ಇತ್ತೀಚಿನ ದಿನಗಳಲ್ಲಿ ಉಗುರುಗಳ ಅಂದ ಹೆಚ್ಚಿಸುವ ಅದೆಷ್ಟೋ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಆದರೆ ಮನೆಯಲ್ಲಿಯೇ ಸಿಗುವ ವಸ್ತುಗಳ ಬಗ್ಗೆ ನಮಗೆ ತಿಳಿದಿರುವುದು ಸ್ವಲ್ಪ ಕಡಿಮೆ. ಇನ್ನು ಹೆಣ್ಣುಮಕ್ಕಳಿಗೆ ಉಗುರಿನ ಸೌಂದರ್ಯ ಕಾಪಾಡಿಕೊಳ್ಳುವುದೆಂದರೆ ಇಷ್ಟ. ಈ ನಿಟ್ಟಿನಲ್ಲಿ ಉಗುರಿನ ಆರೋಗ್ಯ ಜೊತೆಗೆ ಸೌಂದರ್ಯವನ್ನು ಕಾಪಾಡಲು ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.
ಇದನ್ನು ಓದಿ: Mangal Rashi Parivartan 2022: ಮೇ 17 ರಂದು ಮೀನ ರಾಶಿಗೆ ಮಂಗಳನ ಪ್ರವೇಶ, ಯಾವ ರಾಶಿಗೆ ಏನು ಲಾಭ-ನಷ್ಟ?
ಪ್ರತಿಯೊಬ್ಬರ ಮನೆಯಲ್ಲಿ ನಿಂಬೆಹಣ್ಣುಗಳು ಇದ್ದೇ ಇರುತ್ತದೆ. ನಿಂಬೆರಸದಲ್ಲಿರುವ ವಿಟಮಿನ್ ಸಿ ಅಂಶವು ಉಗುರಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಂಬೆಹಣ್ಣನ್ನು ಎರಡು ಭಾಗ ಮಾಡಿಕೊಂಡು ಕೈ ಹಾಗೂ ಕಾಲಿನ ಉಗುರಿನ ಮೇಲೆ ಚೆನ್ನಾಗಿ ಉಜ್ಜಬೇಕು. ಆ ಬಳಿಕ ಬಿಸಿನೀರಿನಲ್ಲಿ ತೊಳೆದುಕೊಳ್ಳಬೇಕು. ಇದು ಉಗುರಿನ ಹೊಳಪು ಹೆಚ್ಚುವಂತೆ ಮಾಡಿ ಸ್ವಚ್ಛಗೊಳಿಸಿ ಬ್ಯಾಕ್ಟೀರಿಯಾದಿಂದ ಮುಕ್ತಿ ನೀಡುತ್ತದೆ.
ಇನ್ನು ಶುದ್ಧ ತೆಂಗಿನೆಣ್ಣೆಯೂ ಸಹ ಉಗುರಿನ ಆರೋಗ್ಯ ಕಾಪಾಡುವಲ್ಲಿ ಸಹಾಯಕ. ಉಗುರು ಬೆಚ್ಚಗೆ ಮಾಡಿದ ತೆಂಗಿನ ಎಣ್ಣೆಯನ್ನು ಉಗುರುಗಳ ಮೇಲೆ ಮಸಾಜ್ ಮಾಡಬೇಕು. ಈ ಎಣ್ಣೆಯಲ್ಲಿ ವಿಟಮಿನ್ ಇ ಅಂಶವಿರುವುದರಿಂದ ಉಗುರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಮಲಗುವ ಮೊದಲು ತೆಂಗಿನೆಣ್ಣೆಯಲ್ಲಿ ಉಗುರಿಗೆ ಮಸಾಜ್ ಮಾಡಿಕೊಳ್ಳಿ ಇದು ಸೌಂದರ್ಯದ ಜೊತೆಗೆ ಕಾಲಿನ ಸಮಸ್ಯೆಗಳಿಗೂ ಪರಿಹಾರದಂತೆ ಕೆಲಸ ಮಾಡುತ್ತದೆ.
ಕೆಲವರಿಗೆ ಉಗುರಿನ ಬೆಳವಣಿಗೆಯಲ್ಲೇ ಸಮಸ್ಯೆ ಇರುತ್ತದೆ. ಒಬ್ಬರಿಗೆ ಉಗುರು ಬೇಗನೆ ತುಂಡಾಗುತ್ತದೆ. ಇನ್ನೂ ಕೆಲವರಿಗೆ ಸಿಪ್ಪೆ ಏಳುತ್ತಿರುತ್ತದೆ. ಇಂಥ ತೊಂದರೆ ಇರುವವರು ಉಗುರಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಬೇಕು. ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಉಗುರು ಹಾಗೂ ಉಗುರಿನ ಸುತ್ತಲೂ ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಬೆಳಿಗ್ಗೆ ಬಿಸಿ ನೀರಿನಿಂದ ತೊಳೆಯಿರಿ.
ಇದನ್ನು ಓದಿ: Ashoka Tree for Diabetes: ಬ್ಲಡ್ ಶುಗರ್ ನಿಯಂತ್ರಣಕ್ಕೆ ಸರಳ ಮನೆ ಮದ್ದು, ತಕ್ಷಣ ಸಿಗಲಿದೆ ಪರಿಹಾರ
ಜೇನುತುಪ್ಪಹಾಗೂ ನಿಂಬೆರಸವನ್ನು ಮಿಶ್ರಣ ಮಾಡಿ ಉಗುರಿಗೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಬೇಕು. ನಂತರ ಅದನ್ನು ಬಿಸಿನೀರಿನಿಂದ ತೊಳೆಯಬೇಕು. ಹೀಗೆ ವಾರದಲ್ಲಿ 2 ಬಾರಿ ಮಾಡುವುದರಿಂದ ಉಗುರು ಸದೃಢವಾಗಿ ಬೆಳೆಯುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.