Holi Festival 2022 - ಹೋಳಿ ಹಬ್ಬ ಸಮೀಪಿಸುತ್ತಿದೆ. ಸಾಕಷ್ಟು ತುಂಟತನದಿಂದ ತುಂಬಿದ ಸಂಪ್ರದಾಯಗಳೊಂದಿಗೆ ಸಂಬಂಧಿಸಿದ ಈ ಹಬ್ಬವನ್ನು ದೇಶದ ಪ್ರತಿಯೊಂದು ಭಾಗದಲ್ಲೂ ಸಾಕಷ್ಟು ಹರ್ಷೋಲ್ಲಾಸದಿಂದ ಆಚರಿಸುತ್ತಾರೆ. ಮಹಾರಾಷ್ಟ್ರದ ಬೀಡ್ ನಲ್ಲಿ ಇದನ್ನು ಆಚರಿಸುವ ಸಂಪ್ರದಾಯ ಸಾಕಷ್ಟು ವಿಭಿನ್ನವಾಗಿದೆ. ಬೀಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹೋಳಿ ಹಬ್ಬದ ದಿನ ಕತ್ತೆಯ ಮೇಲೆ ಅಳಿಯನಿಗೆ ಕೂರಿಸಿ ಬಣ್ಣ ಹಚ್ಚುವ ಸಂಪ್ರದಾಯವಿದೆ. ಇದರ ಹಿಂದೆ ಒಂದು ರೋಚಕ ಕಥೆ ಕೂಡ ಇದೆ.
ಕೆಲವರು ಹೋಳಿ ಹಬ್ಬ ಆಚರಣೆಯಿಂದ (Holi 2022) ತಪ್ಪಿಸಿಕೊಳ್ಳುವುದನ್ನು ನೀವು ನೋಡಿರಬಹುದು. ತಮಗೆ ಬಣ್ಣ ಹಚ್ಚಬಾರದು ಎಂಬ ಒಂದೇ ಒಂದು ಕಾರಣಕ್ಕೆ ಅವರು ಎಲ್ಲೆಲ್ಲೋ ಅಡಗಿ ಕುಳಿತುಕೊಳ್ಳುತ್ತಾರೆ. ಅನೇಕ ಬಾರಿ ಯಾರಾದರೂ ಬಣ್ಣ ಹಚ್ಚಲು ಪ್ರಯತ್ನಿಸಿದರೆ, ಜಗಳಗಳು ಕೂಡ ಸಂಭವಿಸುತ್ತವೆ. 80 ವರ್ಷಗಳ ಹಿಂದೆ ಬೀಡ್ ಜಿಲ್ಲೆಯ (Beed District) ಕೇಜ್ ತಾಲ್ಲೂಕಿನ ವೀಡಾ ಯೇವತಾ ಗ್ರಾಮದಲ್ಲಿಯೂ ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ. ಗ್ರಾಮದ ದೇಶಮುಖ್ ಕುಟುಂಬದ ಅಳಿಯ ಬಣ್ಣ ಹಚ್ಚಿಕೊಳ್ಳಲು ನಿರಾಕರಿಸಿದ್ದರು. ಆಗ ಅವರ ಮಾವ ಬಣ್ಣ ಹಚ್ಚಿಕೊಳ್ಳುವಂತೆ ಅವರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕಾಗಿ ಅವರು ಹೂವುಗಳಿಂದ ಅಲಂಕರಿಸಲ್ಪಟ್ಟ ಕತ್ತೆಯನ್ನು ಬರಮಾಡಿಕೊಂಡರು. ಅಳಿಯನನ್ನು ಕತ್ತೆಯ ಮೇಲೆ ಕೂರಿಸಿ, ಊರೆಲ್ಲ ಸುತ್ತಾಡಿಸಿ ನಂತರ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.
ಇದನ್ನೂ ಓದಿ-Tulsi Vastu Tips: ತುಳಸಿ ಗಿಡ ಪದೇ ಪದೇ ಏಕೆ ಒಣಗುತ್ತೆ? ಇಲ್ಲಿದೆ ಕಾರಣ
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅಳಿಯನಿಗೆ ಅಲ್ಲಿ ಆರತಿ ಬೆಳಗಲಾಗುತ್ತದೆ. ಈ ಸಂದರ್ಭದಲ್ಲಿ ಅಳಿಯನಿಗೆ ಚಿನ್ನದ ಉಂಗುರ ಹಾಗೂ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ನಂತರ ಅಳಿಯನ ಬಾಯಿಗೆ ಸಿಹಿ ತಿನ್ನಿಸಿ, ಆತನಿಗೆ ಬಣ್ಣ ಹಚ್ಚಲಾಗುತ್ತದೆ. ಅಂದಿನಿಂದ ಪ್ರತಿವರ್ಷ ಈ ಗ್ರಾಮದಲ್ಲಿನ ಗ್ರಾಮಸ್ಥರು ಅದನ್ನು ಅನುಸರಿಸಿಕೊಂಡು ಬಂದಿದ್ದು, ಇಂದು ಅದು ಸಂಪ್ರದಾಯವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ-ಸೌತೆ ಕಾಯಿ ತಿಂದ ಕೂಡಲೇ ನೀರು ಕುಡಿಯುವ ತಪ್ಪನ್ನು ಎಂದು ಮಾಡಬೇಡಿ
ಇಂದು ಈ ಗ್ರಾಮದಲ್ಲಿ ಪ್ರತಿವರ್ಷ ಹೋಳಿ ಹಬ್ಬಕ್ಕೂ ಮುನ್ನ ಗ್ರಾಮದಲ್ಲಿ ಪ್ರತಿ ಹೊಸ ಅಳಿಯನಿಗಾಗಿ ಹುಡುಕಾಟ ನಡೆಸಲಾಗುತ್ತದೆ ಮತ್ತು ಹೋಳಿ ಹಬ್ಬದಂದು ಈ ಸಂಪ್ರದಾಯವನ್ನು ಪೂರ್ಣಗೊಳಿಸಲಾಗುತ್ತದೆ. ಹಲವು ಬಾರಿ ಈ ಸಂಪ್ರದಾಯದಿಂದ ತಪ್ಪಿಸಿಕೊಳ್ಳಲು ಗ್ರಾಮದ ಕೆಲ ಅಳಿಯಂದಿರರು ಓಡಿಹೋಗುತ್ತಾರೆ ಅಥವಾ ಅವಿತುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಅವರ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ ಮತ್ತು ಈ ಸಂಪ್ರದಾಯವನ್ನು ಪೂರ್ಣಗೊಳಿಸಲಾಗುತ್ತದೆ.
ಇದನ್ನೂ ಓದಿ-ಇಂದಿನ ದಿನ ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ , ನಿಮ್ಮ ಮೇಲಿರಲಿದೆ ಶನಿದೇವನ ಕೃಪೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.