ದಾನ ಮಾಡುವುದು ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಪಿತೃ ಪಕ್ಷದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಎನ್ನುವುದು ತಿಳಿದಿದೆಯೇ? 

ಕಪ್ಪು ಎಳ್ಳು : 
 ಶ್ರಾದ್ಧದ ಸಮಯದಲ್ಲಿ ಪೂರ್ವಜರನ್ನು ಪೂಜಿಸಲು ಕಪ್ಪು ಎಳ್ಳನ್ನು (Black sesame)ಬಳಸಲಾಗುತ್ತದೆ. ಕಪ್ಪು ಎಳ್ಳು ಭಗವಾನ್ ವಿಷ್ಣುವಿಗೆ (Lord Vishnu)ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ದಾನ ಮಾಡುವಾಗ, ಕಪ್ಪು ಎಳ್ಳನ್ನು ತಪ್ಪದೇ ಬಳಸಬೇಕು. ಏನನ್ನಾದರೂ ದಾನ ಮಾಡುವುದು ಸಾಧ್ಯವಾದರೆ, ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. 

ಇದನ್ನೂ ಓದಿ : Nature By Zodiac Signs: ಇನ್ನೊಬ್ಬರ ಯಶಸ್ಸು, ಸಂತೋಷ ಕಂಡು ಹೊಟ್ಟೆ ಉರಿ ಪಡುತ್ತಾರೆಯಂತೆ ಈ ನಾಲ್ಕು ರಾಶಿಯವರು

ಬೆಳ್ಳಿ: 
ನಂಬಿಕೆಯ ಪ್ರಕಾರ, ಪೂರ್ವಜರ ವಾಸವು ಚಂದ್ರನ (Moon) ಮೇಲ್ಭಾಗದಲ್ಲಿದೆ. ಆದ್ದರಿಂದ ಬೆಳ್ಳಿಯಿಂದ (Silver) ಮಾಡಿದ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. 

ಬೆಲ್ಲ ಮತ್ತು ಉಪ್ಪು :
ಬೆಲ್ಲ (Jaggery) ಮತ್ತು ಉಪ್ಪನ್ನು ಸಹ ಪಿತೃ ಪಕ್ಷದಲ್ಲಿ ದಾನ ಮಾಡಲಾಗುತ್ತದೆ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಜಗಳಗಳು ನಡೆಯುತ್ತಲೇ ಇದ್ದರೆ, ಶ್ರಾದ್ಧದ ವೇಳೆ, ಬೆಲ್ಲ ಮತ್ತು ಉಪ್ಪನ್ನು (Salt) ದಾನ ಮಾಡಬೇಕು.

ಇದನ್ನೂ ಓದಿ : Palmistry:ಹಸ್ತದ ಗಾತ್ರ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ತೋರಿಸುತ್ತದೆ

ಬಟ್ಟೆಗಳ ದಾನ : 
 ಪಿತೃ ಪಕ್ಷದಲ್ಲಿ ಬಟ್ಟೆಗಳ ದಾನ ಕೂಡಾ ಬಹಳ ಮುಖ್ಯವಾದುದೆಂದು. ಇದರೊಂದಿಗೆ ಶೂ, ಚಪ್ಪಲಿಗಳು ಮತ್ತು ಛತ್ರಿಗಳನ್ನು ದಾನ ಮಾಡಬಹುದು. ಏಕೆಂದರೆ ಅವುಗಳನ್ನು ರಾಹು-ಕೇತು ದೋಷದ (rahu ketu dosha) ಪ್ರತಿಬಂಧಕ ಎಂದು ಪರಿಗಣಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News