Vastu Tips For Money Plant: ಮನೆಯಲ್ಲಿರುವ ಗಿಡ-ಮರಗಳು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಇದೇ ವೇಳೆ ಅವು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಹಣದ ಹರಿವಿಗೂ ಕೂಡ ಕಾರಣವಾಗುತ್ತವೆ. ಆದರೆ ಮನೆಯಲ್ಲಿ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳಿಗೆ ಸಂಬಂಧಿಸಿದ ನಿಯಮಗಳನ್ನೂ ಕೂಡ ಪಾಲಿಸಿದರೆ, ಹೆಚ್ಚು ಅನುಕೂಲಕರವಾಗಿರುತ್ತದೆ. ಮನಿ ಪ್ಲಾಂಟ್‌ಗಳ ವಿಷಯದಲ್ಲಿಯೂ ಕೂಡ ಇದೇ ರೀತಿ ಇದೆ. ಪ್ರತಿ ಮನೆಯಲ್ಲೂ ಮನಿ ಪ್ಲಾಂಟ್ ಇರುವುದನ್ನು ನೀವು ನೋಡಿರಬಹುದು. ಆದರೆ, ಅದರ ಶುಭ ಫಲ ಮಾತ್ರ ಕೆಲವೇ ಜನರಿಗೆ ಲಭಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಎಂದರೆ, ಯಾವ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇದೆ ಎಂಬುದು ತುಂಬಾ ಮಹತ್ವದ್ದಾಗಿರುತ್ತದೆ.
ಯಾವುದೇ ಸಂಗತಿಯನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಅದು ತನ್ನ ಚಮತ್ಕಾರವನ್ನು ತೋರಿಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಏಕೆಂದರೆ ಹಣಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಹೇಳಲಾಗಿದೆ. ಈ ಎಲ್ಲಾ ವಿಷಯಗಳ ಕುರಿತು ಕಾಳಜಿವಹಿಸಿದರೆ, ಮನೆಯಲ್ಲಿರುವ ಮನಿ ಪ್ಲಾಂಟ್ ಅದರ ನೈಜ ಅರ್ಥದಲ್ಲಿ ಧನವೃಷ್ಟಿಗೆ ಕಾರಣವಾಗುತ್ತದೆ. ಮನಿ ಪ್ಲಾಂಟ್ ಗೆ ಸಂಬಂಧಿಸಿದ ಈ ಉಪಾಯಗಳನ್ನು ನೀವು ಅನುಸರಿಸಿದರೆ, ಅದು ವಿಶೇಷ ಪ್ರಯೋಜನಗಳಿಗೆ ಕಾರಣವಾಗುತ್ತದೆ.
ವಾಸ್ತು ಪ್ರಕಾರ ಮನಿ ಪ್ಲಾಂಟ್ ಇಡುವ ನಿಯಮಗಳನ್ನು ತಿಳಿದುಕೊಳ್ಳಿ
>> ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ನೆಡುವುದು ಶುಭ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಅದನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ, ನಂತರ ವಿಪರೀತ ಫಲಿತಾಂಶಗಳು ಕಂಡುಬರುತ್ತವೆ.
>> ಮನಿ ಪ್ಲಾಂಟ್ ಅನ್ನು ಎಂದಿಗೂ ಕೂಡ ನೇರವಾಗಿ ನೆಲದ ಮೇಲೆ ನೆಡಬಾರದು. ಅಲ್ಲದೆ, ಅದರ ಎಲೆಗಳನ್ನು ನೆಲದ ಮೇಲೆ ಬೆಳೆಯಲು ಬಿಡಬೇಡಿ. ಕೋಲಿನ ಸಹಾಯದಿಂದ ಅದನ್ನು ಮೇಲಕ್ಕೆ ಕಟ್ಟಿಕೊಳ್ಳಿ.
>> ಮನಿ ಪ್ಲಾಂಟ್ ಅನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. ಏಕೆಂದರೆ ಈ ವಿಷಯ ಯಾವಾಗಲೂ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ.
>> ಇದೇ ವೇಳೆ, ಶುಕ್ರವಾರದಂದು ಮನಿ ಪ್ಲಾಂಟ್‌ನಲ್ಲಿ ಕೆಂಪು ಬಣ್ಣದ ದಾರ ಅಥವಾ ರಿಬ್ಬನ್ ಅನ್ನು ಕಟ್ಟಿದರೆ, ಅದು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಪ್ರೀತಿ ಮತ್ತು ಪ್ರೇಮದ ಜೊತೆಗೆ, ಕೆಂಪು ಬಣ್ಣವನ್ನು ಖ್ಯಾತಿ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅದರ ಮೇಲೆ ಕೆಂಪು ಬಣ್ಣದ ರಿಬ್ಬನ್ ಅಥವಾ ದಾರವನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ-Shukra Gochar 2022: ಮುಂದಿನ 26 ದಿನಗಳವರೆಗೆ ಈ 5 ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ
ಮನಿ ಪ್ಲಾಂಟ್ ಗೆ ಸಂಬಂಧಿಸಿದ ಈ ನಿಯಮಗಳನ್ನು ನೀವು ಅನುಸರಿಸಿದರೆ, ಮನಿ ಪ್ಲಾಂಟ್ ಉತ್ತಮವಾಗಿ ಬೆಳೆಯುತ್ತದೆ ಮತ್ತು ಉತ್ತಮವಾಗಿ ಬೆಳೆದ ಈ ಗಿಡ ತನ್ನಂತೆಯೇ ನಿಮ್ಮ ಮನೆಯಲ್ಲಿನ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ.
ಇದನ್ನೂ ಓದಿ-Romantic People: ಈ ತಿಂಗಳಲ್ಲಿ ಜನಿಸಿದವರು ಸಖತ್ ರೊಮ್ಯಾಂಟಿಕ್ ಆಗಿರ್ತಾರೆ!
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.